ಬೇರೆಯೇ ಮಾತು ಪುಸ್ತಕ ಬಿಡುಗಡೆ

varthajala
0

 ಬೇರೆಯೇ ಮಾತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ದೇವನೂರು ಮಹಾದೇವರ ಮಾತುಗಳು...

‘ಈ ರಘುರಾಮಶೆಟ್ಟರ ಮಂಡೆಯಲ್ಲಿ ಬುದ್ಧಿಉಂಟೊ!’

- ದೇವನೂರ ಮಹಾದೇವ

ನಾನೀಗಅಷ್ಟಾಗಿಎಲ್ಲಿಗೂ ಹೋಗುತ್ತಿಲ್ಲ. ಆರೋಗ್ಯಕೈಕೊಡುತ್ತಿದೆ. ಆದರೂಇಲ್ಲಿಗೆ ಬಂದೆ. ಕಾರಣ–ರಘುರಾಮಶೆಟ್ಟರು ಪ್ರಜಾವಾಣಿಯಲ್ಲಿಇದ್ದಾಗಿಲಿಂದಲೂ ನನಗೆಗೊತ್ತು. ಮುಂಗಾರು ಪತ್ರಿಕೆ ನಡೆಸುತ್ತಿರುವಾಗಲೂ ನನಗೆಗೊತ್ತು. ಅವರುಇವತ್ತುಕಣ್ಮರೆಯಾಗುತ್ತಿರುವ ಸಾಮಾಜಿಕ ನ್ಯಾಯದ ಪ್ರತೀಕವಾಗಿದ್ದರು. ದಲಿತರು, ಹಿಂದುಳಿದವರು, ಹಳ್ಳಿಗರು, ಅಸಹಾಯಕರುಎಲ್ಲಾಕ್ಷೇತ್ರಗಳಲ್ಲಿ ಭಾಗವಹಿಸುವಂತಾಗಬೇಕೆ0ದು ತಹ ತಹಿಸುತ್ತಿದ್ದರು. ಇದನ್ನೇತನ್ನಕರ‍್ಯಕ್ಷೇತ್ರದಲ್ಲೂಅಳವಡಿಸಿಕೊಂಡಿದ್ದ ವಡ್ಡರ್ಸೆಯವರುದಕ್ಷಿಣಕನ್ನಡಜಿಲ್ಲೆಯ ಬಂಟ ಸಮುದಾಯಕ್ಕೆ ಸೇರಿದವರು. ಈಗಅವರುಇಲ್ಲ. ಬಂಟರೂ ನೆನಪಿಸಿಕೊಳ್ಳುತ್ತಿಲ್ಲ. ಶೆಟ್ಟರುತಮ್ಮ ಹೃದಯದಲ್ಲಿಟ್ಟುಕೊಂಡಿದ್ದತಳಸಮುದಾಯದವರೂ ನೆನಪಿಸಿಕೊಳ್ಳುತ್ತಿಲ್ಲ. ಈ ಸಂಕಟಕ್ಕಾಗಿ ಬಂದೆ.

ವಡ್ಡರ್ಸೆಯವರ ‘ಮುಂಗಾರು’ ಪತ್ರಿಕೆಯನ್ನು ನಾನು ಬಿಡುಗಡೆ ಮಾಡಿದ್ದೆ. ರಘುರಾಮ ಶೆಟ್ಟರು, ನನ್ನನ್ನು ಬಿಡದೆ ಹೆಚ್ಚೂಕಮ್ಮಿಎಳೆದುಕೊಂಡೇ ಹೋಗಿ ನನ್ನಿಂದ ಬಿಡುಗಡೆ ಮಾಡಿಸಿದರು.ಇಸವಿ 84 ಸೆಪ್ಟೆಂಬರ್ ದಿನಾಂಕ 9.ತೇಜಸ್ವಿಅಧ್ಯಕ್ಷತೆ ವಹಿಸಿದ್ದರು. ಅಂತೂ ಬಿಡುಗಡೆ ಮಾಡಿದೆ. ಐದಾರು ವಾಕ್ಯಗಳನ್ನೂ ಮಾತಾಡಿದೆ. ಐದಾರುಅಂದರೆಐದಾರು ವಾಕ್ಯಗಳು ಮಾತ್ರವೇ. ಅಲ್ಲಿ ಹೇಗೆ ಮಾತಾಡಿದೆನೊ ಹಾಗಾಗೆಈಗಲೂ ನೆನಪಿದೆ. ಬಹುಶಃ ನನ್ನಆ ಮಾತುಗಳ ಮೋಹಕ್ಕೆ ನಾನೇಒಳಗಾಗಿಬಿಟ್ಟಿದ್ದೆಅನ್ನಿಸುತ್ತದೆ.

