ಪವಿತ್ರತೆಯ ಸಂಕೇತ ಹೋಳಿ

varthajala
0

ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಶಿವರಾತ್ರಿಯ ನಂತರ ಬರುವ ಆಧ್ಯಾತ್ಮಿಕ ಹಿನ್ನೆಲೆ ಹೊಂದಿರುವ ಹಬ್ಬವೆಂದರೆ ಹೋಳಿ. ಭಾರತ ಮಾತ್ರವಲ್ಲದೇ ಭಾರತಿಯರು ವಾಸಿಸುವ ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಯೂರೋಪ್, ಉತ್ತರ ಅಮೇರಿಕ, ಸುರೇನಾಮ್, ಗಯಾನ, ಟ್ರಿನಿಡಾಡ್, ಆಫ್ರಿಕಾ, ಮಾರಿಷಸ್, ಫ್ಯೂಜಿ ಮುಂತಾದ ದೇಶÉಗಳಲ್ಲಿ ಈ ಹಬ್ಬವನ್ನು ಬಹಳ ಸ್ನೇಹದಿಂದ ಕುಣಿದು ಕುಪ್ಪಳಿಸಿ ಆಚರಿಸಲಾಗುತ್ತದೆ. ಹೋಳಿ ಹಬ್ಬವು ಹೊಲಿಕಾ ಶಬ್ದದಿಂದ ಬಂದಿದೆ. ಉತ್ತರ ಭಾರತದಲ್ಲಿ `ಹೋಳಿ', `ಹೋಲಿಕಾ ದಹನ", `ಧುರಿಯಾ’ ಎಂದು ಕರೆದರೆ, ಮಹಾರಾಷ್ಟ್ರದಲ್ಲಿ `ಹೋಳಿ', ‘ಶಿಮಗಾ’ `ರಂಗಪಂಚಮಿ', `ಧೂಲಿವಂದನ' ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದಲ್ಲಿ `ಹೋಳಿ', ‘ಓಕಳಿ’ ‘ಕಾಮಣ’್ಣನ ಹಬ್ಬವೆಂದು ಕರೆಯಲಾಗುತ್ತದೆ. 


ಫಾಲ್ಗುಣ ಮಾಸದ ಹುಣ್ಣಿಮೆಯ ದಿನ `ಹೋಳಿ' ಹಬ್ಬವನ್ನು ಆಚರಿಸುತ್ತಾರೆ. ಆಧುನಿಕ ಯುಗದಲ್ಲಿ ಹಬ್ಬದ ಆಚರಣೆ ಸಂಪೂರ್ಣ ಬದಲಾಗಿದ್ದು, ವ್ಯಭಿಚಾರ, ಹಿಂಸಾಚಾರದ ರೂಪ ತಾಳುತ್ತಿದೆ. ಹೋಳಿಯ ಹಬ್ಬದಲ್ಲಿ ಹೋಳಿಯನ್ನು ಸುಡಲು ಕಟ್ಟಿಗೆಯ ಸಂಗ್ರಹ, ಚಂದಾ ವಸೂಲಿ, ವಾದ್ಯಗಳ ಕರ್ಕಶ ಧ್ವನಿ ಮಿತಿಮೀರುತ್ತಿವೆ. ಬಣ್ಣದ ಹಬ್ಬ ತನ್ನ ನಿಜ ಬಣ್ಣವನ್ನು ಕಳೆದುಕೊಳ್ಳುತ್ತಿದೆ.  ನೈಸರ್ಗಿಕ ಬಣ್ಣಗಳ ಬದಲಾಗಿ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಆಮ್ಲ, ರಾಸಾಯನಿಕ ಬಣ್ಣ, ಡಾಂಬರ್,  ಮುಂತಾದ ಪದಾರ್ಥಗಳನ್ನು ಬಳಸಲಾಗುತ್ತಿದೆ. ಇದರಿಂದ ನಮ್ಮ ಈ ಬಡ ದೇಶದಲ್ಲಿ ಕೋಟ್ಯಂತರ  ರೂಪಾಯಿಗಳ ಬಣ್ಣ ಹಾಗೂ ಬಟ್ಟೆಗಳು ಹಾಳುಗುತ್ತಿವೆ. ಶಾಂತಿ ಸುವ್ಯವಸ್ಥೆಗಾಗಿ ಅಪಾರ ಹಣವನ್ನು ಖರ್ಚು ಮಾಡಲಾಗುತ್ತಿದೆ. ಇದರಿಂದ ಅನೇಕರಿಗೆ ಖುಷಿಯ ಬದಲಾಗಿ ದು:ಖವಾಗುತ್ತದೆ. ದೇಶದ ಧನ ಬಡವರ ಸಹಾಯಕ್ಕೆ ಬರಲಾರದೇ ಹೋಳಿಯ ಬೂದಿಯಾಗಿ ವ್ಯರ್ಥವಾಗುತ್ತಿದೆ. ಇದರ ಪರಿಣಾಮವಾಗಿ ಹಬ್ಬದ ಆಚರಣೆ ಮಾಡುವವರ ಸಂಖ್ಯೆ ಪ್ರತಿವರ್ಷ ಕಡಿಮೆಯಾಗುತ್ತಿದೆ. ವಾಸ್ತವಿಕವಾಗಿ ಹೋಳಿಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿದು ಹಬ್ಬವನ್ನು ಆಚರಿಸಿದರೆ ಮಾನವ ಜೀವನದಲ್ಲಿ ಹೊಸತನ ಬರಲು ಸಾಧ್ಯವಿದೆ.


