ಬೆಂಗಳೂರು : ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಚಟುವಟಿಕೆಗಳ ಉದ್ಘಾಟನೆ, ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮವು 8 ರ ಶುಕ್ರವಾರ ಸಂಜೆ 4.30 ಕ್ಕೆ ಕೆಂಗೇರಿ ಉಪನಗರದ ಸುರಾನಾ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ .
ಪುರಾತನ ಕಲೆಗಳಲ್ಲಿ ಒಂದಾದ, ಪ್ರಸ್ತುತ ನಶಿಸಿಹೋಗುತ್ತಿದೆ ಎನ್ನಲಾದ ಸೂತ್ರ ಸಲಾಕೆ ಬೊಂಬೆಯಾಟದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಂಗಪುತ್ಥಳಿ ತಂಡದಿಂದ ಸೂತ್ರ ಸಲಾಕೆ ಬೊಂಬೆಯಾಟ ನೆರವೇರಲಿದ್ದು ಯಶವಂತಪುರ ಕ್ಷೇತ್ರ ಶಾಸಕ, ಸಹಕಾರ ಸಚಿವ ಎಸ್. ಟಿ .ಸೋಮಶೇಖರ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ" ಮಹೇಶ್ ಜೋಷಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ, ಉತ್ತರ ಲೋಕಸಭಾ ಸಂಸದ ಡಿ.ವಿ.ಸದಾನಂದ ಗೌಡ ಸನ್ಮಾನಿಸಲಿದ್ದಾರೆ. ಬಿ. ಎಸ್. ಪಾರಿಜಾತ ರಚಿಸಿರುವ "ನಾಡ ದೇಗುಲ" ಪುಸ್ತಕವನ್ನು ವಿಧಾನಪರಿಷತ್ ಸದಸ್ಯ ಗೋಪಿನಾಥ ರೆಡ್ಡಿ ಬಿಡುಗಡೆ ಮಾಡಲಿದ್ದು, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಕಾರ್ಯಚಟುವಟಿಕೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ.ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಸ್. ಸುಧೀಂದ್ರಕುಮಾರ್ ಅಧ್ಯಕ್ಷತೆ ವಹಿಸಲಿದ್ದು , ಖ್ಯಾತ ಸಾಹಿತಿ, ವಿಮರ್ಶಕ, ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ಸಮ್ಮೇಳನಾಧ್ಯಕ್ಷ ಡಾ" ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗೂ ಸುರಾನಾ ಕಾಲೇಜ್ ನಿರ್ದೇಶಕ ಡಾ" ಎಂ .ಎಸ್. ರಂಗರಾಜು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೂಗು ಸುರೇಶ್, ನಾಗರಿಕ ರಕ್ಷಣಾ ಸೇವೆಯ ಸಹಾಯಕ ವಿಭಾಗೀಯ ವಾರ್ಡನ್ ಹೆಚ್.ಜಿ. ಗೌತಮ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಸಾಹಿತ್ಯ ಪರಿಷತ್ ಪ್ರಕಟಣೆ ತಿಳಿಸಿದೆ .