ನಾನುಅಲ್ಲಿ ಮಾತಾಡಿದ್ದುಇಷ್ಟು: “ದಕ್ಷಿಣಕನ್ನಡದಜಿಲ್ಲೆಯವರು ವಿದ್ಯಾವಂತರು, ಬುದ್ಧಿವಂತರು ಎಂಬ ಮಾತು ನಮ್ಮಕಡೆ ಪ್ರಚಲಿತವಿದೆ. ಜೊತೆಗೆಇದು ಭೂತಾರಾಧನೆ, ಯಕ್ಷಗಾನದ ನೆಲ. ಇಲ್ಲಿನವರಿಗೆರಘುರಾಮಶೆಟ್ಟರ ‘ಮುಂಗಾರು’ ಪತ್ರಿಕೆ ಸಾಹಸ ಹೇಗೆಕಾಣಿಸಬಹುದು ಎಂಬ ಕುತೂಹಲ ನನಗೆ. ನೀವುಹೀಗೆಅಂದುಕೊಳ್ಳಬಹುದು: ‘ಈ ರಘುರಾಮ ಶೆಟ್ಟರ ಮಂಡೆಯಲ್ಲಿ ಬುದ್ದಿಉಂಟೋ? ಈ ಬಾಲಕರನ್ನು ಕಟ್ಟಿಕೊಂಡುಬ0ದು ಸಮರಕ್ಕೆ ಹೊರಟಿದ್ದಾರಲ್ಲ!’ ಅಂತ. ಆದರೆ ನೆನಪಿಡಿ -ಈ ರಘುರಾಮ ಶೆಟ್ಟಿ ಎಂಬ ವ್ಯಕ್ತಿ ನೀವುಆರಾಧಿಸುವ ಭೂತದೈವದಂತೆ. ಈ ಬಾಲಕರುಅಭಿಮನ್ಯುಗಳು” –ಇದಷ್ಟೆಅಂದು ನಾನು ಮುಂಗಾರು ಪತ್ರಿಕೆ ಬಿಡುಗಡೆ ಮಾಡಿ ಮಾತಾಡಿದ್ದು! 

ನಿಜ, ಮುಂಗಾರು ಪತ್ರಿಕೆಯ ಸಂಪಾದಕಾ ಮಂಡಲಿಯಲ್ಲಿದ್ದ ಆ ಬಾಲಕರು ಅಭಿಮನ್ಯುಗಳೇಆಗಿದ್ದರು. ಅವರುಚಕ್ರವ್ಯೂಹ ಭೇದಿಸಬಲ್ಲವರಾಗಿದ್ದರು ಕೂಡ. ಆದರೆ ಅವರು ತಮ್ಮ ಅಪಕ್ವ ಆದರ್ಶಕ್ಕೆ ಬಲಿಯಾಗಿ ಕೆಲವೇ ತಿಂಗಳುಗಳಲ್ಲಿ ಮುಂಗಾರುವಿನಿ0ದಲೇ ನಿರ್ಗಮನರಾದರು. ಇದನ್ನೆಲ್ಲಾ ನೋಡಿದಾಗಅನ್ನಿಸಿತು - ಆ ಬಾಲಕರು ಚಕ್ರವ್ಯೂಹ ಬೇಧಿಸಬಲ್ಲವರಾಗಿದ್ದರು, ನಿಜ.ಆದರೆಚಕ್ರವ್ಯೂಹ ಸದೆ ಬಡಿದು ಹೊರಬಂದುಯುದ್ಧಗೆ ಲ್ಲುವುದು ಗೊತ್ತಿರಲಿಲ್ಲ. ಹುಲಿಯಂತಾಡುವುದು ಗೊತ್ತಿತ್ತು. ಬೆಕ್ಕಿನಂತೆ ಮರಹತ್ತಿ ಉಳಿಯುವುದು ಗೊತ್ತಿರಲಿಲ್ಲ. ಬಹುಶಃ ಈಗ ಆ ಮಾಜಿ ಬಾಲಕರಿಗೂ ಹೀಗೇ ಅನ್ನಿಸುತ್ತಿರಬಹುದು.

