2021ನೆಯ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿ ಆಯ್ಕೆಗಾಗಿ - ಪ್ರಕಟಣೆ

varthajala
0

 2021ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ  ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಕಳುಹಿಸಲು  ದಿನಾಂಕ: 26-04-2022 ರಿಂದ ಕೊನೆಯ ದಿನಾಂಕ : 26-05-2022ರ ವರೆಗೆ.

01) ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ

2021ರಲ್ಲಿ ಪ್ರಕಟವಾದ ವಿಜ್ಞಾನ ತಂತ್ರಜ್ಞಾನ ಪ್ರಕಾರಗಳಾದ ವೈದ್ಯಕೀಯ ಶಾಸ್ತ್ರ/ಯಂತ್ರಶಾಸ್ತ್ರ/ವಿದ್ಯನ್ಮಾನ ಶಾಸ್ತ್ರದಲ್ಲಿ ಕನ್ನಡದಲ್ಲಿ ರಚಿತವಾದ ಆ ವರ್ಷದ ಶ್ರೇಷ್ಠಕೃತಿಗಳಿಗೆ ರೂ.10,000=00ಗಳ ಬಹುಮಾನ ನೀಡಲಾಗುವುದು

02) ಶ್ರೀಮತಿ ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ 

2021 ಜನವರಿ - ಡಿಸೆಂಬರ್‍ವರೆಗೆ ಪ್ರಕಟವಾದ ದಿ.ಚಚನಿ ಕೃತಿಗಳು, ವಿವಿಧ ಬೇರೆ ಕ್ಷೇತ್ರಗಳಲ್ಲಿ ಅಂದರೆ ಶಾಸನ,  ಇತಿಹಾಸ, ಜಾನಪದ, ರೈತ ಹಾಗೂ ಕೃಷಿ ಸಂಬಂಧ ಗಣಿತ , ವಿಜ್ಞಾನ  ಇತ್ಯಾದಿ ವಿಷಯಗಳಿಗೆ, ವೀರಶೈವ ಸಾಹಿತ್ಯ ಸಂಶೋಧನಾತ್ಮಕ ಕೃತಿಗಳು ಎಂಬ ಪ್ರಕಾರಕ್ಕೆ ರೂ. 10,000/-ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.  

1. ಡಾ. ಶ್ರೀ ಜ.ಚ.ನಿ. ಸಾಹಿತ್ಯ ಸಮೀಕ್ಷೆ (ವೀರಶೈವ ಸಾಹಿತ್ಯ) ಹಾಗೂ ಆ ಸಾಹಿತ್ಯ ಕುರಿತು ಬರೆದ ಕೃತಿಗಳು -  2021

2. ಶಾಸನ - ಇತಿಹಾಸ - ಜಾನಪದ ಸಂಶೋಧನ ವಿಷಯ ಕುರಿತ ಕೃತಿಗಳು -  2021

3. ರೈತರು ಹಾಗೂ ಕೃಷಿ ಸಂಬಂಧದ ಯಾವುದೇ ಪ್ರಕಾರದ ಕೃತಿಗಳು - 2022

4. ಗಣಿತ, ವಿಜ್ಞಾನ ಸಂಬಂಧಿತ ಕೃತಿಗಳು - 2023

5. ಸಂಸ್ಕøತದಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿಗಳು - 2024

6. ಸಂಶೋಧನಾತ್ಮಕ ಕೃತಿ - 2025

03)  ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ `ಅನುವಾದ ಸಾಹಿತ್ಯಕ್ಕಾಗಿ' :

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಅನುವಾದ ಸಾಹಿತ್ಯ ಕೃತಿಗೆ ರೂ.10,000/- ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

04)  ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ. ಮದನಕೇಸರಿ ಜೈನ ದತ್ತಿ :  

      2021ನೆಯ ಇಸವಿಯಲ್ಲಿ ಪ್ರಕಟವಾದ ಯಾವುದೇ  ಜೈನ ಸಾಹಿತ್ಯ ಧರ್ಮಕ್ಕೆ ಸಂಬಂಧಪಟ್ಟ ಕೃತಿಗೆ ಬಹುಮಾನ, ಬಹುಮಾನದ ಮೊತ್ತ ರೂ. 7,500/-.

05) ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ:

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಜೈನಧರ್ಮದ ಇತಿಹಾಸ, ಸಾಹಿತ್ಯ ಸಂಸ್ಕøತಿ ಹಾಗೂ ಕಲೆ, ಸಂಶೋಧನಾ ಗ್ರಂಥ, ಗ್ರಂಥ ಸಂಪಾದನೆ, ಪ್ರಾಚೀನ, ಗ್ರಂಥಗಳು ಹಾಗೂ ಅನುವಾದಕ್ಕೆ ಸಂಬಂಧಿಸಿದ   ರೂ. 6,000/- ರೂ.ಗಳ ನಗದು ಹಣ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

06) ವಸುದೇವ ಭೂಪಾಲಂ ದತ್ತಿ :

1.  2021ರಲ್ಲಿ ಪ್ರಕಟವಾದ ಅತ್ಯುತ್ತಮ ಕಾದಂಬರಿ ಕೃತಿಗೆ ರೂ.5000/- ಬಹುಮಾನ ನೀಡಲಾಗುವುದು.

2.  2021ರಲ್ಲಿ ಪ್ರಕಟವಾದ ಸಣ್ಣಕಥಾ ಸಂಕಲನಗಳನ್ನು ಸ್ಪರ್ಧೆಗೆ ಕಳುಹಿಸಬಹುದು ರೂ. 3000/- ಬಹುಮಾನ ನೀಡಲಾಗುವುದು.

3. 2021ರಲ್ಲಿ ಪ್ರಕಟವಾದ ಮಕ್ಕಳ ಸಾಹಿತ್ಯಕೃತಿಗೆ ರೂ.2000/- ಬಹುಮಾನ ನೀಡಲಾಗುವುದು.

4. 2021ರಲ್ಲಿ ಪ್ರಕಟವಾದ ವೈಚಾರಿಕ ಲೇಖನಗಳ ಕೃತಿಗೆ ರೂ.2000/- ಬಹುಮಾನ ನೀಡಲಾಗುವುದು.

07) ದಿ|| ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ :

     2021 ಜನವರಿ - ಡಿಸೆಂಬರ್‍ವರೆಗೆ  ಪ್ರಕಟವಾದ ಯಾವುದೇ ಪ್ರಕಾರದ ಹಾಸ್ಯ ಸಾಹಿತ್ಯ ಕೃತಿಗೆ ರೂ.5000/- ಬಹುಮಾನ ನೀಡಲಾಗುವುದು.

08) ದಿ|| ಡಾ. ಎ.ಎಸ್. ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿ :

2021 ಜನವರಿ - ಡಿಸೆಂಬರ್‍ವರೆಗೆ  ಪ್ರಕಟವಾದ ಮನೋವಿಜ್ಞಾನ ಸಾಹಿತ್ಯ ಕೃತಿಗೆ ರೂ.5000/- ಬಹುಮಾನ ನೀಡಲಾಗುವುದು.

09) ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ:

2021ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಕನ್ನಡ ‘ಕಾದಂಬರಿ’ ಕೃತಿಗೆ ರೂ. 5,000/-ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. 

10) ಶ್ರೀಮತಿ ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ 

ಕನ್ನಡ ಮಹಿಳಾ ಬರಹಗಾರರ ವಿವಿಧ ಪ್ರಕಾರಗಳ ಆರು ವರ್ಷಗಳ ಅವಧಿಯಲ್ಲಿ (2016ನೇ ಜನವರಿ ತಿಂಗಳಿಂದ 2021ನೇ ಡಿಸೆಂಬರ್ ತಿಂಗಳವರೆಗೆ) ಪ್ರಥಮ ಮುದ್ರಣವಾಗಿ ಪ್ರಕಟವಾದ ‘ಕಥೆ’ ಕೃತಿಗೆ ರೂ. 5,000/-ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.

11) ಪ್ರಕಾಶಕ ಆರ್. ಎನ್. ಹಬ್ಬು ದತ್ತಿ ಪ್ರಶಸ್ತಿ

2021 ಜನವರಿ - ಡಿಸೆಂಬರ್‍ವರೆಗೆ ಪ್ರಕಟವಾದ ‘ಕಥಾ ಸಂಕಲನ’ ಪ್ರಕಾರದ ಪುಸ್ತಕ ಪ್ರಕಟಣೆ ಮಾಡಿದ ‘ಪ್ರಕಾಶನ ಸಂಸ್ಥೆಗೆ’ ರೂ. 5,000=00 ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಕನ್ನಡ ಪುಸ್ತಕ ಪ್ರಕಾಶನ ಸಂಸ್ಥೆಗಳು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. 

12) ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿ (ಎಲ್. ಬಸವರಾಜು ದತ್ತಿ)

2021 ಜನವರಿ - ಡಿಸೆಂಬರ್‍ವರೆಗೆ ಸಾಲಿನ ಯಾವುದೇ ಪ್ರಕಾರದ  ಉತ್ತಮ ದಲಿತ ಸಾಹಿತ್ಯ ಕೃತಿಗೆ  ರೂ. 5,000/- (ಐದು ಸಾವಿರ ರೂಪಾಯಿ)ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

13) ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿ

2021 ಜನವರಿ - ಡಿಸೆಂಬರ್‍ವರೆಗೆ ಕನ್ನಡದಲ್ಲಿ ಪ್ರಕಟಣೆಗೊಂಡ ಯಾವುದೇ ಪ್ರಕಾರದ ಶ್ರೇಷ್ಠ ಕೃತಿಯನ್ನು ಸ್ಪರ್ಧೆಗೆ ಕಳುಹಿಸಬಹುದು. ಪ್ರತಿವರ್ಷ ಕನ್ನಡದಲ್ಲಿ ಪ್ರಕಟಗೊಂಡ ಯಾವುದೇ ಪ್ರಕಾರದ ಶ್ರೇಷ್ಠ ಕೃತಿಗೆ ರೂ, 5,000/- ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. 

14) ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ

2021 ಜನವರಿ - ಡಿಸೆಂಬರ್‍ವರೆಗೆ ಪ್ರಕಟವಾದ ಶ್ರೇಷ್ಟ ಕಾದಂಬರಿಗೆ ರೂ. 5,000/-ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. 

15) ಶ್ರೀಮತಿ ಗೌರುಭಟ್ ದತ್ತಿ ಪ್ರಶಸ್ತಿ

2021 ಜನವರಿ - ಡಿಸೆಂಬರ್‍ವರೆಗೆ ಪ್ರಕಟವಾದ ಮಹಿಳೆಯರಿಗೆ ಸಂಬಂಧಿಸಿದ ಮಹಿಳೆಯರ ಲೇಖನಗಳಿಗೆ  ರೂ. 5,000/-ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

16)  ಶ್ರೀಮತಿ ಗಂಗಮ್ಮ ಶ್ರೀ ಟಿ. ಶಿವಣ್ಣ ದತ್ತಿ:

2021 ಜನವರಿಯಿಂದ ಡಿಸೆಂಬರ್ ರವರೆಗೂ ಪ್ರಕಟವಾದ ಜಾತ್ಯಾತೀತ ವಿಚಾರವನ್ನೊಳಗೊಂಡ ಕೃತಿಗೆ    5,000/- ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

17) ಡಾ. ಹಾ.ಮಾ. ನಾಯಕ ಸ್ಮಾರಕ ದತ್ತಿ ಪ್ರಶಸ್ತಿ

2021 ಜನವರಿ - ಡಿಸೆಂಬರ್‍ವರೆಗೆ  ಪ್ರಕಟವಾದ ಶ್ರೇಷ್ಠ ವಿಚಾರ ಸಾಹಿತ್ಯ ಕೃತಿಗೆ ರೂ. 5000/- ಬಹುಮಾನ ನೀಡಲಾಗುವುದು.

18) ಡಾ. ವೀಣಾ ಶಾಂತೇಶ್ವರ ದತ್ತಿ

2021 ಜನವರಿ - ಡಿಸೆಂಬರ್‍ವರೆಗೆ  ಪ್ರಕಟವಾದ ಶ್ರೇಷ್ಠ ಕಥಾ ಸಂಕಲನಕ್ಕಾಗಿ ಕೃತಿಗೆ ರೂ. 5000/- ಬಹುಮಾನ ನೀಡಲಾಗುವುದು.

19) ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿ:

2021 ಜನವರಿ - ಡಿಸೆಂಬರ್‍ವರೆಗೆ  ಪ್ರಕಟವಾದ ಮಕ್ಕಳ ಸಾಹಿತ್ಯ ಕ್ಷೇತ್ರದ ಗದ್ಯ ಪ್ರಕಾರದ ಕತೆಗೆ ಸಂಬಂಧಿಸಿದಂತೆ ಕನಿಷ್ಠ 65 ಪುಟಗಳುಳ್ಳ ಪುಸ್ತಕಕ್ಕೆ ರೂ.2000/- ಬಹುಮಾನ ನೀಡಲಾಗುವುದು. 

