"ಕರ್ನಾಟಕ ಸಂಘ ಕತಾರ್" ನ ವಿನಂತಿಗೆ ಓಗೊಟ್ಟು ತಮ್ಮ ಶಾಲೆಯಲ್ಲಿ ಕನ್ನಡವನ್ನು ದ್ವಿತೀಯ ಹಾಗೂ ತೃತೀಯ ಭಾಷೆಯಾಗಿ ಪ್ರಾರಂಭಿಸಿದ ಡಿಪಿಎಸ್ ಮೊನಾರ್ಕ್ ಇಂಟರ್ನ್ಯಾಷನಲ್ ಶಾಲೆಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರ, ಕರ್ನಾಟಕ ಸರ್ಕಾರವು ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ, ಕರ್ನಾಟಕ ಸಂಘ, ಕತಾರ್ ನ ಕಾರ್ಯಕಾರಿ ಸಮಿತಿಯು ಶಾಲೆಯ ಮುಖ್ಯಸ್ಥರಿಗೆ ಪತ್ರವನ್ನು ಹಸ್ತಾಂತರಿಸಿತು.
ಸಭೆಯಲ್ಲಿ, ಡಿ ಪಿ ಎಸ್ ಮೊನಾರ್ಕ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಅಧ್ಯಕ್ಷರು ಮತ್ತು ಪ್ರಾಂಶುಪಾಲರು ತಮ್ಮ CBSE ಪಠ್ಯಕ್ರಮದಲ್ಲಿ ಕನ್ನಡವನ್ನು ಅಳವಡಿಸಲು ಸಹಾಯ ಮಾಡಿ ಹಾಗೂ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಅಗತ್ಯವಿರುವ ಕನ್ನಡ ವರ್ಕ್‌ಬುಕ್‌ಗಳನ್ನು ವ್ಯವಸ್ಥೆಗೊಳಿಸಲು ನೆರವಾದ ಕರ್ನಾಟಕ ಸಂಘದ ಬೆಂಬಲವನ್ನು ಶ್ಲಾಘಿಸಿದರು. KSQ ಅಧ್ಯಕ್ಷರಾದ ಶ್ರೀ ಮಹೇಶ್ ಗೌಡ ಅವರು ಕನ್ನಡವನ್ನು ಪ್ರಾರಂಭಿಸುವ ವಿನಂತಿಯನ್ನು ಸ್ವೀಕರಿಸಿದ್ದಕ್ಕಾಗಿ ಶಾಲಾ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ಅರ್ಪಿಸಿದರು ಹಾಗೂ ಈ ಕಾರ್ಯವನ್ನು ಹೀಗೆ ಮುಂದುವರಿಸಲು ತಮ್ಮ ನಿರಂತರ ಬೆಂಬಲವನ್ನು ಪುನರುಚ್ಚರಿಸಿದರು, ಪ್ರಸ್ತುತ ಮೊನಾರ್ಕ್ ಶಾಲೆಯು 8 ನೇ ತರಗತಿಯವರೆಗೆ ಕನ್ನಡ ಭಾಷೆಯನ್ನು ಪರಿಚಯಿಸಿದೆ. ಅಗತ್ಯವಿರುವ ವಿದ್ಯಾರ್ಥಿಗಳಿಗೆ ವಾರಾಂತ್ಯದ ಕನ್ನಡ ತರಗತಿ ಶಿಕ್ಷಕರ ತಂಡದಿಂದ ಕನ್ನಡ ಭಾಷಾ ತರಬೇತಿಯನ್ನು ಸಹ ಪಡೆಯಬಹುದು ಎಂದು KSQ ಅಧ್ಯಕ್ಷರು ಶಾಲಾ ಆಡಳಿತ ಮಂಡಳಿಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ, ಶ್ರೀ ಮಹೇಶ್ ಗೌಡ - ಅಧ್ಯಕ್ಷರು ಕೆಎಸ್‌ಕ್ಯೂ, ಶ್ರೀ ಸುಬ್ರಮಣ್ಯ ಹೆಬ್ಬಾಗಿಲು - ಉಪಾಧ್ಯಕ್ಷರು ಐಸಿಸಿ, ಶ್ರೀ ಸಂದೀಪ್ ರೆಡ್ಡಿ - ಉಪಾಧ್ಯಕ್ಷರು ಕೆಎಸ್‌ಕ್ಯೂ, ಶ್ರೀ ಸೇವಿಯಸ್ - ಸದಸ್ಯತ್ವ ಮತ್ತು ಮಾಧ್ಯಮ ಸಂಯೋಜಕರು ಕೆಎಸ್‌ಕ್ಯೂ, ಶ್ರೀ ಹಸನ್ ಚೌಗುಲೆ - ಅಧ್ಯಕ್ಷರು ಡಿಪಿಎಸ್ ಮೊನಾರ್ಕ್, ಶ್ರೀ ಯಾಸಿರ್ ನೈನಾರ್ - ಉಪಾಧ್ಯಕ್ಷರು ಡಿಪಿಎಸ್ ಮೊನಾರ್ಕ್, ಶ್ರೀ ರಾಕಿ ಫೆರ್ನಾಂಡಿಸ್ - ನಿರ್ದೇಶಕರು ಡಿಪಿಎಸ್ ಮೊನಾರ್ಕ್, ಶ್ರೀಮತಿ ಮೀನಲ್ ಬಕ್ಷಿ - ಪ್ರಿನ್ಸಿಪಾಲ್ ಡಿಪಿಎಸ್ ಮೊನಾರ್ಕ್, ಶ್ರೀಮತಿ ಮಧು ಉಪ್ಪಲ್ - ಮುಖ್ಯೋಪಾಧ್ಯಾಯಿನಿ (ಮಧ್ಯಮ ಮತ್ತು ಮಾಧ್ಯಮಿಕ ಶಾಲೆ) ಡಿಪಿಎಸ್ ಮೊನಾರ್ಕ್, ಶ್ರೀ ಸುಜಿತ್ ಕುಮಾರ್ - ಮುಖ್ಯೋಪಾಧ್ಯಾಯರು - (ಕೆಜಿ ಮತ್ತು ಪ್ರಾಥಮಿಕ) ಡಿಪಿಎಸ್ ಮೊನಾರ್ಕ್. ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.