ಈ ಎಲ್ಲಾ ಆಗಿ ಮುಂಗಾರು ಪತ್ರಿಕೆಯಿಂದ ನಿರ್ಗಮಿಸಿದ ಈ ಬಾಲಕರು ನನಗೂಅಚ್ಚುಮೆಚ್ಚಿನವರೇಆಗಿದ್ದರು. ಆಗ ತುಂಬಾ ತೊಳಲಾಟಕ್ಕೆ ಒಳಗಾದೆ. ಹೆಚ್ಚು ಕಮ್ಮಿ ಒ0ಟಿಯಾದರಘುರಾಮಶೆಟ್ಟರ ಮನಃಸ್ಥಿತಿಯನ್ನು ಊಹಿಸಿಕೊಳ್ಳಲಾರದಾದೆ ಅಥವಾ ಅದನ್ನು ನೆನಪಿಸಿಕೊಳ್ಳಲೂಇಷ್ಟಪಡಲಾರೆನೇನೋ. 

ಆಗಆದಒಂದು ಪ್ರಕರಣವನ್ನು ಪ್ರಸ್ತಾಪಿಸುವೆ. ಪತ್ರಿಕೆಆರಂಭಿಸಿದಕೆಲವೇ ದಿನಗಳಲ್ಲಿಆರ್ಥಿಕ ಮುಗ್ಗಟ್ಟುತತ್ತರಿಸುವಂತೆ ಮಾಡುತ್ತದೆ. ಪತ್ರಿಕೆಉಳಿಸಿ ನಡೆಸಲುರಘುರಾಮ ಶೆಟ್ಟರು ಹೆಣಗಾಡತೊಡಗಿದ್ದರು. ಇದನ್ನು ಮಾಜಿ ಬಾಲಕ ದಿನೇಶ್‌ಅಮಿನ್‌ಮಟ್ಟುಈಗ ಬಿಡುಗಡೆಯಾಗುತ್ತಿರುವ ‘ಬೇರೆ ಮಾತು’ ಪುಸ್ತಕದತಮ್ಮ ‘ಗುರು ನಮನ’ದಲ್ಲಿ ಬರೆಯುತ್ತಾರೆ: “ಈ ಶೀತಲ ಸಮರ ನಡೆಯುತ್ತಿದ್ದ ದಿನಗಳಲ್ಲಿಯೇಒಮ್ಮೆ ವಡ್ಡರ್ಸೆಯವರು ನ್ಯೂಸ್ ಪ್ರಿಂಟ್‌ಖರೀದಿ ಸಮಸ್ಯೆ ಬಗೆಹರಿಸಲುಎಸ್.ಬಂಗಾರಪ್ಪನವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದರು. ಬಂಗಾರಪ್ಪನವರು ತಮಗೆ ಗೊತ್ತಿದ್ದ ಅಬಕಾರಿ ಉದ್ಯಮಿಯೊಬ್ಬರಿಗೆ ಫೋನ್ ಮಾಡಿಒಂದು ಲಾರಿ ನ್ಯೂಸ್ ಪ್ರಿಂಟ್‌ಕಳಿಸಲು ಹೇಳಿದ್ದರು. ಅದರ ಮರುದಿನದಮುಂಗಾರುಪತ್ರಿಕೆಯ ಮುಖಪುಟದಲ್ಲಿಸೀರೆಉಟ್ಟು, ಬಳೆತೊಟ್ಟು, ಇಂದಿರಾಗಾ0ಧಿಯವರ ಮನೆ ಮುಂದೆ ನಿಂತ ಬಂಗಾರಪ್ಪನವರ ವ್ಯಂಗ್ಯಚಿತ್ರ ಪ್ರಕಟವಾಗಿತ್ತು. ಅದು ಬಂಗಾರಪ್ಪನವರು ಮರಳಿಕಾಂಗ್ರೆಸ್ ಪಕ್ಷ ಸೇರಲು ಮಾತುಕತೆ ನಡೆಯುತ್ತಿದ್ದಕಾಲವಾಗಿತ್ತು. ಇದುತಮ್ಮ ಸಹದ್ಯೋಗಿಗಳುಉದ್ದೇಶಪೂರ್ವಕವಾಗಿ ಮಾಡಿದಕೀಟಳೆಎಂದು ವಡ್ಡರ್ಸೆಯವರು ಬಹಳ ನೊಂದಿದ್ದರು. ಪತ್ರಿಕೆಯಲ್ಲಿ ವ್ಯಂಗ್ಯಚಿತ್ರ ಪ್ರಕಟವಾದ ದಿನ ಅಳುಕುತ್ತಲೇ ಭೇಟಿಯಾದ ಪತ್ರಿಕೆಯ ನಿರ್ದೇಶಕರೊಬ್ಬರಿಗೆ ‘ನನಗೆ ಶೆಟ್ರುಏನೆಂದುಗೊತ್ತು, ಶೆಟ್ರಿಗೆ ಬೇಜಾರು ಮಾಡ್ಕೊಳ್ಳಬೇಡಿಎಂದು ಹೇಳಿ’ ಬಂಗಾರಪ್ಪನವರೇ ಸಮಾಧಾನ ಮಾಡಿಕಳುಹಿಸಿದ್ದರಂತೆ. ಆಗ ಬಂಗಾರಪ್ಪನವರ ಪ್ರಭುದ್ಧತೆ ನನಗೂ ಸ್ವಲ್ಪ ಸಮಾಧಾನ ನೀಡಿತ್ತು. ಒಟ್ಟಿನಲ್ಲಿಮುಂಗಾರು ಸಮರ ಹೊರಗೆ ಮಾತ್ರವಲ್ಲ. ಒಳಗೂ ನಡೆಯತೊಡಗಿತ್ತು. ಇದನ್ನುಏನೆಂದುಕರೆಯಬೇಕೋಗೊತ್ತಾಗುತ್ತಿಲ್ಲ. ವಿಧಿಯಾಟಅನ್ನಲು ಮನಸ್ಸಾಗುತ್ತಿಲ್ಲ!