20) ಪಳಕಳ ಸೀತಾರಾಮಭಟ್ಟ ದತ್ತಿ:

2021 ಜನವರಿ - ಡಿಸೆಂಬರ್‍ವರೆಗೆ ಪ್ರಕಟವಾದ ಮಕ್ಕಳ ಸಾಹಿತ್ಯ ಕೃತಿಗೆ ರೂ.2000/- ಬಹುಮಾನ ನೀಡಲಾಗುವುದು. 

21) ಶ್ರೀಮತಿ ಜಯಲಕ್ಷ್ಮಿ ಮತ್ತು ಶ್ರೀ ಬಾಪು ರಾಮಣ್ಣ ದತ್ತಿ ಪ್ರಶಸ್ತಿ

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಸಣ್ಣ ಕಥಾ ಸಂಕಲನಕ್ಕೆ ರೂ. 2,000/- ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. 

22)  ದಿ|| ಗೌರಮ್ಮ ಹಾರ್ನಹಳ್ಳಿ ಕೆ. ಮಂಜಪ್ಪ ದತ್ತಿ:

    2021 ಜನವರಿಯಿಂದ ಡಿಸೆಂಬರ್‍ವರೆಗೂ ಲೇಖಕಿಯರಿಂದ ರಚಿತವಾದ ಯಾವುದೇ ಪ್ರಕಾರದ ಕೃತಿಗೆ ರೂ. 1000/- ಬಹುಮಾನ  ನೀಡಲಾಗುವುದು.

23) ಶ್ರೀಮತಿ ಜಯಲಕ್ಷ್ಮಮ್ಮ ಬಿ.ಎಸ್. ಸಣ್ಣಯ್ಯ ದತ್ತಿ:

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಪ್ರಾಚೀನ ಸಂಪಾದಿತ ಕೃತಿಗೆ ರೂ. 1000/- ಬಹುಮಾನ ನೀಡಲಾಗುವುದು.  ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು.

24) ಜಿ.ಆರ್. ರೇವಯ್ಯ ದತ್ತಿ :

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ದೀನ ದಲಿತರ ಮತ್ತು ಶೋಷಿತ ವರ್ಗಗಳ ರಕ್ಷಣೆಗೆ ಶ್ರಮಿಸುವ ವ್ಯಕ್ತಿಗಳ ಬಗ್ಗೆ ಸಾಹಿತ್ಯ ಕೃತಿಗೆ ರೂ.1000/- ಬಹುಮಾನ ನೀಡಲಾಗುವುದು. ಉದಯೋನ್ಮುಖ ಬರಹಗಾರರು/ಬರಹಗಾರ್ತಿಯರು  ಸ್ಪರ್ಧೆಯಲ್ಲಿ ಭಾಗವಹಿಸಬಹುದು.

25) ಡಾ|| ಆರ್.ಜೆ. ಗಲಗಲಿ ದತ್ತಿ :

     2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಉತ್ತಮ ಕವನ ಸಂಕಲನ ಒಂದಕ್ಕೆ ರೂ. 1000/- ಬಹುಮಾನ ನೀಡಲಾಗುವುದು. ಬೆಳಗಾವಿ ಜಿಲ್ಲೆಯ ಬರಹಗಾರರಿಗೆ ಮಾತ್ರ ಅವಕಾಶ 

26) ದಿ|| ಕಾಕೋಳು ಸರೋಜಮ್ಮ ದತ್ತಿ :

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ನಾಟಕ ಪ್ರಕಾರಕ್ಕೆ  ರೂ.1000/- ಬಹುಮಾನ ನೀಡಲಾಗುವುದು.

27) ನಾ.ಕು. ಗಣೇಶ್ ದತ್ತಿ :

2021ರಲ್ಲಿ ಪ್ರಥಮ ಕವನ ಸಂಕಲನಕ್ಕೆ ರೂ.1000=00 ಬಹುಮಾನ ನೀಡಲಾಗುವುದು. 

28) ಶ್ರೀಮತಿ ಸುಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತಿ

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಕವನ ಸಂಕಲನಕ್ಕೆ ರೂ. 1,000/- ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.  

29) ಶ್ರೀ ಹೇಮರಾಜ್ ಜಿ.ಎನ್. ಕುಶಾಲನಗರ ದತ್ತಿ ಪ್ರಶಸ್ತಿ

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಸಣ್ಣ ಕಥಾ ಸಂಕಲನಕ್ಕೆ ರೂ. 1,000/- ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. 

