ಬಳ್ಳಾರಿ ಮೇ 10.AIDSO ಜಿಲ್ಲಾ ಸಮಿತಿಯಿಂದ ಪ್ರಾಧ್ಯಾಪಕರ ನೇಮಕಾತಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಖಂಡಿಸಿ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಮಾಡಲಾಯಿತು. ಅಕ್ರಮದ ಸೂಕ್ತ ತನಿಖೆ ಹಾಗೂ ಶಿಕ್ಷೆ ಖಾತ್ರಿ ಪಡಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಮಾನ್ಯ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ AIDSO ಜಿಲ್ಲಾ ಕಾರ್ಯದರ್ಶಿ ರವಿಕಿರಣ್. ಜೆ.ಪಿ ಅವರು ಮಾತನಾಡುತ್ತಾ... ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಈ ಅಕ್ರಮದಲ್ಲಿ ಭಾಗಿಯಾಗಿದ್ದರು ಎನ್ನಲಾದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರನ್ನು (ಮೌಲ್ಯಮಾಪನ) ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪರೀಕ್ಷೆಗೆ ಸಿದ್ಧಪಡಿಸಿದ್ದ ಭೂಗೋಳಶಾಸ್ತ್ರ ವಿಷಯದ 18 ಪ್ರಶ್ನೆಗಳು ಸೋರಿಕೆ ಆಗಿದ್ದವು. ಈಗ ಅರ್ಥಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಇಂಗ್ಲೀμï ಪ್ರಶ್ನೆ ಪತ್ರಿಕೆಗಳೂ ಸೋರಿಕೆಯಾಗಿವೆ ಎಂಬ ಅನುಮಾನ ವ್ಯಕ್ತವಾಗಿದೆ. ಶೈಕ್ಷಣಿಕ ರಂಗದಲ್ಲಿ ಹಾಗೂ ನೇಮಕಾತಿ ವಿಚಾರದಲ್ಲಿ ಈ ರೀತಿಯ ಅಕ್ರಮಗಳು ನಡೆಯುತ್ತಿರುವುದು ಅತ್ಯಂತ ವಿಷಾದನೀಯ ಮತ್ತು ನೋವಿನ ಸಂಗತಿಯಾಗಿದೆ. ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದಾತ್ತ ವೃತ್ತಿಗೆ ಭ್ರಷ್ಟಾಚಾರದ ಮೂಲಕ ನೇಮಕಾತಿ ಪಡೆದರೆ ಅದು ಅತ್ಯಂತ ಖೇದಕರ. ಅಂತಹವರಿಂದ ಯಾವ ರೀತಿಯ ಬೋಧನೆ ನಿರೀಕ್ಷಿಸಲು ಸಾಧ್ಯ? ಅವರು ಯಾವ ರೀತಿ ವಿದ್ಯಾರ್ಥಿಗಳ ವ್ಯಕ್ತಿತ್ವ, ಯೋಚನೆ ಹಾಗೂ ಜ್ಞಾನವನ್ನು ಬೆಳೆಸಲು ಸಾಧ್ಯ? ಯಾವ ನೈತಿಕತೆಯನ್ನು ಬಿತ್ತಲು ಸಾಧ್ಯ? ಪ್ರಸ್ತುತ ಅಕ್ರಮದಲ್ಲಿ, ಪತ್ರಿಕೆಗಳ ವರದಿ ಅನುಸಾರ ಹಲವು ವಿವಿಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿರುವವರು, ಉಪನ್ಯಾಸಕರು ತೊಡಗಿದ್ದಾರೆ. ಶೈಕ್ಷಣಿಕ ಜವಾಬ್ದಾರಿ ಹೊಂದಿರುವವರೇ ಇಂತಹ ಅಕ್ರಮಗಳಿಗೆ ಪುಷ್ಠಿ ನೀಡಿದರೆ, ಇನ್ನು ಶಿಕ್ಷಣವನ್ನು ಉಳಿಸುವವರು ಯಾರು ಎಂಬ ಆತಂಕ ಮೂಡುತ್ತದೆ. ಆತಂಕಗಳನ್ನು ವ್ಯಕ್ತಪಡಿಸುತ್ತಾ, ಕೂಡಲೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಬಗೆಹರಿಸಬೇಕೆಂದು ಎಂದು ಹೇಳಿದರು.ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್‍ಓ ಜಿಲ್ಲಾ ಉಪಾಧ್ಯಕ್ಷರು ಜೆ.ಸೌಮ್ಯ ಅವರು ಮಾತನಾಡಿ ಈಗ ಭಾಗಿಯಾಗಿದ್ದವರನ್ನು ಬಂಧಿಸಿ, ಜೈಲಿಗೆ ಹಾಕಲಾಗಿದೆ. ಇದು ಇಲ್ಲಿಗೆ ಕೊನೆಯಗಬಾರದು. ಅವರಿಗೆ ಸರಿಯಾದ ಶಿಕ್ಷೆ ಆಗಬೇಕು. ಮತ್ತು, ಮೀನುಗಳನ್ನು ಹಿಡಿದು ತಿಮಿಂಗಲಗಳನ್ನು ಬಿಟ್ಟಂತೆಯು ಆಗಬಾರದು. ಈ ಅಕ್ರಮದ ಕುರಿತು ಸರಿಯಾದ ತನಿಖೆ ನಡೆಸಿ, ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಿ, ಸೂಕ್ತ ಶಿಕ್ಷೆ ನೀಡಬೇಕು ಎಂದು ಎಲ್ಲಾ ವಿದ್ಯಾರ್ಥಿಗಳು ಮತ್ತು AIDSO ಆಗ್ರಹಿಸುತ್ತದೆ ಎಂದು ಹೇಳಿದರು.
ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು AIDSO ಸೆಕ್ರೆಟರಿಯೇಟ್ ಸದಸ್ಯರು ಕಂಬಳಿ ಮಂಜುನಾಥ ವಹಿಸಿದ್ದರು. ಈ ಸಂದರ್ಭದಲ್ಲಿ AIDSO ಜಿಲ್ಲಾ ಕಛೇರಿ ಕಾರ್ಯದರ್ಶಿ ಕೆ.ಈರಣ್ಣ, ಸೆಕ್ರೆಟರಿಯೇಟ್ ಸದಸ್ಯರು ಎಮ್.ಶಾಂತಿ, ಅನುಪಮಾ, ಸಿದ್ದು, ನಿಹಾರಿಕಾ, ಪ್ರಮೋದ್ ಮತ್ತು ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.