ನಿಜವಾದ ಹೋಳಿ ಎಂದರೆ ‘ಪವಿತ್ರತೆ’. ಪವಿತ್ರತೆಯೇ ಸುಖ ಶಾಂತಿಯ ಜನನಿ. ಪರಮಪಿತ ಪರಂಜ್ಯೋತಿ ನಿರಾಕಾರ ಪರಮಾತ್ಮನು ಪರಮಪವಿತ್ರನಾಗಿದ್ದಾನೆ. ಅವನ ಮುಖ್ಯ ಸಂದೇಶವಾಗಿದೆ -  `ಪವಿತ್ರರಾಗಿ ಯೋಗಿಗಳಾಗಿ.’ ಪವಿತ್ರತೆ ಎಂದರೆ ಬ್ರಹ್ಮಚರ್ಯವಷ್ಟೇ ಅಲ್ಲ, ಮನ-ವಚನ-ಕರ್ಮಗಳಲ್ಲಿ ಶುದ್ಧರಾಗುವುದಾಗಿದೆ. ಇದನ್ನು ಸಂಪೂರ್ಣವಾಗಿ ಪಾಲಿಸುವವನು ನಿಜವಾದ ಯೋಗಿ. ಇಂದು ಕಲಿಯುಗವು ಅಂತಿಮ ಚರಣದಲ್ಲಿದೆ. ಕಲಿಯುಗದ ಅಂತ್ಯ  ಮತ್ತು ಸತ್ಯಯುಗದ ಆರಂಭದ ಸಂದಿಗ್ಧ ಕಾಲವೇ ಸಂಗಮಯುಗ. ಪ್ರತಿಯೊಬ್ಬ ಮಾನವನಿಗೆ ಸತ್ಯಯುಗದ ದೈವಿ-ಪದವಿಯನ್ನು ಪಡೆಯುವ ಈಶ್ವರೀಯ ಜನ್ಮಸಿದ್ಧ ಅಧಿಕಾರ ಇದೆ. ಆ ಅಧಿಕಾರವನ್ನು ಸ್ವಯಂ ನಿರಾಕಾರ ಪರಮಾತ್ಮನೇ ಈ ಧರೆಗೆ ಅವತರಿಸಿ, ಈಶ್ವರೀಯ ವಿಶ್ವ ವಿದ್ಯಾಲಯದ ಮೂಲಕ ನೀಡುತ್ತಿದ್ದಾನೆ. ಆಧ್ಯಾತ್ಮಿಕ ಜ್ಞಾನ ಮತ್ತು ಸಹಜ ರಾಜಯೋಗದ ಶಿಕ್ಷಣವನ್ನು ನೀಡುತ್ತಿದ್ದಾನೆ. ಪವಿತ್ರತೆ ಹಾಗೂ ದೈವಿಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕಾಮದಹನದ ಜೊತೆ-ಜೊತೆಗೆ ಕ್ರೋಧ, ಲೋಭ, ಮೋಹ, ಅಹಂಕಾರ ಮುಂತಾದ ಅಸುರಿ ಗುಣಗಳನ್ನು ತ್ಯಾಗ ಮಾಡಬೇಕು. ಆಗ ಮಾತ್ರ ದೇವಿ-ದೇವತಾ ಪದವಿಯು ದೊರೆಯುವುದು. ಮಾನವನು ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ, ಮರ್ಯಾದ ಪುರುಷೋತ್ತಮ, ಅಹಿಂಸಾ ಪರಮೋಧರ್ಮಿ, ಸಂಪೂರ್ಣ ನಿರ್ವಿಕಾರಿ ಆಗುವನು. ಈ ನರಕದ ಮಹಾವಿನಾಶದ ನಂತರ ಸತ್ಯಯುಗವು ಬರುವುದು. ಈಗ ನಾವೆಲ್ಲರೂ ಪರಮಾತ್ಮನ ಸಂಗದಲ್ಲಿ ಇದ್ದರೆ, ಅವನ ಸಂಗದ ರಂಗಿನಿಂದ ಬರುವಂತಹ ಸತ್ಯಯುಗವೆಂಬ ಸ್ವರ್ಗದಲ್ಲಿ ದೇವಿ ದೇವತೆಗಳಾಗಿ ಜನ್ಮಪಡೆಯುತ್ತೇವೆ.’’ 


