KHELO INDIA : ಖೆಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಇತಿಹಾಸ ನಿರ್ಮಿಸಲಿದೆ

varthajala
0

ಬೆಂಗಳೂರು 29.04.2022 (ಕರ್ನಾಟಕ ವಾರ್ತೆ): ದೇಶಾದ್ಯಂತ ಕ್ರೀಡೆಯನ್ನು ಉತ್ತೇಜಿಸುವುದು ಹಾಗೂ ಖೇಲೋ ಇಂಡಿಯಾ ವಾರ್ಷಿಕ ಕ್ರೀಡೆಗಳು ಮತ್ತು ಸ್ಪರ್ಧೆಗಳಲ್ಲಿ ಯುವಕರ ಸಾಮೂಹಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ ಖೋಲೋ ಇಂಡಿಯಾ ಯೂನಿವರ್ಸಿಟಿ ಮುಖಾಂತರ ಖೋಲೋ ಇಂಡಿಯಾ ಯೂನಿವರ್ಸಿಟಿ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.










ಇಂದು ಕನಕಪುರದ ಜೈನ್ ಕಾಲೇಜು ಆವರಣದಲ್ಲಿ ನಡೆದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021ಗೆ ಕರ್ನಾಟಕದ  ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಸಾಕ್ಷಿಯಾದರು. ಕಬಡಿ ಪಂದ್ಯಾವಳಿ, ಯೋಗಾಸನ, ಫೆನ್ಸಿಂಗ್ ಗೇಮ್ ವೀಕ್ಷೀಸಿ, ವಿಜೇತರಿಗೆ ಪದಕಗಳನ್ನು ವಿತರಿಸಿದರು. ನಂತರ ಅವರು ಮಾತನಾಡಿದರು.


ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021 ರ 2 ನೇ ಆವೃತ್ತಿಯನ್ನು ಕರ್ನಾಟಕ ರಾಜ್ಯಕ್ಕೆ ಆಯೋಜಿಸುವ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಗೌರವಾನ್ವಿತ ರಾಜ್ಯಪಾಲರು, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು , ಭಾರತ ಕ್ರೀಡಾ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಜೈನ್ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸಹಯೋಗದೊಂದಿಗೆ ಈ ಆಟಗಳನ್ನು ಆಯೋಜಿಸುತ್ತದೆ ಅಭಿನಂದನಾರ್ಹ ಎಂದರು.

ಈ ಕಾರ್ಯಕ್ರಮದ ಮುಖಾಂತರ ಕ್ರೀಡೆಗೆ ಜನರು ಹೆಚ್ಚು ಒತ್ತು ನೀಡುವುದರ ಜೊತೆಗೆ ಕ್ರೀಡೆಗೂ ಆದ್ಯತೆ ನೀಡಲಿದ್ದಾರೆ. ಖೆಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನಿಂದಾಗಿ ಭಾರತದಲ್ಲಿ ಇತಿಹಾಸದಲ್ಲಿ ನಿರ್ಮಾಣವಾಗಲಿದೆ. ಪ್ರಧಾನ ಮಂತ್ರಿಗಳ ನೇತೃತ್ವದ ಸರ್ಕಾರ ಕಳೆದೆ ಏಳೆಂಟು ವರ್ಷಗಳಿಂದ ಕ್ರೀಡೆಯ ಮಹತ್ವ ಅರಿತು, ಕ್ರೀಡೆಗೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಫಿಟ್ ಇಂಡಿಯಾ ಆಂದೋಲನವು ಯುಜಿಸಿಯ ರಾಷ್ಟ್ರವ್ಯಾಪಿ ಅಭಿಯಾನವಾಗಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಹೆಚ್ಚಿನ ಪದಕ ಗಳಿಸಿದೆ. ವಿಶೇಷವಾಗಿ ದಿವ್ಯಾಂಗರು ಪ್ಯಾರಾಲಿಂಪಿಕ್ ಕ್ರೀಡಾಕೂಟದ ಇತಿಹಾಸದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಮೂಲಕ, ಭಾರತೀಯ ಪ್ಯಾರಾ ಕ್ರೀಡಾಪಟುಗಳು ಈ ಬಾರಿ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ 19 ಪದಕಗಳನ್ನು ಗೆದ್ದಿದ್ದಾರೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಅತಿದೊಡ್ಡ ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾ ಸ್ಪರ್ಧೆಯಾಗಿದೆ ಎಂದು ಹೇಳಿದರು.

ಸಚಿವರಾದ ಶ್ರೀ ಕೆ.ಸಿ.ನಾರಾಯಣಗೌಡ, ಶ್ರೀಮತಿ ಶಾಲಿನಿ ರಜನೀಶ್, ಜೈನ್ ವಿಶ್ವವಿದ್ಯಾಲಯದ ಸಂಸ್ಥಾಪಕ ಚೆನ್ರಾಜ್ ರಾಯ್ಚಂದ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Honorable Governor of Karnataka, Shri Thaawarchand Gehlot attended the 2022 Khelo India University Games at Sri Bhagawan Mahaveer Jain College, Kanakapura. He watched Kabadi, Yogasana, Skating and various games. He also played alley games with enthusiasm, in the presence of  Minister Shri K. C Narayana Gowda, Smt Shalini Rajanish & other dignitaries.

Post a Comment

0Comments

Post a Comment (0)