ಬೆಂಗಳೂರು: ಮಕ್ಕಳಿಗೆ ಮುದ ನೀಡುವ ಬೇಸಿಗೆ ಶಿಬಿರಗಳು ಮತ್ತೆ ಆರಂಭಗೊಳ್ಳುತ್ತಿವೆ. ಕಳೆದ ಎರಡು ವರ್ಷಗಳಿಂದ ಕರೋನಾ ಕಾರಣಕ್ಕೆ ಬೇಸಿಗೆ ಶಿಬಿರಗಳಿಂದ ದೂರವೇ ಉಳಿದಿದ್ದ ಮಕ್ಕಳಿಗೆ ಈ ಬಾರಿ ಬೇಸಿಗೆ ಶಿಬಿರದ 'ಮೋಜು-ಮಸ್ತಿ' ಮತ್ತೆ ಸಿಗುತ್ತಿದೆ.
ನಾಲ್ಕು ಗೋಡೆಗಳ ಮಧ್ಯೆ ಮೊಬೈಲ್‌ಗಳ ಹೊಸ ಇದ್ದು ಬೇಸತ್ತಿರುವ ಚಿಣ್ಣರಿಗೆ ಈ ಬಾರಿಯ ದೇಸಿಗೆ ರಜೆ ಹೊಸ ಉತ್ಸಾಹ ತರುತ್ತಿದೆ.
ಬೆಂಗಳೂರಿನ ಇತಿಹಾಸ ಪ್ರಸಿದ್ಧ ಜೆ.ಪಿ. ನಗರದ ರಾಗಿಗುಡ್ಡ ದೇವಸ್ಥಾನದ ಬಳಿ ಇರುವ ನಳಂದ ಆಂಗ್ಲ ಶಾಲೆಯಲ್ಲಿ ಏಪ್ರಿಲ್ 15 ರಿಂದ ಬೇಸಿಗೆ ಶಿಬಿರ ಪ್ರಾರಂಭವಾಗಿದೆ. 50 ವರ್ಷಗಳ ಶೈಕ್ಷಣಿಕ ಅನುಭವ ಹೊಂದಿರುವ ನಳಂದ ಆಂಗ್ಲ ಶಾಲೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ವಿಶೇಷ ಪರಿಣಿತಿ ಹೊಂದಿದೆ.
ನುರಿತ ಶಿಕ್ಷಕರ ಮಾರ್ಗದರ್ಶನದಲ್ಲಿ ವಿವಿಧ ಆಟ-ಪಾಠ-ಕಲೆ-ಸಂಸ್ಕೃತಿಗಳ ಮೂಲಕ ಶಿಬಿರವನ್ನು ಉಪಯುಕ್ತವಾಗಿ ನಡೆಸಲಾಗುತ್ತಿದೆ.
ಕಲರಿಂಗ್, ಪೆನ್ಸಿಲ್ ಸ್ಕೆಟ್, ಮ್ಯೂಸಿಕ್, ಪೇಪರ್ ಕ್ರಾಫ್ಟ್, ಪೇಂಟಿಂಗ್, ಸ್ಟೋನ್ ಆರ್, ಯೋಗ, ಧ್ಯಾನ, ಫ್ರೀ ಸ್ಟೈಲ್ ಡ್ಯಾನ್ಸ್, ಪಿಕ್ ಆಂಡ್ ಸ್ಟಿಕ್ - ಹೀಗೆ ಹತ್ತು ಹಲವು ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಗೆ ಇಂಬು ಕೊಡಲಾಗುತ್ತಿದೆ. ಸಂಸ್ಥೆಯ ಮುಖ್ಯಸ್ಥರಾಗಿರುವ ಶಿವಶಂಕರ್ ಹಾಗೂ ಹಿರಿಯ ಶಿಕ್ಷಕಿ ರೇಣುಕಾ ಅವರು ಸೇರಿದಂತೆ ಆನುಭವಿ ಮಾರ್ಗದರ್ಶಕ ತಂಡ ಈ ನಳಂದ ಆಂಗ್ಲ ಶಾಲೆಯಲ್ಲಿ ಇದೆ. ಪಾಲಕರಿಗೂ ಬೇಸಿಗೆ ಬಂದಾಗ ಮನೆಯಲ್ಲಿ ಮಕ್ಕಳ ಹುಂಟಾಟ-ಹರಲೆಗಳನ್ನು ನಿಭಾಯಿಸುವುದು ಕಷ್ಟ, ಇದಕ್ಕೆ ಪರಿಹಾರ ಬೇಸಿಗೆ ಶಿಬಿರ.
ಈ ಬಾರಿ ಮಕ್ಕಳ ಬೇಸಿಗೆ ಶಿಬಿರಗಳಿಂದಾಗಿ ಪಾಲಕರಿಗೂ ನೆಮ್ಮದಿ ದೊರೆಯುತ್ತಿದೆ.