ನನಗೂಈಗಲೂಒಂದುಕನ್‌ಫ್ಯೂಷನ್‌ಗೊ0ದಲ ಇದೆ. ಈ ರಘುರಾಮಶೆಟ್ಟರುನಾಯಕನೋಅಥವಾದುರಂತ ನಾಯಕನೋ ಅಂತ. ಒಂದು ದೊಡ್ಡಕನಸನ್ನು ಕ0ಡು ಅದಕ್ಕೊ0ದು ಮನೆಕಟ್ಟಿ, ಆ ಮನೆಯ ಭಾರವನ್ನು ಹೊತ್ತು, ಅದುಕುಸಿಯುತ್ತಿದ್ದರೂಛಲ ಬಿಡದೆ ನೆಲಕಚ್ಚುತ್ತಾರಲ್ಲಇದನ್ನು ನೋಡಿದರೆದುರಂತ ನಾಯಕಎಂದೆನ್ನಿಸುತ್ತದೆ. ಆದರೆಅದೇ ಆ ಕ್ಷಣದಲ್ಲೆ, ಈ ವಡ್ಡರ್ಸೆರಘುರಾಮಶೆಟ್ಟಿ ಎಂಬ ಸಾಹಸಿಗ ‘ಮುಂಗಾರು’ ಪ್ರಕಾಶನ ಸಂಸ್ಥೆ ಎಂಬ ಓದುಗರೇ ಮಾಲೀಕರಾಗಿದ್ದಪಬ್ಲಿಕ್ ಲಿಮಿಡೆಟ್‌ ಕಂಪನಿ ರಚಿಸಿ, ಓದುಗರ ಒಡೆತನದ ಸಂಸ್ಥೆಕಟ್ಟುತ್ತಾರಲ್ಲ-ಇದುಇ0ದು ಮಾಡಬೇಕಾಗಿರುವ ಸಾಹಸವಾಗೇ ಉಳಿದಿದೆ. ಈ ಸಂಪತ್ತನ್ನು ರಘುರಾಮಶೆಟ್ಟರು ನಾಡಿಗೆ ಬಿಟ್ಟು ಹೋಗಿದ್ದಾರೆ. ಇದನ್ನು ನೆನೆದು,ನಾಯಕಪಟ್ಟ ಮತ್ತುದುರಂತ ನಾಯಕಪಟ್ಟ ಈ ಎರಡನ್ನೂತಕ್ಕಡಿಯಲ್ಲಿಟ್ಟುತೂಗಿದಾಗ, ತಕ್ಕಡಿ ಮೇಲೆಕೆಳಗೆ ತೂಗಿತೂಗಿ, ನಾಯಕಪಟ್ಟ ಒಂದುಗುಲಗ0ಜಿ ತೂಕಹೆಚ್ಚಾಗಿತೂಗಿ, ಗೆದ್ದುನಿಲ್ಲುತ್ತದೆ.

