ಬೆಂಗಳೂರು, ಮೇ 11 (ಕರ್ನಾಟಕ ವಾರ್ತೆ) : ಬೇಕರಿ ತರಬೇತಿ ಕೇಂದ್ರ, ವಿಸ್ತರಣಾ ನಿರ್ದೇಶನಾಲಯದಿಂದ ಹದಿನಾಲ್ಕು ವಾರಗಳ ಬೇಕರಿ ಟೆಕ್ನಾಲಜಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ಕನಿಷ್ಟ ಎಸ್.ಎಸ್.ಎಲ್.ಸಿ. (ಹತ್ತನೇ ತರಗತಿ) ಪಾಸ್/ಫೇಲ್ ಆಗಿರಬಹುದು. ನಿಗಧಿತ ಅರ್ಜಿ ಪಾರಂಗಳನ್ನು ರೂಪಾಯಿ 10-00 (ಹತ್ತು) ಸಂದಾಯಿಸಿ, ಬೇಕರಿ ತರಬೇತಿ ಕೇಂದ್ರ, ಕೃಷಿ ವಿಶ್ವ ವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು-560024, ಇಲ್ಲಿಂದ ಪಡೆದುಕೊಳ್ಳಬಹುದು. ಅರ್ಜಿಯನ್ನು ಪಡೆಯಲು ಹಾಗೂ ಭರ್ತಿಮಾಡಿದ ಅರ್ಜಿಯನ್ನು ಹಿಂದಿರುಗಿಸಲು ಕೊನೆಯ ದಿನಾಂಕ ಮೇ 23, .2022 ರಂದು 4.00 ಗಂಟೆ. ಅರ್ಜಿಗಳನ್ನು ಸಂಯೋಜಕರು, ಬೇಕರಿ ತರಬೇತಿ ಕೇಂದ್ರ, ಕೃಷಿ ವಿಶ್ವ ವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು-560 024, ಈ ವಿಳಾಸಕ್ಕೆ ತಲುಪಿಸಬೇಕು.
ಹೆಚ್ಚಿನ ವಿವರಗಳಿಗೆ ಸಂಯೋಜಕರು, ಬೇಕರಿ ತರಬೇತಿ ಕೇಂದ್ರ, ವಿಸ್ತರಣಾ ನಿರ್ದೇಶನಾಲಯ, ಕೃಷಿವಿಶ್ವವಿದ್ಯಾನಿಲಯ, ಹೆಬ್ಬಾಳ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 080-23513370 ಹಾಗೂ ಇ-ಮೇಲ್- www.bteresults.net ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.