ದಶಕಗಳ ನಂತರ ಶಿಕ್ಷಣ ಕ್ಷೇತ್ರದಲ್ಲಿನ ಅಮೂಲಾಗ್ರ ಬದಲಾವಣೆ ತಂದು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗಿದೆ. ವಿಶ್ವ ಗುರವಿನತ್ತ ಭಾರತ ಪಯಣಕ್ಕೆ ಎನ್.ಇ.ಪಿ. ಪೂರಕವಾಗಲಿದೆ ಎಂದು ಕರ್ನಾಟಕ ರಾಜ್ಯದ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಗೌರವಾನ್ವಿತ ಥಾವರ್ ಚಂದ್ ಗೆಹ್ಲೋಟ್ ಅವರ ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಅರ್.ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ವಿಶ್ವವಿದ್ಯಾಲಯದ 39 ಮತ್ತು 40ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಮತ್ತು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು. ದೇಶದ್ಯಾಂತ ಒಂದೇ ಶಿಕ್ಷಣ ಪದ್ಧತಿ ಇರಬೇಕೆಂದು ಎನ್.ಇ.ಪಿ. ಜಾರಿಗೆ ತರಲಾಗಿದೆ. ದೇಶದಲ್ಲಿ ಎನ್.ಇ.ಪಿ. ಅನುಷ್ಠಾನಕ್ಕೆ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದ ಅವರು ಚಿನ್ನದ ಹಕ್ಕಿ ಎಂದು ಕರೆಯುವ ಭಾರತದಲ್ಲಿ ಎನ್.ಇ.ಪಿ. ಜಾರಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ನಿರೀಕ್ಷಿಸಲಾಗಿದೆ ಎಂದರು.
ಹಣ, ಆಸ್ತಿ, ಅಂತಸ್ತು ಕದಿಯಬಹುದು, ಜ್ಞಾನ ಕದಿಯಲು ಸಾಧ್ಯವಿಲ್ಲ. ಇಂದಿಲ್ಲಿ ವಿವಿಧ ವಿಷಯದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ನಿಮ್ಮ ಜ್ಞಾನಾರ್ಜನೆ ಪರೋಪಕಾರಿ ಕೆಲಸಕ್ಕೆ ಉಪಯೋಗಬೇಕು. ಪಡೆದ ವಿದ್ಯವನ್ನು ಇತರರಿಗೆ ಧಾರೆ ಎರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಗೌರವಾನಿತ ರಾಜ್ಯಪಾಲರು, ಹೆತ್ತ ತಂದೆ-ತಾಯಿ, ಗುರುಗಳು ಮತ್ತು ದೇಶವನ್ನು ಎಂದು ಮರೆಯಬಾರದೆಂದರು.
ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶದ ಸಂಸ್ಕøತಿ, ಸಭ್ಯತೆಗೆ ವಿಶ್ವದಲ್ಲಿ ಉನ್ನತ ಸ್ಥಾನವಿದೆ. ಇದನ್ನು ಮತ್ತಷ್ಟು ಎತ್ತರಕ್ಕೆ ಕೊಂಡ್ಯೂವ ಮೂಲಕ ಆತ್ಮ ನಿರ್ಭರ್ ಭಾರತ ಮತ್ತು ಸದೃಢ ಭಾರತ ನಿರ್ಮಿಸುವ ಜವಾಬ್ದಾರಿ ಯುವ ಪೀಳಿಗೆಗಳ ನಿಮ್ಮ ಮೇಲಿದೆ ಎಂದು ವಿದ್ಯಾರ್ಥಿಗಳನ್ನುದೇಶಿಸಿ ಹೇಳಿದರು.
ಕ್ರೀಡೆಗೆ ಹೆಚ್ಚಿನ ಮಹತ್ವ ಕೊಡಿ: ಭಾರತವು ಯುವಕರಿಂದ ಕೂಡಿದ ದೇಶವಾಗಿದ್ದು, ಯುವಕರಿಂದ ದೇಶ ಹೆಚ್ಚಿನದನ್ನು ನಿರೀಕ್ಷಿಸಿದೆ. ಕಳೆದ ಬಾರಿ ನಡೆದ ಒಲಂಪಿಕ್ ಕ್ರೀಡಾಕೂಟದಲ್ಲಿ ದೇಶ 7 ಪದಕಗಳು ಗೆಲ್ಲಲು ಸಾಧ್ಯವಾಯಿತು. ತದನಂತರ ನಡೆದ ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲಿ ವಿಶೇಷಚೇತನರು ದೇಶಕ್ಕೆ 19 ಪದಕಗಳನ್ನು ತಂದಿದ್ದಾರೆ. ಗ್ವಾಲಿಯರ್ನಲ್ಲಿ 175 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿದ ದಿವ್ಯಾಂಗ್ ಕ್ರೀಡಾ ಕೇಂದ್ರವೇ ಇದಕ್ಕೆ ಮೂಲ ಕಾರಣ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಾಧನಗೆ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು, ತಾವು ಸಹ ಹಿಂದೆ ಕ್ರೀಡಾಪಟುವಾಗಿದ್ದೆ ಎಂದರು.
