BEL HIGH SCHOOL - FAREWELL : SSLC STUDENTS : ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬೀಳ್ಕೋಡಿಗೆ ಸಮಾರಂಭ....

varthajala
1 minute read
0

ಬೆಂಗಳೂರು :ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯನ್ನು ಎದುರಿಸಲು ಸನ್ನದ್ಧರೋ ಬೆಂಗಳೂರಿನ ಜಾಲಹಳ್ಳಿಯ ಬಿಇಎಲ್ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂದು (ಮಾರ್ಚ 19ರಂದು) ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಪ್ರೌಢಶಾಲಾ ಸಭಾಂಗಣದಲ್ಲಿ 2021-2022ನೇ ಶೈಕ್ಷಣಿಕ ಸಾಲಿನ ಹತ್ತನೇ ತರಗತಿ ಮಕ್ಕಳಿಗೆ ಬೀಳ್ಕೋಡಿಗೆ ನೀಡಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಇಎಲ್ ಎಚ್ ಆರ್ ಹಾಗೂ ಇಂಪ್ಲಾಯ್ ರಿಲೇಷನ್ಸ್ ವಿಭಾಗದ ಡಿಜಿಎಂ ಗುರುರಾಜ್ ಎಂ ದೀಪ ಬೆಳಗಿ ಸಮಾರಂಭವನ್ನು ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಡಿಜಿಎಂ ಗುರುರಾಜ್ ಎಂ,ದೀಪ ಕತ್ತಲಿನಿಂದ ಬೆಳಕಿನೆಡೆಗೆ ನಮ್ಮನ್ನು ಕೊಂಡ್ಯೋಯುವ ಹಾಗೆ ಜ್ಞಾನದ ಬೆಳಕಿನಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನವನ್ನು ಬೆಳಗಬೇಕೆಂದ್ರು.ಮುಂದಿನ 10 ದಿನ ಅತ್ಯಂತ ಮುಖ್ಯವಾಗಿದ್ದು,







ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹೆಚ್ಚಿನ ಪರಿಶ್ರಮವಹಿಸಿ,ಪ್ರಥಮ ದರ್ಜೆಯಲ್ಲಿ ತೇರ್ಗಡಯಾಗಿ ಉತ್ತಮ ಅಂಕಗಳಿಸಲು ಹಲವು ಕಿವಿಮಾತುಗಳನ್ನು ಹೇಳಿದ್ರು.

ಕಾರ್ಯಕ್ರಮದಲ್ಲಿ ಬಿಇಎಲ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ನರಸಿಂಹಕುಮಾರ್, ಬಿಇಎಲ್ ಶಿಕ್ಷಣ ಸಂಸ್ಥೆಗಳ ಕೋಆರ್ಡಿನೇಟರ್ ಗೋಪಾಲಕೃಷ್ಣ, ಆಡಳಿತಾಧಿಕಾರಿ ರಘುಪತಿ,ಹೈಸ್ಕೂಲ್ ನ ಉಪಪ್ರಾಶುಂಪಾಲರಾದ ಟಿ ಆರ್ ಶ್ರೀನಿವಾಸ್ ಸಹ ಮಕ್ಕಳ ಭವಿಷ್ಯಕ್ಕೆ ಎಸ್ ಎಸ್ ಎಲ್ ಸಿ ಮೈಲುಗಲು ಎನ್ನುವುದನ್ನು ತಮ್ಮ ಹಿತನುಡಿಗಳ ಮೂಲಕ ವಿವರಿಸಿದ್ರು.


ಜೊತೆಗೆ ಅನೇಕ ವಿದ್ಯಾರ್ಥಿಗಳು  ತಮ್ಮ ಅನುಭವವನ್ನು ಮೆಲುಕು ಹಾಕಿದರು.ನಂತರ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವೇದಿಕೆಯನ್ನು ರಂಗೇರಿಸಿದ್ರು.

Post a Comment

0Comments

Post a Comment (0)
Today | 30, March 2025