 ಯೋಗಿಗಳ ದೃಷ್ಟಿಯಲ್ಲಿ ಮನುಷ್ಯ ಸೃಷ್ಟಿಯು ವಿರಾಟ ನಾಟಕವಾಗಿದೆ. ಈ ಸೃಷ್ಟಿ ಎಂಬ ನಾಟಕದಲ್ಲಿ ಎರಡು ಬಣ್ಣಗಳ ಆಟ ನಡೆಯುತ್ತದೆ. ಒಂದು ಮಾಯೆಯ ಬಣ್ಣ, ಇನ್ನೊಂದು ಈಶ್ವರನ ಬಣ್ಣ. ಈ ರಂಗಮಂಟಪದಲ್ಲಿ ಪ್ರತಿಯೊಬ್ಬರೂ ಯಾವುದಾದರೊಂದು ಬಣ್ಣವನ್ನು ಹಚ್ಚಿಕೊಂಡಿರುತ್ತಾರೆ. ಈಶ್ವರೀಯ ಬಣ್ಣವನ್ನು ಹಚ್ಚಿಕೊಂಡಿರುವವರು ನಿಜವಾಗಿಯೂ ಯೋಗಿ ಆಗುತ್ತಾರೆ ಮತ್ತು ಮಾಯೆಯ ರಂಗಿನಲ್ಲಿ ಮುಳುಗಿರುವವರು ಭೋಗಿ ಆಗಿರುತ್ತಾರೆ.

 