30) ಮಲ್ಲಿಕಾ ಪ್ರಶಸ್ತಿ ದತ್ತಿ  :

2021ರಲ್ಲಿ ಪ್ರಕಟವಾದ ಅತ್ಯುತ್ತಮ ಲೇಖಕಿಯರ ಕೃತಿಗೆ ರೂ. 500/- ಬಹುಮಾನ ನೀಡಲಾಗುವುದು.  ಹಿರಿಯ-ಕಿರಿಯ ಲೇಖಕಿಯರು ಎಂಬ ವ್ಯತ್ಯಾಸವಿಲ್ಲ. ಯಾರು ಬೇಕಾದರೂ ಭಾಗವಹಿಸಬಹುದು. ಸ್ವತಂತ್ರ ಅಥವಾ ಅನುವಾದಿತ ಕೃತಿಯಾದರೂ ಆಗಬಹುದು.

31) ಅಂತರರಾಷ್ಟ್ರೀಯ ಮಹಿಳಾ ವರ್ಷದ `ಮಹಿಳಾ ದತ್ತಿ':

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಮಹಿಳೆಯರ ಅತ್ಯುತ್ತಮ ಕೃತಿಗೆ ರೂ. 500/- ಬಹುಮಾನವನ್ನು ನೀಡಲಾಗುವುದು. ಸ್ವತಂತ್ರ ಕೃತಿಯಾಗಿರಬೇಕು. ಅನುವಾದ ಕೃತಿಗಳನ್ನಾಗಲೀ, ಪುನರ್ ಮುದ್ರಣಗೊಂಡ ಕೃತಿಗಳನ್ನಾಗಲೀ ಪರಿಗಣಿಸುವುದಿಲ್ಲ.

32)  ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ :

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಲೇಖಕಿ ಒಬ್ಬರ ಮಹತ್ವದ ಕೃತಿಗೆÀ ರೂ. 500/- ಬಹುಮಾನ ನೀಡಲಾಗುವುದು.

33) ಲಿಂ. ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ :

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಅತ್ಯುತ್ತಮ ಮಹಿಳಾ ಸಾಹಿತ್ಯದ (ಮಹಿಳೆಯರನ್ನು ಕುರಿತು ಅಥವಾ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ರಚಿತವಾದ) ಕೃತಿಗೆ ರೂ. 500/- ಬಹುಮಾನ ನೀಡಲಾಗುವುದು.

34) ಶ್ರೀಮತಿ ನೀಲಗಂಗಾ ದತ್ತಿ :

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಮಹಿಳೆಯರ ಪ್ರಬಂಧ, ಕವನ, ಕಾವ್ಯ ಮತ್ತು ಸಮಕಾಲೀನ ಮೌಲಿಕ ವಿಚಾರವುಳ್ಳ ಗ್ರಂಥಕ್ಕೆ ರೂ. 500/- ಬಹುಮಾನ ನೀಡಲಾಗುವುದು.

35) ಶ್ರೀಮತಿ ಕೆ.ಎಸ್. ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿ:

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಮಹಿಳೆಯರ ಅತ್ಯುತ್ತಮ ಕಾದಂಬರಿಗೆ ರೂ. 500/- ಬಹುಮಾನ ನೀಡಲಾಗುವುದು. ಕೃತಿ ಸ್ವತಂತ್ರವಾಗಿರಬೇಕು. ಅನುವಾದವಾಗಿರಬಾರದು.

36) ಶ್ರೀಮತಿ ಶಾರದಾ ಆರ್. ರಾವ್ ದತ್ತಿ :

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಉದಯೋನ್ಮುಖ ಮಹಿಳಾ ಬರಹಗಾರರ ಅತ್ಯುತ್ತಮ ಕೃತಿಗೆ ರೂ. 250/- ಬಹುಮಾನ ನೀಡಲಾಗುವುದು.

37) ದಿ|| ಎಚ್. ಕರಿಯಣ್ಣ ದತ್ತಿ:

     2021ರಲ್ಲಿ ಲೇಖಕಿಯರಿಂದ ರಚಿತವಾಗಿರುವ ಮಕ್ಕಳ ಪುಸ್ತಕಕ್ಕೆ ರೂ. 500/- ಬಹುಮಾನ ನೀಡಲಾಗುವುದು.

