The KGF 2 movie was released in many parts of the world on Thursday where Kannadigas thronged the cinema halls in a big way. The movie was welcomed by a packed house at many theatres in Canada. Mr Karthik Gowda from Mysuru Studio House who had released the movie in Canadian cities said, "After a long time and Covid break, we were treated to a blockbuster Kannada movie in Canada. It was a great experience releasing this movie and seeing a huge crowd, it gave us literally goose bumps. I thank the whole KGF team for making such a wonderful movie." Many of the people residing in Canada said that it was a great experience to watch the movie in Canada and wished the Kannada movies a huge success.
ಕೆಜಿಎಫ್ 2 ಚಿತ್ರವು ಗುರುವಾರ ವಿಶ್ವದ ಹಲವೆಡೆ ಬಿಡುಗಡೆಯಾಗಿದ್ದು, ಅಲ್ಲಿಯ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ಚಿತ್ರಮಂದಿರಗಳಲ್ಲಿ ಸೇರುತ್ತಿದ್ದಾರೆ. ಕೆನಡಾದ ಹಲವು ಥಿಯೇಟರ್‌ಗಳಲ್ಲಿ ಹೌಸ್ ಪುಲ್ ಪ್ರದರ್ಶನ ಕಂಡಿದೆ. ಕೆನಡಾದ ನಗರಗಳಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡಿದ ಮೈಸೂರು ಸ್ಟುಡಿಯೋ ಹೌಸ್‌ನ ಶ್ರೀ ಕಾರ್ತಿಕ್ ಗೌಡ ಮಾತನಾಡಿ, "ದೀರ್ಘಕಾಲದ ಕೋವಿಡ್ ವಿರಾಮದ ನಂತರ ಕೆನಡಾದಲ್ಲಿ ಬ್ಲಾಕ್‌ಬಸ್ಟರ್ ಕನ್ನಡ ಚಲನಚಿತ್ರವನ್ನು ಬಿಡುಗಡೆ ಮಾಡಲಾಯಿತು. ಈ ಚಲನಚಿತ್ರವನ್ನು ಬಿಡುಗಡೆ ಮಾಡಿರುವುದು ಹೆಮ್ಮೆಯ ವಿಚಾರ. ಅಪಾರ ಜನಸಮೂಹದಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇದು ನಮಗೆ ಅಕ್ಷರಶಃ ಹೆಚ್ಚಿನ ಬಲ ನೀಡಿದೆ. ಇಂತಹ ಅದ್ಭುತವಾದ ಚಲನಚಿತ್ರವನ್ನು ಮಾಡಿದ್ದಕ್ಕಾಗಿ ನಾನು ಇಡೀ ಕೆಜಿಎಫ್ ತಂಡಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಕೆನಡಾದಲ್ಲಿ ನೆಲೆಸಿರುವ ಅನೇಕರು ಸಿನಿಮಾ ನೋಡಿ ಉತ್ತಮ ಅನುಭವ ಎಂದು ಹೇಳಿದ್ದಾರೆ. ಕನ್ನಡ ಸಿನಿಮಾಗಳು ವಿದೇಶದಲ್ಲೂ ಅದ್ಧೂರಿಯಾಗಿ ಯಶಸ್ವಿಯಾಗಲಿ" ಎಂದು ಹಾರೈಸಿದರು.