    ವಾಸ್ತವವಾಗಿ `ಹೋಳಿ' ಮತ್ತು `ರಂಗಪಂಚಮಿ'ಯು ಸಂತೋಷ, ಪ್ರೀತಿ, ಸ್ನೇಹ, ಆತ್ಮೀಯತೆಯನ್ನು ವೃದ್ಧಿಸುವ ಹಬ್ಬವಾಗಿದೆ. `ಹೋಳಿ' ಹಬ್ಬವು ಅತಿ ಪ್ರಾಚೀನ ಕಾಲದಿಂದ ಆಚರಣೆಯಲ್ಲಿದೆ ಎಂದು ಭಾರತೀಯರ ನಂಬಿದ್ದಾರೆ.  ವೇದಗಳ ಕಾಲದಲ್ಲಿ ರಕ್ಷೋಹಗಂ, ಬಲಗಹಮ್ ಮುಂತಾದ ರಾಕ್ಷಸರು ವಿನಾಶದ0 ಮಂತ್ರಗಳಿಂದ `ಹೋಳಿಕಾದಹನ’ ಮಾಡುತ್ತಿದ್ದರು  ಎಂದು ಹೇಳಲಾಗಿದೆ. ಆದರೆ ವಾಸ್ತವದಲ್ಲಿ ಇದರ ಸತ್ಯಾರ್ಥವಾಗಿದೆ -`ನಮ್ಮನ್ನು ನಾವು ರಾಕ್ಷಸಿ ಆಹಾರ, ಆಚಾರ, ವಿಚಾರ ವ್ಯವಹಾರಗಳಿಂದ ರಕ್ಷಿಸಿಕೊಳ್ಳಬೇಕಾಗಿದೆ'.  `ಪಾಪಿ ತನ್ನದೇ ಆದ ಪಾಪ ಕರ್ಮಗಳಿಂದ ಸುಟ್ಟು ಹೋಗುತ್ತಾನೆ’ ಎಂಬ ಮಾತನ್ನು ಹೋಳಿಕಾ ದಹನವು ನಮಗೆ ತಿಳಿಸಿ ಕೊಡುತ್ತದೆ. ಆದ್ದರಿಂದ ನಾವು ಪಾಪಕರ್ಮಗಳಿಂದ ದೂರವಿರಬೇಕು. ನಮ್ಮ ಜೀವನದಲ್ಲಿ ದೈವಿಗುಣಗಳನ್ನು ಅಳವಡಿಸಿಕೊಳ್ಳಬೇಕು. ಹೋಳಿಕಾ ದಹನ ಮಾಡುವುದೆಂದರೆ ಕಳೆದ ವರ್ಷದ ಕಹಿ ನೆನಪುಗಳನ್ನು ಸುಟ್ಟು, ತಮ್ಮ ದುಃಖಗಳನ್ನು ಮರೆತು, ನಗುನಗುತ್ತಾ ಹೊಸ ವರ್ಷದ ಸ್ವಾಗತ ಬಯಸುವುದು. ಕಟ್ಟಿಗೆಗಳಿಂದ ಕಾಮಣ್ಣನ ದಹನ ಮಾಡದೇ ನಮ್ಮಲ್ಲಿರುವ ಕಾಮ, ಕ್ರೋಧ, ಈರ್ಷೆ ದ್ವೇಷ, ಮದ, ಮತ್ಸರಗಳನ್ನು ಸುಟ್ಟುಹಾಕಬೇಕು. ಪರಸ್ಪರ ಆತ್ಮೀಯತೆ, ಸ್ನೇಹ, ಪ್ರೀತಿ ಬೆಳೆಸಿಕೊಂಡು ಸಿಹಿ ಮಾತುಗಳನ್ನು ಆಡಬೇಕು. `ಹೋಳಿ' ಅಥವಾ `ಕಾಮಣ್ಣ-ರತಿದೇವಿ'ಯ ದಹನ ಆದ ನಂತರ ಬಣ್ಣವನ್ನೂ ಹಾಕಲಾಗುತ್ತದೆ. ಬಣ್ಣವನ್ನು ಹಾಕುವಾಗ ದೊಡ್ಡವರು, ಚಿಕ್ಕವರು ಎಂಬ ಭೇದಭಾವ ಮರೆತು ಬಿಡುತ್ತಾರೆ. ಅದರ ನಿಜವಾದ ಅರ್ಥವೇನೆಂದರೆ, ನಾವೆಲ್ಲರೂ ಒಬ್ಬ ಭಗವಂತನ ಮಕ್ಕಳೆಂದು ತಿಳಿದು ಸತ್ಸಂಗದ, ದೈವೀ ಗುಣಗಳ ಸತ್ಯವಾದ ಬಣ್ಣವನ್ನು ಹಾಕಿಕೊಂಡು ಸರ್ವರನ್ನೂ ಸಹೋದರತ್ವದ ಭಾವನೆಯಿಂದ ಕಾಣಬೇಕು. ಪರಮಪಿತ ಪರಮಾತ್ಮನ ಧ್ಯಾನ ಅಥವಾ ಸಹಜ ರಾಜಯೋಗದಿಂದ ನಮ್ಮ ಜೀವನದಲ್ಲಿ ದೈವೀ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಏಕೆಂದರೆ `ಸಂಗದಂತೆ ರಂಗು' ಎಂಬ ಗಾಯನವು ಇದೆ. ಪರಮಾತ್ಮನು ಸರ್ವ ಗುಣಗಳ ಬೆಳೆಸಿಕೊಂಡರೆ ಗುಣಮೂರ್ತಿ ಆಗಬಹುದು. ಆತ್ಮವು ಸದ್ಗುಣಗಳ ಬಣ್ಣದಲ್ಲಿ ಮಿಯ್ಯಬೇಕು. ಇದೇ ಹೋಳಿ ಹಬ್ಬದ ಸಂದೇಶವಾಗಿದೆ.