38) ಡಾ|| ಎಚ್. ನರಸಿಂಹಯ್ಯ ದತ್ತಿ :

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವಕ್ಕೆ ಸಂಬಂಧಿಸಿದ ಶ್ರೇಷ್ಠ ಕೃತಿಗೆ ರೂ.500/- ಬಹುಮಾನ ನೀಡಲಾಗುವುದು.

39) ದಿವಂಗತ ಶ್ರೀಮತಿ ಕೆ.ವಿ. ರತ್ನಮ್ಮ ದತ್ತಿ :

  2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಉದಯೋನ್ಮುಖ ಬರಹಗಾರರ  ಅತ್ಯುತ್ತಮ ಚೊಚ್ಚಲ ಪದ್ಯಕೃತಿ ಒಂದಕ್ಕೆ ರೂ. 500/- ಬಹುಮಾನ  ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು.

40)  ರತ್ನಾಕರವರ್ಣಿ-ಮುದ್ದಣ-ಅನಾಮಿಕ ದತ್ತಿ :

  2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಅತ್ಯುತ್ತಮ ಗದ್ಯಕೃತಿ ಒಂದಕ್ಕೆ ಹಾಗೂ ಅತ್ಯುತ್ತಮ ಪದ್ಯಕೃತಿ ಒಂದಕ್ಕೆ ತಲಾ ರೂ. 500/-  ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು.

41) ಪಿ. ಶಾಂತಿಲಾಲ್ ದತ್ತಿ :

  2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಜೈನ ಸಾಹಿತ್ಯ ಕುರಿತ ಯಾವುದೇ ಪ್ರಕಾರದ ಕನ್ನಡ ಪುಸ್ತಕಕ್ಕೆ ರೂ. 500/- ಬಹುಮಾನ  ನೀಡಲಾಗುವುದು.

42) ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ :

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾಗಿರುವ ಅತ್ಯುತ್ತಮವಾದ `ಜಾನಪದ ಸಾಹಿತ್ಯ ಕೃತಿ' ಒಂದಕ್ಕೆ ರೂ. 500/- ಬಹುಮಾನ ನೀಡಲಾಗುವುದು.

43) ಕುಂಬಾಸ ಪ್ರಶಸ್ತಿ ದತ್ತ್ತಿ :

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಕನ್ನಡ ಹಾಸ್ಯ ಸಾಹಿತ್ಯ ಕೃತಿಗೆ ರೂ. 500/- ಬಹುಮಾನ ನೀಡಲಾಗುವುದು. (ಹಾಸ್ಯ ಸಾಹಿತ್ಯದ ಬಗ್ಗೆ ಬರೆದಿರುವ ಪುಸ್ತಕ, ಲೇಖನ, ಚುಟುಕು ಇತ್ಯಾದಿಗಳ ಬಗ್ಗೆ ವಿವರವಾದ ಪರಿಚಯ ಬರೆದು ಕಳುಹಿಸುವುದು.)

44) ಪ್ರೊ|| ಡಿ.ಸಿ. ಅನಂತಸ್ವಾಮಿ ದತ್ತಿ :

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಅತ್ಯುತ್ತಮ ಚೊಚ್ಚಲ ಕವನ ಸಂಕಲನಕ್ಕೆ ರೂ. 500/- ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು.

45)  `ಸಿಸು' ಸಂಗಮೇಶ ದತ್ತಿ :

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಅತ್ಯುತ್ತಮ ಮಕ್ಕಳ ಸಾಹಿತ್ಯ ಕೃತಿಗೆ ರೂ. 500/- ಬಹುಮಾನ ನೀಡಲಾಗುವುದು.  ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು.

46)  ಶ್ರೀಮತಿ ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿ:

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಉತ್ತಮ ಸಾಹಿತ್ಯ ಕೃತಿಗೆ ರೂ. 500/- ಬಹುಮಾನ ನೀಡಲಾಗುವುದು (ರಾಯಚೂರು ಜಿಲ್ಲೆಯ ಬರಹಗಾರರಿಗೆ ಮಾತ್ರ ಸೀಮಿತ)

47) ಶ್ರೀ ಕೆ. ವಾಸುದೇವಾಚಾರ್ ದತ್ತಿ :

    2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಸಣ್ಣಕಥಾ ಸಂಕಲನ ಕೃತಿಗೆ ರೂ.500/- ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರು ಬೇಕಾದರು ಭಾಗವಹಿಸಬಹುದು.

48) ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ :

2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಹರಿದಾಸ ಸಾಹಿತ್ಯ ಕುರಿತ ಕೃತಿಗೆ ರೂ. 250/- ಬಹುಮಾನ ನೀಡಲಾಗುವುದು.

49) ಜಿ.ಪಿ. ರಾಜರತ್ನಂ ಸಂಸ್ಮರಣ ದತ್ತಿ: (ಮಕ್ಕಳ ಪುಸ್ತಕ ಬಹುಮಾನ ಸ್ಪರ್ಧೆ - ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರಿಗೆ ಮಾತ್ರ ಅವಕಾಶ) 

  2021 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರು ಬರೆದಿರುವ ಅತ್ಯುತ್ತಮ ಮಕ್ಕಳ ಪುಸ್ತಕಕ್ಕೆ ರೂ. 250/- ಬಹುಮಾನ ನೀಡಲಾಗುವುದು. (ಪುಸ್ತಕ 15 ವರ್ಷ ವಯಸ್ಸಿನ ಒಳಗಿರುವ ಮಕ್ಕಳು ಓದುವಂತಹ ಕೃತಿಯಾಗಿರಬೇಕು).

ಮೇಲ್ಕಂಡ ಎಲ್ಲ ಸ್ಪರ್ಧೆಗಳಿಗೂ ಅನ್ವಯಿಸುವ ನಿಯಮಗಳು:

1) ಪ್ರತಿ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-560 018. ದಿನಾಂಕ: 26-05-2022ದ ಒಳಗೆ ತಲುಪುವಂತೆ ಕಳುಹಿಸಬೇಕು. ತಡವಾಗಿ ಬಂದ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ.

2) ಪರಿಶೀಲನೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ

3) ಬಹುಮಾನದ ಬಗ್ಗೆ ಪರಿಷತ್ತು ನೇಮಿಸುವ ತೀರ್ಪುಗಾರರು ನೀಡುವ ಶಿಫಾರಸ್ಸನ್ನು ಗಮನಿಸಿ ಪರಿಷತ್ತು ಅಂತಿಮ ನಿರ್ಧಾರ ಕೈಗೊಳ್ಳುತ್ತದೆ.

4)  ಯಾವುದೇ ಪ್ರಶಸ್ತಿಗೆ ಅರ್ಹ ಗ್ರಂಥಗಳು ಬಾರದಿದ್ದಾಗ ಆ ವರ್ಷ ಪ್ರಶಸ್ತಿಯನ್ನು ನೀಡದಿರುವ ಹಕ್ಕು ಪರಿಷತ್ತಿಗೆ ಇರುತ್ತದೆ.

5) ಒಂದಕ್ಕಿಂತ ಹೆಚ್ಚು  ಗ್ರಂಥಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನದ ಹಣವನ್ನು ಹಂಚಿ ವಿತರಿಸುವ ಹಕ್ಕು ಪರಿಷತ್ತಿಗೆ ಇರುತ್ತದೆ.

6)  ಪಿಎಚ್.ಡಿ. ಗ್ರಂಥಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.

7)  ಭಾಗವಹಿಸುತ್ತಿರುವ ಸ್ಪರ್ಧೆಯ ದತ್ತಿ ಹೆಸರನ್ನು ಪುಸ್ತಕದ ಮೊದಲ ಒಳಪುಟದಲ್ಲಿ ಸ್ಪಷ್ಟವಾಗಿ ಸೂಚಿಸತಕ್ಕದ್ದು.

8) ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು ವಿಳಾಸ, ದೂರವಾಣಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸಬೇಕು.

9)  ಹೆಚ್ಚಿನ ವಿವರಗಳಿಗೆ ಸ್ವ-ವಿಳಾಸದ ಸ್ಟಾಂಪ್ ಹಚ್ಚಿದ ಲಕೋಟೆ ಇಟ್ಟು ಪತ್ರ ಬರೆಯಬಹುದು.

ಹೆಚ್ಚಿನ ಮಾಹಿತಿಯನ್ನು ಪರಿಷತ್ತಿನ ಅಂತರ್ಜಾಲ ತಾಣ www.kasapa.in ದ ಮೂಲಕ ಸಹ ಪಡೆದು ಕೊಳ್ಳಬಹುದು.


Tags

Post a Comment

0Comments

Post a Comment (0)