ಕೇಂದ್ರ ಸರ್ಕಾರ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಕಳೆದ ರವಿವಾರ ಬೆಂಗಳೂರಿನಲ್ಲಿ ಆಯೋಜಿಸಿದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ನಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ ಅವರೊಂದಿಗೆ ನಾನು ಸಹ ಭಾಗವಹಿಸಿದ್ದೆ. ಕರ್ನಾಟಕ ಸರ್ಕಾರವು ಕ್ರೀಡೆಗೆ ಪ್ರೋತ್ಸಾಹಿಸುವ ಹಲವು ಯೋಜನೆಗಳು ಜಾರಿಗೆ ತಂದಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದಲ್ಲದೆ ಫಿಟ್ ಇಂಡಿಯಾ ಆಂದೋಲನದ ಭಾಗವಾಗಿ ಯುವ ಸಮೂಹ ಆರೋಗ್ಯ ಕಡೆಯೂ ಹೆಚ್ಚಿನ ಗಮನ ಹರಿಸಬೇಕು ಎಂದು ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ್ ತಿಳಿಸಿದರು.
6 ಜನರಿಗೆ ಗೌರವ ಡಾಕ್ಟರೇಟ್:
39ನೇ ಘಟಿಕೋತ್ಸವದ ಭಾಗವಾಗಿ ಸಮಾಜಕಾರ್ಯ ಕ್ಷೇತ್ರದಲ್ಲಿ ಸಾಧನೆಗೆ ಬೀದರ ಜಿಲ್ಲೆಯ ಪೂಜ್ಯ ಸಿದ್ದರಾಮ ಶರಣರು(ಬೆಲ್ದಾಳ ಶರಣರು), ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಬೀದರ ಜಿಲ್ಲೆಯ ಡಾ. ಬಸವರಾಜ ಜಿ. ಪಾಟೀಲ ಅಷ್ಠೂರ ಹಾಗೂ ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗೆ ಕಲಬುರಗಿ ಜಿಲ್ಲೆಯ ವೇಣುಗೋಪಾಲ ಡಿ. ಹೆರೂರ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
40ನೇ ಘಟಿಕೋತ್ಸವದ ಭಾಗವಾಗಿ ಸಮಾಜಕಾರ್ಯ ಕ್ಷೇತ್ರದಲ್ಲಿ ಅಮೋಘ ಸಾಧನೆಗೆ ವಿಜಯಪುರ ಜಿಲ್ಲೆಯ ಗುರಮ್ಮ ಸಿದ್ಧಾರೆಡ್ಡಿ, ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಮಂಗಳೂರು ಮೂಲದ ಯುನಿಪೆÇಯ ಅಬ್ದುಲ್ಲಾ ಕುನ್ಹಿ ಹಾಗೂ ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗೆ ಗೌತಮ್ ರಾಧಾಕೃಷ್ಣ ದೇಸಿರಾಜು ಅವರನ್ನು ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಇವಿಧ ವಿಷಯದಲ್ಲಿ ಚಿನ್ನದ ಪಡಕ ಪಡೆದ ವಿದ್ಯಾರ್ಥಿಗಳು ಮತ್ತು ಪಿ.ಹೆಚ್.ಡಿ. ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ವಿ.ವಿ.ಕುಲಪತಿ ಪ್ರೋ. ದಯಾನಂದ ಅಗಸರ ಇದ್ದರು. ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ ನಿರ್ದೇಶಕ ಪ್ರೋ. ಎಸ್.ಸಿ. ಶರ್ಮಾ ಅವರು ಘಟಿಕೋತ್ಸವ ಕುರಿತು ಭಾಷಣ ಮಾಡಿದರು. ವಿ.ವಿ ವಿದ್ಯಾವಿಷಯಕ್, ಶೈಕ್ಷಣಿಕ ಮಂಡಳಿ ಸದಸ್ಯರು, ಅಧ್ಯಾಪಕ ವರ್ಗ, ವಿದ್ಯಾರ್ಥಿಗಳು ಇದ್ದರು.