ಇಂದಿನ ನಮ್ಮ ಮಾಧ್ಯಮಕ್ಷೇತ್ರಅದರಲ್ಲೂದೃಶ್ಯ ಮಾಧ್ಯಮಕ್ಷೇತ್ರದಅವನತಿಕಂಡುದುಃಖಿತನಾಗಿ ನನ್ನ ಸುಪ್ತಮನಸ್ಸುರಘುರಾಮ ಶೆಟ್ಟರಿಗೆ ನಾಯಕ ಪಟ್ಟವನ್ನೆಆಯ್ಕೆ ಮಾಡಿತ್ತೇನೊಎಂದೆನಿಸುತ್ತದೆ. ಇರಲಿ, ಇದು ಮುಖ್ಯವೇಅಲ್ಲ. ಇಂದು ಮಾಧ್ಯಮಕ್ಷೇತ್ರವು ಸಮಸ್ಯೆಗಳನ್ನು ವರದಿ ಮಾಡುತ್ತಿವೆಯೊ? ಅಥವಾ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿವೆಯೊಗೊತ್ತೇಆಗುತ್ತಿಲ್ಲ. ಉದಾಹರಣೆಗೆ ಹಿಜಾಬ್‌ಕೇಸ್‌ನಲ್ಲಿನಿಜವಾದಸಮಸ್ಯೆಯ ಪಾಲೆಷ್ಟು, ಇದನ್ನು ಸಮಸ್ಯಾತ್ಮಕ ಮಾಡಿದ ಮಾಧ್ಯಮಗಳ ಪಾಲೆಷ್ಟು? ನಿರ್ಧರಿಸಿ ಹೇಳುತ್ತೀರಾ? ಇದೇರೀತಿಅನೇಕಾನೇಕಉದಾಹರಣೆಗಳನ್ನು ಹೇಳಬಹುದು. ಮಾಧ್ಯಮಕ್ಷೇತ್ರತನ್ನ ನೀತಿ, ನಿಯಮ, ಸಂಯಮ, ಮಾನ ಮರ‍್ಯದೆ, ಘನತೆಗಳನ್ನುತಾನೇತುಳಿದು ನಿಂತಿದೆ. ಇಂಥ ಸಂದರ್ಭದಲ್ಲಿರಘುರಾಮ ಶೆಟ್ಟರು ನೆನಪಾಗುತ್ತಾರೆ. ನೆನಪಾಗಬೇಕೂಕೂಡ. ಅವರಕನಸು ‘ಓದುಗಒಡೆತನದ ಮಾಧ್ಯಮ’ದ ಪ್ರಯತ್ನಇಂದಾದರೂನನಸಾಗಬೇಕಾಗಿದೆ.