ಹಿಂದಿ ಭಾಷೆಯಲ್ಲಿ `ಹೋ-ಲಿ' ಎಂದರೆ ಆಗಿ ಹೋದದ್ದನ್ನು ಮರೆತುಬಿಡು ಎಂದರ್ಥ. ಇಂಗ್ಲೀಷ್ ಭಾಷೆಯಲ್ಲಿ `ಹೋಲಿ' ಎಂದರೆ ಪವಿತ್ರತೆ ಎಂದರ್ಥ. ನಮ್ಮ ಆಚಾರ, ವಿಚಾರ ವ್ಯವಹಾರಗಳನ್ನು ಶುದ್ಧಗೊಳಿಸಬೇಕು. ಪರಸ್ಪರರಲ್ಲಿ ಆತ್ಮೀಯತೆಯನ್ನು ಬೆಳೆಸಿಕೊಂಡು ಸದ್ಗುಣಗಳಿಂದ ಕೂಡಿದ ಸತ್ಯe್ಞÁನದ ಬಣ್ಣವನ್ನು ಹಚ್ಚಿಕೊಂಡು ಹೋಳಿಯನ್ನು ಆಚರಿಸಿದರೆ ನಮ್ಮ ಜೀವನವೂ ಮಂಗಳಮಯ(ಹೋಲಿ)ವಾಗುವುದು.

HOLI denotes for : H-hate;O-out;L-love;I-in. 

ಹೋಳಿ ಅಂದರೆ ತಿರಸ್ಕಾರ, ಆಸೂಯೆ ಹೊರ ಹಾಕಿರಿ. ಪ್ರೀತಿ ಸ್ನೇಹ ಬೆಳೆಸಿರಿ.ತಿರಸ್ಕಾರ ಸುಟ್ಟು ಹಾಕಿರಿ, ಪ್ರೀತಿಯ ಬಣ್ಣವನ್ನು ಹಚ್ಚಿರಿ, ಮೋಜು-ಮಸ್ತಿ ಖುಷಿಯಲ್ಲಿ ಇದ್ದು, ನಗುನಗುತಾ ಬಾಳಿರಿ. ಇದೆ ನಿಜವಾದ ಹೋಳಿಯ ಸಂದೇಶ.

ಹೋಳಿ ಆಡುವ ಮುನ್ನ ಎಚ್ಚರವಿರಲಿ. ಕರೋನ ಸುರಕ್ಷತೆಯ ಜೊತೆಗೆ ನಾವು ಸುರಕ್ಷಿತವಾಗಿರಬೇಕು.

1. ನೈರ್ಸಗಿಕ ಬಣ್ಣಗಳನ್ನು ಬಳಸಿರಿ. ಮನೆಯಲ್ಲಿ ಪಾಲಕ, ಬೀಟ್‍ರೂಟ್ ಮುಂತಾದನ್ನು ಬಳಸಿ ಬಣ್ಣವನ್ನು ತಯಾರ ಮಾಡಿ. ಸಾಧ್ಯವಾದರೇ ಒಣ ಬಣ್ಣಗಳನ್ನು ಬಳಸಿ.

2. ಹೋಳಿಯಾಡುವ ಮೊದಲು ನಿಮ್ಮ ಮುಖಕ್ಕೆ ಕ್ರೀಮ್ ಮತ್ತು ತಲೆಗೆ ಎಣ್ಣೆ ಹಚ್ಚಿಕೊಳ್ಳಿರಿ.

3. ಮುಖಕ್ಕೆ ಬಣ್ಣ ಹಚ್ಚುವುದು ಅಥವಾ ಹಚ್ಚಿಸಿಕೊಳ್ಳುವುದು ಬೇಡ.

4. ಸನ್‍ಗ್ಲಾಸ್ ಧರಿಸಿಕೊಂಡು ಕಣ್ಣಿನ ರಕ್ಷಣೆ ಮಾಡಿಕೊಳ್ಳಿರಿ.

5. ಚರ್ಮದ ಅಲರ್ಜಿ ಇದ್ದರೆ ಹೋಳಿ ಆಡದೇ ಇರುವುದು ಉತ್ತಮ. 

6. ಬಲವಂತವಾಗಿ ಯಾರಿಗೂ ಬಣ್ಣ ಹಾಕುವುದು ಬೇಡ. ಏಕೆಂದರೆ ಇದು ್ತ ಸಂತೋಷದ ಹಬ್ಬ. 

                                                                 --ವಿಶ್ವಾಸ. ಸೋಹೋನಿ.

  ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್,

9483937106.


Post a Comment

0Comments

Post a Comment (0)