ಬಳ್ಳಾರಿ,ಏ.23: ಅಂತರಾಷ್ಟ್ರೀಯ ಯೋಗ ದಿನದ ಮುನ್ನ “ಕೌಂಟ್ ಡೌನ್ ಡೇ' ಅನ್ನು ಏ.25 ರಂದು ಹಂಪಿಯ ಆನೆಸಾಲು ಪಾರಂಪರಿಕ ತಾಣದಲ್ಲಿ ಮಾನ್ಯ “ಸಂವಹನ ಸಚಿವಾಲಯ' ಅದೇಶದ ಮೇರೆಗೆ ಬಳ್ಳಾರಿ ಅಂಚೆ ವಿಭಾಗದಿಂದ ಆಯೋಜಿಸಲಾಗುತ್ತಿದೆ ಎಂದು ಅಂಚೆ ಅಧೀಕ್ಷಕರು ವಿ.ಎಲ್.ಚಿತಕೋಟೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ವಲಯದ ಮಾನ್ಯ ಚೀಫ್ ಪೆÇೀಸ್ಟ್ ಮಾಸ್ಟರ್ ಜನರಲ್ ಅವರು ಸುಮಾರು ಐದು ಪಾರಂಪರಿಕ ತಾಣಗಳನ್ನು ಹಂಪಿ, ಬಾದಾಮಿ, ಮೈಸೂರು ಅರಮನೆ, ಗೋಲ್ ಗುಂಬುಜ್ ಮತ್ತು ಬೇಲೂರು ಗುರುತಿಸಲಾಗಿದ್ದು, ಬಳ್ಳಾರಿ ಅಂಚೆ ವಿಭಾಗದ ವಿಜಯನಗರ ಜಿಲ್ಲೆಯ ಹಂಪಿಯೂ ಕೂಡ ಇದರಲ್ಲಿ ಒಂದಾಗಿದೆ ಮಾನ್ಯ ಕೇಂದ್ರ ಸಂವಹನ ಸಭೆಯ ಹಾಗೂ ಸಂವಹನ ಸಚಿವಾಲಯದ ಮಾನ್ಯ ರಾಜ್ಯ ಸಚಿವರು ನೇರ ಪ್ರಸಾರದಲ್ಲಿ ಈ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲಿದ್ದು ದೇಶದ ಎಲ್ಲ ಅಂಚೆ ನೌಕರರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.