ಯಾಕೋ ಮಾತುಗಂಭೀರಆಯ್ತು.ಇದನ್ನು ಬರೆಯುವಾಗ ಟಿ.ವಿ.ಯಲ್ಲಿಕತ್ತಿಝಳಪಿಸುತ್ತಾ ‘ಲವ್ ಕೇಸರಿ ಸುದ್ದಿ’ ಬರುತ್ತಿತ್ತು. ‘ಲವ್ ಜಿಹಾದ್’ಅನ್ನು ‘ಅವರು’ ಮಾಡುತ್ತಾರೆಂದು ‘ಇವರೇ’ ಆರೋಪಿಸಿಅದಕ್ಕೆ ಪ್ರತಿಯಾಗಿ ‘ಇವರು’ ಲವ್ ಕೇಸರಿ ಮಾಡಿಎಂದುಅಬ್ಬರಿಸುತ್ತಿದ್ದರು. ‘ಅವರು’ ಕಳ್ಳತನ ಮಾಡುತ್ತಾರೆಂದು ‘ಇವರೇ’ ಆರೋಪಿಸಿ ‘ಇವರು’ ದರೋಡೆ ಮಾಡಬೇಕುಎಂಬ0ತಿತ್ತು ಆ ವಾದ!. ಈ ಟೈಮ್‌ನಲ್ಲೇನನಗೊಬ್ಬಕಿಡಿಗೇಡಿ ಹುಡುಗ ಪೋನ್ ಮಾಡಿತನ್ನ ಪರಿಚಯ ಮಾಡಿಕೊಂಡು, ‘ಸರ್, ನಾನು ನಿಮ್ಮಅಭಿಮಾನಿ’ ಅಂದ. ‘ಆಯ್ತಪ್ತಆಯ್ತುಏನ್ ಸಮಾಚಾರ?’ ಎಂದೆ. ‘ನಾನೊಂದು ಪದ್ಯ ಹಾಡ್ತೀನಿ,ನನ್ನ ಹೆಸರನ್ನುಯಾರಿಗೂ ಹೇಳಬಾರದು’ ಅಂದುದಕ್ಕೆ‘ಆಯ್ತು, ನಾನು ಬೇರೆಯವರಿಗೆಹೇಳಿದರೆಒಂದು ಲಕ್ಷಕೋಡ್ತೀನಿ,ಟ್ರಾಫಿಕ್‌ನಲ್ಲಿದ್ದೇನೆ, ಬೇಗ ಹಾಡ್ರಪ್ಪ’ ಎಂದು ಮನೆಯಲ್ಲೇಕೂತುಅಂದೆ. ಅವನುಜಾನಪದ ಮಟ್ಟಲ್ಲಿ ಹಾಡಿದ. ನಾನುಅವನಿಗೆ ಶರಣಾದೆಎಂದೆ. ಯಾಕೆಂದರೆಅವನು ಹಾಡಿದ್ದು ಲವ್ ಕೇಸರಿ, ಲವ್ ಜಿಹಾದ್‌ಗೆಉತ್ತರವಾಗಿತ್ತು. ಅವನ ಹಾಡುಇದು:

ಮಾವಾ, ಮಾವಾಕೇಳೊ ಮಂಗ್ಯಾ

ಕತ್ತಿಝಳಪಿಸುತ ಬಂದು, ನನ ಮುಂದನಿ0ದು

ಹಿ0ಗಲವ್ ಮಾಡು ಲವ್ ಮಾಡು ಅಂದರ

ಹೆ0ಗ ಮಾಡಲೊ ಲವ್ವ, ಹೆಂಗ ಮಾಡಲೊ ಲವ್ವ

ನಿನ್ನ ಎದೆಯೊಳಗ ಇಲ್ಲದ ಲವ್ವ, ಮಾಡೆಂದರ ಹೆಂಗ ಮಾಡಲೋ ಲವ್ವ

ಲವ್ ಲವ್ ಅಂದರಏನು ಮಾವಏನು ಮಾವ?

