ಇತ್ತೀಚೆಗೆ ನಗರದಲ್ಲಿ ಬಿಎಂಟಿಸಿ ಬಸ್ಸುಗಳು ಬೇಸಿಗೆಯ ಬಿಸಿಲಿಗೆ ತಾಳಲಾರದೆ ಧಗಧಗನೆ ಬೆಂಕಿ ಹತ್ತಿಕೊಂಡು ಉರಿದಿರುವುದು ನಗರದ ಜನತೆಗೆ ತಿಳಿದಿರುವ ವಿಚಾರವೇ ಸರಿ. ಆದರೆ ಬಸ್ಸುಗಳ ತಾಂತ್ರಿಕ ದೋಷವನ್ನು ಕಂಡುಹಿಡಿದು ಸರಿಪಡಿಸುವುದನ್ನು ಬಿಟ್ಟು ಕೆಳಹಂತದ ನೌಕರರು ಹಾಗೂ ತಾಂತ್ರಿಕ ವರ್ಗದ ಸಿಬ್ಬಂದಿಗಳ ಮೇಲೆ ದಂಡ ಪ್ರಹಾರ ಮಾಡುತ್ತಿದೆ ಎಂಬುದಾಗಿ ಕೇಳಿಬರುತ್ತಿದೆ.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ. ಬಿಎಂಟಿಸಿ ನಿಗಮವು ನೌಕರರಿಗೆ ಸರಿಯಾಗಿ ಸಂಬಳವನ್ನು ಸಮಯಕ್ಕೆ ಸರಿಯಾಗಿ ಕೊಡುತ್ತಿಲ್ಲವಾದರೂ ಅಂತಹ ಕೆಳವರ್ಗದ ಸಿಬ್ಬಂದಿಗಳ ಮೇಲೆ ದಂಡದ ರೂಪದಲ್ಲಿ ಬರೆ ಹಾಕುತ್ತಿರುವುದು ಸಂಬಂಧಪಟ್ಟ ಇಲಾಖೆ ಎಮ್ ಡಿ ರವರಿಗೆ ತಿಳಿದಿದೆಯೋ ಇಲ್ಲವೋ, ಸಚಿವ ಶ್ರೀರಾಮುಲು ಕಣ್ಣುಮುಚ್ಚಿ ಕಂಡರೂ ಕಾಣದಂತೆ ಇದ್ದಾರೆಯೋ ಎಂಬ ಗುಸುಗುಸು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಈ ಕೂಡಲೇ ಸಂಬಂಧಪಟ್ಟ ಸಂಸ್ಥೆಯ ಎಮ್ ಡಿ ಆಗಲಿ, ಸಚಿವ ಶ್ರೀರಾಮುಲು ಆಗಲೇ ಎಚ್ಚೆತ್ತುಕೊಂಡು ಕೆಳವರ್ಗದ ನೌಕರರ ಮೇಲೆ ಆಗುತ್ತಿರುವ ದಬ್ಬಾಳಿಕೆ ದಂಡ ಪ್ರಹಾರವನ್ನು ತಪ್ಪಿಸಬೇಕಾಗಿ ಕೆಳವರ್ಗದ ನೌಕರರ ಅಳಲು.