ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಪುರವರ ದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ಮಕ್ಕಳ ಹಾಜರಿಂದ ಉತ್ತಮ ರೀತಿಯಲ್ಲಿ ಶಾಲೆ ಆರಂಭಗೊಂಡಿದ್ದು. ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗ ಮಕ್ಕಳಿಂದ ವಿಭಿನ್ನ ರೀತಿಯ ಕೂಗುಗಳ ಮೂಲಕ ಹಾಗೆ ಜನರಲ್ಲಿ ಜಾಗೃತಿ ಮೂಡಿಸುತ್ತ ಶಾಲಾ ಮಕ್ಕಳಿಂದ ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ, ಎಂಬ ಕೂಗುಗಳಿಂದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೂಡಿಸಲಾಯಿತು.
ಈ ವೇಳೆಯಲ್ಲಿ ಶಾಲಾ ಮಕ್ಕಳು ಬಸ್ಟಾಂಡ್, ಹಾಗೂ ಪ್ರಮುಖ ಬೀದಿಗಳಲ್ಲಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿ ಮಾಡಬೇಡಿ, ಸರ್ಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣ ನಿಮಗಾಗಿ, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ, ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.
ಈ ವೇಳೆಯಲ್ಲಿ ಮುಖ್ಯ ಶಿಕ್ಷಕರಾದ ಮಹೇಶ್ ಬಾಬು ಮಾತನಾಡಿ 2022 -23 ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಲಾಖೆಯ ಸರ್ಕಾರದ ಸುತ್ತೋಲೆಯಂತೆ ಶಾಲಾ ಪ್ರಾರಂಭೋತ್ಸವ ಹಾಗೂ ಕಲಿಕಾ ಚೇತರಿಕೆ ಕಾರ್ಯಕ್ರಮ ಹಾಗೂ ಮಳೆಬಿಲ್ಲು ಕಾರ್ಯಕ್ರಮಗಳನ್ನು ಇಂದು ನಮ್ಮ ಶಾಲೆಯಲ್ಲಿ ವಿಭಿನ್ನವಾಗಿ ಪ್ರಾರಂಭ ಮಾಡುತ್ತಿದ್ದು ಎರಡು ಮೂರು ವರ್ಷದಿಂದ ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು ಆ ಕಾರಣದಿಂದ ಈ ಹಿಂದೆ ಆಗಿರುವಂತಹ ನಷ್ಟವನ್ನು ಈ ಒಂದು ತಿಂಗಳಲ್ಲಿ ಆ ನಷ್ಟವನ್ನು ಚೇತರಿಸಿಕೊಳ್ಳುವುದಕ್ಕೆ ಇಲಾಖೆ ಇಂತಹ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು ವಿದ್ಯಾರ್ಥಿಗಳು ಇಂದಿನ ಪುನರ್ ಮನನ ಮಾಡಿಕೊಳ್ಳುವುದಕ್ಕೆ ಒಳ್ಳೆಯ ಸದಾವಕಾಶ ಸಿಗಲಿದೆ. ಈ ಒಂದು ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಕೂಡ ನಮ್ಮ ಎಸ್ಡಿಎಂಸಿಯ ಸಹಕಾರ, ಗ್ರಾಮಸ್ಥರ ಸಹಕಾರ, ಪೋಷಕರ ಸಹಕಾರ ದಿಂದ ಹಾಗೂ ನಮ್ಮ ಸಿಬ್ಬಂದಿಗಳ ಸಹಕಾರದಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಉತ್ತಮವಾದ ಮಾರ್ಗದರ್ಶನವನ್ನು ನೀಡಿ ಮತ್ತು ಈ ನಮ್ಮ ಶಾಲಾ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಸಹ ಪ್ರಚಾರ ಮಾಡಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವುದಕ್ಕೆ ಜೊತೆಗೆ ಈ ವರ್ಷದಿಂದ ಎಂಟನೇ ತರಗತಿಗೆ ಆಂಗ್ಲ ಮಾಧ್ಯಮ ಕೂಡ ಇದ್ದು ಎರಡು ವರ್ಷದ ಹಿಂದೆಯೇ ಸರ್ಕಾರದಿಂದ ಮಂಜೂರು ಮಾಡಿದ್ದು ಕೋವಿಡ್ ಕಾರಣ ಯಾರು ಕೂಡ ದಾಖಲಾಗಿರಲಿಲ್ಲ ಈ ವರ್ಷ ಎಲ್ಲಾ ಕಡೆ ಪ್ರಚಾರ ಮಾಡಿದ್ದು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿ ಒಳ್ಳೆಯ ವಿದ್ಯಾಭ್ಯಾಸ ಜೊತೆಗೆ ಒಳ್ಳೆಯ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು ಎಂದರು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಶಾಲೆಯಿಂದ ಯಾರನೂಕೂಡ ವಂಚಿತರಾಗಿ ಮಾಡಬೇಡಿ, ಎಲ್ಲ ಪೋಷಕರ ಮನವೊಲಿಸಿ ಗ್ರಾಮೀಣಾ ಭಾಗದ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಎಲ್ಲರೂ ಸಹಕರಿಸಬೇಕೆಂದು ಈ ನಮ್ಮ ಶಾಲೆಯ ಪರವಾಗಿ ಮಾಡಿಕೊಳ್ಳುತ್ತೇವೆ ಎಂದರು. ಜೊತೆಗೆ
ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸಿಕೊಡಿ ನಿಮ್ಮ ಮಕ್ಕಳು ಮುಂದೆ ಉತ್ತಮ ವಿದ್ಯಾವಂತರಾಗಿ ಶಾಲೆಗೆ ಊರಿಗೆ ಮತ್ತು ನಿಮಗೆ ಉತ್ತಮ ಕೀರ್ತಿ ತರುತ್ತಾರೆ ಎಂದರು.
ವರದಿ:ನಾಗೇಶ್ ಜೀವಾ ಹೆಚ್ ಟಿ ಹಳ್ಳಿ