ಕೇಳೊ ಮಾವಾ ಹೇಳುತೀನಿ, ನಾ ಹೇಳಿದ ಮೇಲ ನೀ ಕೇಳು 

ಲವ್ವಲ್ಲಿಯುದ್ಧಯಾಕೋ ಮಾವ, ಲವ್ವೇಧರ್ಮವುಕೇಳು

ಲವ್ವಂದರಕಾಮಾನಬಿಲ್ಲು, ಅದರೊಳಗೈತಿರಂಗು ರಂಗೇಳು 

ಏಕಬಣ್ಣವಾದರದುವಾಕರಿಕೆಯೊ,ಬಣ್ಣಬಣ್ಣದಓಕುಳಿಯೋ ಲವ್ವು,

ಮಾವ,ರಂಗುರ0ಗಲ್ಲಿ ಬಾರೊಕತ್ತಿ ಮುರಿದೆಸದು ಬಾರೋ

ಲವ್ವು ಮಾಡೋಣು ಬಾರೊಓಕುಳಿಯಆಡೋಣು ಬಾರೊ


ಹೆಂಗಪ್ಪಇದು?‘ಲವ್ ಜಿಹಾದ್’ಅಂತೆ, ಲವ್ ಅಂದರೆ ಎಲ್ಲರಿಗೂ ಗೊತ್ತು. ಜಿಹಾದ್‌ ಅಂದರೆ ಧರ್ಮಯುದ್ಧ ಅ0ತೆ! ನಿಜವಾದ ಲವ್ ಧರ್ಮವನ್ನೂ ಮೀರುತ್ತದೆ.ಇನ್ನುಲವ್ ಮತ್ತು ಯುದ್ಧ ಅಜಗಜಾಂತರ ಕ್ರಿಯೆಗಳು. ಹಾಗೇ ಇತ್ತೀಚೆಗೆ‘ಲವ್ ಕೇಸರಿ’ ಅಂತರ0ಗಪ್ರವೇಶ ಮಾಡಿದೆ.ಕೇಸರಿಅಂದರೆ ವಿರಕ್ತ! ಈ ಲವ್ ಮತ್ತುಆ ವಿರಕ್ತಿಹೇಗೆಕೂಡುತ್ತವೆ? ವಿರಕ್ತಿ ಇರುವವರನ್ನು ಲವ್ ಮಾಡಿದರೆ, ಮಾಡಿದವರಪಾಡೇನು? ಜೊತೆಗೆ ಇದು ಗಂಡಸರ ಸಮಸ್ಯೆಯಾಗಿ ಬಿಟ್ಟಿದೆ. ಹೆಣ್ಣೆಂದರೆ ಮನಸ್ಸೆ ಇಲ್ಲದ ಕೀಲುಗೊಂಬೆ ಅ0ತ ಈ ಗಂಡಸರು ಅ0ದುಕೊ00ತಿದೆ - ಹೀಗೆಲ್ಲಾ ಧರ್ಮ ಸೂಕ್ಷತೆಯ ಚಿಂತೆ ಮಾಡುತ್ತಾ ನನ್ನ ತಲೆ ಕೆಟ್ಟು ಎಕ್ಕುಟ್ಟೋಗಿತ್ತು. ಇಂಥ ಸ0ಕಷ್ಟದಲ್ಲಿ ಆ ಕಿಡಿಗೇಡಿ ಹುಡುಗನಜಾನಪದ ಮಟ್ಟು ಬಂದು ನನ್ನತಲೆ ನೇವರಿಸಿ ಸಾಂತ್ವಾನ ನೀಡಿತು. ಅದಕ್ಕಾಗಿಅವನಿಗೆಕೃತಜ್ಞತೆಗಳು. 

