ಮಧುಗಿರಿ : ಐತಿಹಾಸಿಕ ಶ್ರೀ ದಂಡಿನಮಾರಮ್ಮ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಡಳಿತ ಮಂಡಳಿ ಬದ್ದವಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಸೋಮಪ್ಪ ಕಡಕೋಳ ತಿಳಿಸಿದರು.
ಮಂಗಳವಾರ ಆರಂಭವಾದ ಇತಿಹಾಸ ಪ್ರಸಿದ್ಧ ದಂಡಿನ ಮಾರಮ್ಮನವರ ಜಾತ್ರಾ ಮಹೋತ್ಸವ-2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಕ್ತಾದಿಗಳ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಹಾಗೂ ಹೈಮಾಸ್ಟ್ ದೀಪವನ್ನು ಅಳವಡಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಕೊರೊನ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಅವಕಾಶ ನೀಡಿರಲಿಲ್ಲ. ಈ ಬಾರಿ ಅನುಮತಿ ನೀಡಲಾಗಿದ್ದು, ಭಕ್ತಾದಿಗಳು ನಿರ್ಲಕ್ಷ್ಯ ವಹಿಸದೆ ಜಾಗರೂಕರಾಗಿ ಪಾಲ್ಗೊಳ್ಳುವಂತೆ ತಿಳಿಸಿದರು.
ನೂತನ ತಹಸಿಲ್ದಾರ್ ಸುರೇಶ್ ಆಚಾರ್ ಮಾತನಾಡಿ, ಭಕ್ತಾದಿಗಳಿಗೆ ಈ ಬಾರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು, ಸರ್ಕಾರದ ನಿಯಮಗಳನ್ನು ಪಾಲಿಸಿ ಶಿಸ್ತಿನಿಂದ ಆಚರಿಸಿ ಭಕ್ತಿ ಅರ್ಪಿಸೋಣ ಎಂದರು.
ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸಮೂರ್ತಿ ಮಾತನಾಡಿ, ಶಕ್ತಿ ದೇವತೆ ಮಾರಮ್ಮ ತಾಯಿಯ ಕೃಪಾಶೀರ್ವಾದದಿಂದ ಈ ಬಾರಿಯೂ ಉತ್ತಮ ಮಳೆ ಬೆಳೆಯಾಗಿ ರೈತರ ಬದುಕು ಹಸನಾಗಲಿ ಎಂದರು.
ಸಾಹಿತಿ ಪೆÇ್ರ. ಮ.ಲ.ನ.ಮೂರ್ತಿ ಮಾತನಾಡಿ ಜಾತ್ರೆಗಳು ನಮ್ಮ ಪರಂಪರೆ ಧಾರ್ಮಿಕ ಹಾಗೂ ಸಾಂಸ್ಕøತಿಕ ಸಮಾವೇಶವಾಗಿದ್ದು, ಎಲ್ಲಾ ಜಾತಿ ಪಂಗಡದವರನ್ನು ಭಾವನಾತ್ಮಕವಾಗಿ ಒಗ್ಗೂಡಿಸುವ ವಿಶೇಷ ಶಕ್ತಿ ಜಾತ್ರೆಗಳಿಗೆ ಇದೆ. ಭಕ್ತರು ನಂಬಿಕೆಯಿಂದ ರಕ್ಷಣೆಗಾಗಿ ದೇವರ ಅನುಗ್ರಹ ಕರುಣಿಸುವಂತೆ ಹರಕೆ ತೀರಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ರಾಮಕೃಷ್ಣ, ಟೂಡಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ, ಸಿಪಿಐ. ಎಂ.ಎಸ್ ಸರ್ದಾರ್, ಗ್ರೇಡ್-2 ತಹಸಿಲ್ದಾರ್ ವರದರಾಜು, ಸಮಿತಿ ಸದಸ್ಯರಾದ ಎಚ್.ಟಿ.ತಿಮ್ಮೇಗೌಡ, ಹರಿನಾಥ್ ಗೌಡ, ಮಾಲಿಂಗಪ್ಪ, ಬಿ.ವೆಂಕಟೇಶಪ್ಪ, ಗೋವಿಂದರಾಜು, ಸಂಜೀವಪ್ಪ, ರಾಮೇಗೌಡ, ಲಿಂಗೇಶ್, ಪರಶುರಾಮ್, ಜಗದೀಶ್, ಅರ್ಚಕರಾದ ಲಕ್ಷ್ಮಿಕಾಂತ್ ಆಚಾರ್, ಮುರಳಿ, ಎಂ.ಎನ್.ಅರುಣ್ ಕುಮಾರ್, ಗ್ರಾಮಲೆಕ್ಕಿಗ ರಜಾಲಿ, ಪಾರುಪತ್ತೆದಾರ್ ಗಿರೀಶ್ ಹಾಗೂ ಮುಂತಾದವರಿದ್ದರು.
ವರದಿ: ನಾಗೇಶ್ ಜೀವಾ ಮಧುಗಿರಿ