ಹೊರಟ್ಟಿಯವರನ್ನು ಆಯ್ಕೆ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಶಿಕ್ಷಕರ ಸಂಕಲ್ಪ

varthajala
0

   ವಿಶ್ವ ದಾಖಲೆ ನಿರ್ಮಿಸಲು ಶಿಕ್ಷಕರ ಸಂಕಲ್ಪ

ಹುಬ್ಬಳ್ಳಿ: ಮೇ ೨೧ ಮುಂಬರುವ ಜೂನ್ ೧೩ರಂದು ನಡೆಯಲಿರುವ ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ೮ನೇ ಬಾರಿಗೆ ಸ್ಪರ್ಧಿಸಿರುವ ಬಸವರಾಜ ಹೊರಟ್ಟಿಯವರನ್ನು ಆಯ್ಕೆ ಮಾಡುವದರ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಶಿಕ್ಷಕರು ಸಂಕಲ್ಪ ಮಾಡಿದರು. ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ನಡೆದ ಶಿಕ್ಷಕರ ಅಭೂತಪೂರ್ವ ಸಮ್ಮೇಳನದಲ್ಲಿ ೨೦ಕ್ಕೂ ಹೆಚ್ಚು ಶಿಕ್ಷಕರು ಒಕ್ಕೋರಲಿನಿಂದ ಈ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಸಂಕಲ್ಪ ಮಾಡಿದರು.


ಕಳೆದ ೪೨ ವರ್ಷಗಳಿಂದ ಶಿಕ್ಷಕರ ಹಾಗೂ ಶಿಕ್ಷಣ ರಂಗದ ಸಮಸ್ಯೆಗಳ ಪರಿಹಾರಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡು ಕೆಲಸ ಮಾಡಿದ್ದರಿಂದ ಶಿಕ್ಷಕರನ್ನು ೭ ಸಲ ಆಯ್ಕೆ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಬಾಕಿ ಇರುವ ಸಮಸ್ಯೆಗಳ ಪರಿಹಾರ ಬಸವರಾಜ ಹೊರಟ್ಟಿಯವರಿಂದ ಮಾತ್ರ ಸಾಧ್ಯ ಎಂಬುದು ಶಿಕ್ಷಕ ಸಮುದಾಯಕ್ಕೆ ಮನದಟ್ಟಾಗಿದೆ. ಯಾವದೇ ಆಶೆ ಆಮಿಸೆಗಳಿಗೆ ಒಳಗಾಗದೇ ಶಿಕ್ಷಕರ ಸೇವೆ ಮಾಡಿದ ಅವರ ನಿರಂತರ ಸೇವೆಗೆ ಕೃತಜ್ಞತೆ  ಸಲ್ಲಿಸಿ ಅವರಿಗೆ ಪ್ರಥಮ ಪ್ರಾಶಸ್ತö್ಯದ ಮತವನ್ನು ನೀಡುವದರ ಮೂಲಕ ಶಿಕ್ಷಕರು ತಮ್ಮನ್ನು ತಾವು ಗೆಲ್ಲಿಸಿಕೊಳ್ಳಬೇಕೆಂದು ಬಸವರಾಜ ಹೊರಟ್ಟಿಯವರನ್ನು ಬೆಂಬಲಿಸಿ ಮಾತನಾಡಿದ ಎಲ್ಲ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಹೊರಟ್ಟಿಯವರು ತಾವು ಮಾಡಿದ ಕೆಲಸಗಳ ಬಗ್ಗೆ ಹಾಗೂ ಮಾಡಬೇಕೆಂದಿರುವ ಕೆಲಸಗಳ ಬಗ್ಗೆ ಕಿರು ಹೊತ್ತಿಗೆ “ಸಂಘರ್ಷ-ಹೋರಾಟ-ಸಾಧನೆ” ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಾ ಶಿಕ್ಷಕರಿಂದ ಶಾಸಕ, ಮಂತ್ರಿ ಹಾಗೂ ಸಭಾಪತಿಯಾಗಲು ಕಾರಣೀಭೂತರೇ ಶಿಕ್ಷಕರೆಂಬುದನ್ನು ತಾವು ಜೀವನದಲ್ಲೇ ಮರೆಯಲು ಸಾಧ್ಯವಿಲ್ಲ. ಅವರ ಋಣ ತೀರಿಸುವ ಕೆಲಸವನ್ನು ಕಾಯಾ ವಾಚಾ ಮನಸ್ಸಿನಿಂದ ಮಾಡುತ್ತಾ ಬಂದಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡಲು ತಮ್ಮನ್ನು ಬೆಂಬಲಿಸುವದರ ಮೂಲಕ ಚುನಾವಣೆಯಲ್ಲಿ ಪಾವಿತ್ರö್ಯವನ್ನು ಕಾಪಾಡಿಕೊಂಡು ತಮ್ಮ ಪ್ರಥಮ ಪ್ರಾಶಸ್ತö್ಯದ ಮತ ನೀಡಲು ಕೋರಿದರು.




ಸಭೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಸಂಪೂರ್ಣ ಬೆಂಬಲ ಬಸವರಾಜ ಹೊರಟ್ಟಿಯವರಿಗಿದ್ದು,  ಅವರ ಆಯ್ಕೆ ನಿಶ್ಚಿತವೆಂದು ತಿಳಿಸಿದರು. ಹೆಚ್.ಪಿ. ಬಣಕಾರ, ಬಸವರಾಜ ಧಾರವಾಡ, ಶ್ಯಾಮ ಮಲ್ಲನಗೌಡರ, ಅಬ್ದುಲ್ ಖಾದರ ಮೆಣಸಗಿ, ಬಾಸೂರ, ಎಚ್.ಎಂ. ಅಗಡಿ, ಎಂ.ಪಿ. ಗೌಡರ, ರಾಜಣ್ಣಾ ಕೊರವಿ, ಜಗದೀಶ ದ್ಯಾವಪ್ಪನವರ, ಜ್ಯೋತಿ ಪಾಟೀಲ, ಸರ್ವಮಂಗಳಾ ಕುದರಿ, ಎಸ್.ಆರ್.ಕಲಾದಗಿ, ಎಸ್.ವಾಯ್. ಗುಡಾಡಿ, ಕಲಗೇರಿ, ಎಂ.ಎನ್. ಸವಣೂರ, ಶಾಹಿನ್ ನಧಾಪ್, ಎನ್.ಎಸ್. ಗೋವಿಂದರಡ್ಡಿ, ವಿಶ್ವನಾಥ ಕೊರವಿ, ಎನ್.ವಿ. ಸಂಗಾಪೂರ, ಬಸವರಾಜ ತಲ್ಲೂರ, ಡಿ.ಬಿ. ಮಾಸೂರ, ಜಿಲ್ಲಾ ಹಾಗೂ ತಾಲೂಕಾ ಅಧ್ಯಕ್ಷರುಗಳು ಭಾಗವಹಿಸಿ ಬಸವರಾಜ ಹೊರಟ್ಟಿಯವರನ್ನು ಬೆಂಬಲಿಸಿ  ಮಾತನಾಡಿದರು. ಎಂ.ಎಸ್. ಮುರಗೋಡಮಠ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ವಿ.ಎಸ್ ಹುದ್ದಾರ ಕಾರ್ಯಕ್ರಮ ನಿರೂಪಿಸಿದರು, ಸಂಗಮೇಶ ಹಡಪದ ವಂದನಾರ್ಪಣೆಗೈದರು.  

Post a Comment

0Comments

Post a Comment (0)