ಕ್ಷಮೆಇರಲಿ, ನಾನುಇಷ್ಟು ಮಾತಾಡಬೇಕೆಂದುಕೊ0ಡಿರಲಿಲ್ಲ.. ಈಗೊಂದು ವಿಸ್ಮಯ ಹೇಳಿ ನನ್ನಮಾತು ಮುಗಿಸುತ್ತೇನೆ. ಎಲ್ಲರಿಗೂಗೊತ್ತಿದೆ. ಅಸಮಾನತೆಮೌಲ್ಯದಚಾತರ‍್ವರ್ಣದ ಹಿಂದೂಗು0ಪಿನ ಪ್ರತಿಪಾದಕಆರ್‌ಎಸ್‌ಎಸ್‌ನಶ್ರೀಗೋಲ್ವಾಲ್ಕರ್ ಹಾಗೂ ಹಿಂಸಾಮೂರ್ತಿಶ್ರೀ ನಾಥುರಾಂಗೋಡ್ಸೆಯರಕುಮೌಲ್ಯಗಳನ್ನು ಭಾರತದಲ್ಲೆಡೆ ಬಿತ್ತಿ ಬೆಳೆಯಲು ನಾಗಪುರ್‌ ಆರ್‌ ಎಸ್‌ ಎಸ್‌ ಅವಿರತ ಪ್ರಯತ್ನಿಸುತ್ತಲೇ ಇದೆ. ಭಾರತದ ತುಂಬೆಲ್ಲಾ ಗೋಲ್ವಾಲ್ಕರ್ ಮತ್ತುಗೋಡ್ಸೆ ನಿರ್ಮಾಣ ಮಾಡಲು ಸ್ಥಳಾವಕಾಶಕ್ಕಾಗಿ ಈಚಾತರ‍್ವರ್ಣದ ಹಿಂದೂಗು0ಪು, ಭಾರತವನ್ನೆಲ್ಲಾ ಆವರಿಸಿಕೊಂಡಿರುವ ಗಾ0ಧಿ ಮತ್ತು ಅಂಬೇಡ್ಕರ್‌ರನ್ನು ನಿರ್ನಾಮ ಮಾಡಲು ಸತತವಾಗಿ ಗಾಂಧಿಅ0ಬೇಡ್ಕರ್ ಎಂಬ ಆಲ ಮತ್ತು ಅರಳಿಮರಗಳನ್ನು ಕೊಚ್ಚಿ ತರಿದು ಕತ್ತರಿಸಿ ತುಳಿದು ಏನೆಲ್ಲಾ ಮಾಡುತ್ತಿದೆ. ಆದರೂ,ಆದರೂನುವೆ ಪೌರತ್ವಕಾಯ್ದೆತಿದ್ದುಪಡಿ  ಸಂದರ್ಭ ಬುಗಿಲೆದ್ದಾಗ ಅದರೊಳಗಿಂದ ಮೂಡಿದ ಗಾಂಧಿ ಅ0ಬೇಡ್ಕರ್ ಪ್ರಭಾವಳಿ ಭಾರತದತುಂಬಾಆವರಿಸಿಕೊಳ್ಳುವ ಪರಿ,ಇದೇನುಚೋದ್ಯ!ಆಗಜನರ ಬೇಗುದಿಗೆಗಾಂಧಿ ಅ0ಬೇಡ್ಕರ್‌ ಸಾ0ತ್ವನ ನೀಡಿದರೆ?ಗಾಂಧಿಯವರನ್ನುಕಡೆದು ಸತ್ವವನ್ನಷ್ಟೇತೆಗೆದಿಟ್ಟುಕೊಂಡು ಪ್ರತಿಮೆ ಮಾಡಿ ನಿಲ್ಲಿಸಿದರೆಅದರೊಳಗಿಂದ ‘ಸಹನೆ ಮತ್ತು ಪ್ರೀತಿ’ ಸೂಸುತ್ತದೆ. ಹಾಗೆಅಂಬೇಡ್ಕರ್‌ಗಾಗಿಯೂ ಈ ನೆಲ ಕಾತರಿಸುತ್ತಿದೆ. ನ್ಯಾಯಕ್ಕೆ ನ್ಯಾಯದ ಹಕ್ಕೇಇಲ್ಲದ ಸಂದರ್ಭದಲ್ಲಿನ್ಯಾಯಕ್ಕೇನೇ ನ್ಯಾಯದ ಹಕ್ಕುಸಿಗುವಂತಾಗಲು ಕಾರಣರು ಅ0ಬೇಡ್ಕರ್. ಅಂಬೇಡ್ಕರ್‌ರನ್ನು ಕಡೆದು ಸತ್ವವನ್ನಷ್ಟೆ ತೆಗೆದಿಟ್ಟುಕೊಂಡು ಪ್ರತಿಮೆ ಮಾಡಿ ನಿಲ್ಲಿಸಿದರೆ ಅದರೊಳಗಿಂದ ನ್ಯಾಯ, ಸಮಾನತೆ ಸೂಸುತ್ತದೆ. ಸಹನೆ, ಪ್ರೀತಿ, ನ್ಯಾಯ ಸಮಾನತೆಯಜಲಕ್ಕಾಗಿ ಭಾರತದ ನೆಲ ಚಾತಕ ಪಕ್ಷಿಯಂತೆಕಾಯುತ್ತಿಲ್ಲವೆ?

Post a Comment

0Comments

Post a Comment (0)