ಬಿಇಎಲ್ ಸಿಬಿಎಸ್ ಸಿ ಶಾಲೆಯಲ್ಲಿ ಏಕ ಭಾರತ,ಶ್ರೇಷ್ಠ ಭಾರತ ಪರಿಕಲ್ಪನೆ ಅನಾವರಣ...

varthajala
0

ಬೆಂಗಳೂರು : ಬೆಂಗಳೂರಿನ‌ ಜಾಲಹಳ್ಳಿಯಲ್ಲಿರೋ ಬಿಇಎಲ್ ಸಿಬಿಎಸ್ ಸಿ ಶಾಲೆಯಲ್ಲಿ ಹ್ಯೂಮ್ಯಾನಿಟಿ ಹಾಗೂ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.ಈ ವಸ್ತುಪ್ರದರ್ಶನದ ಪ್ರಮುಖ ಧ್ಯೇಯವೇ ಏಕ ಭಾರತ,ಶ್ರೇಷ್ಠ ಭಾರತ ಪರಿಕಲ್ಪನೆಯನ್ನು ಅನಾವರಣಗೊಳಿಸುವುದಾಗಿತ್ತು.








ಈ ವಸ್ತುಪ್ರದರ್ಶದ ಮುಖ್ಯ ಅತಿಥಿಯಾಗಿ  ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ಜಂಟಿ ಆಯುಕ್ತ ಡಾ.ಎಂ.ಜಿ.ಆನಂದಕುಮಾರ್ ಆಗಮಿಸಿದ್ದರು. 

ಈ ವಸ್ತು ಪ್ರದರ್ಶನದಲ್ಲಿ ಪ್ರಮುಖವಾಗಿ ಉತ್ತರಖಾಂಡ್ ರಾಜ್ಯದ ವೈಶಿಷ್ಟ್ಯತೆಗಳು,ಅಲ್ಲಿನ ಆಚಾರ ವಿಚಾರ, ಜೀವನಶೈಲಿ,ನಿಸರ್ಗ ಸೌಂದರ್ಯವನ್ನು ಅನಾವರಣಗೊಳಿಸಲಾಯಿತು. ಪ್ರಮುಖವಾಗಿ ಉತ್ತರಖಂಡದ ಬ್ಯಾಂಕ್ ಗಳು,ಕೃಷಿ ಚಟುವಟಿಕೆಗಳು,ದೇವಾಲಯಗಳು,ಸಾಧು ಸಂಪ್ರದಾಯ, ಕಟ್ಟಿಗೆ ಹಾಗೂ ಬಿದಿರಿನ ಆರ್ಟ್ ಸೇರಿದಂತೆ ಹಲವು ವಸ್ತುಗಳನ್ನು ಪ್ರದರ್ಶಿಸಲಾಯಿತು. ಹಾಗೆಯೇ ವಿಜ್ಞಾನ ಪ್ರದರ್ಶನದಲ್ಲಿ ವಿವಿಧ ಬಗೆಯ ಉಪಗ್ರಹಗಳು,(ರಾಕೆಟ್ ಗಳು),ಸೌರವ್ಯೂಹದ ಮಾದರಿಗಳು,ಮಾಲಿನ್ಯ ನಿಯಂತ್ರಣ ಉಪಕರಣಗಳು, ಕ್ಲೀನ್ ಸಿಟಿ ಪ್ರೋಜೆಕ್ಟ್ ಸೇರಿದಂತೆ 100 ಕ್ಕೂ ಹೆಚ್ಚು ವಿಜ್ಞಾನದ ಮಾದರಿಗಳನ್ನು ಪ್ರದರ್ಶಿಸಿ ,ಮಕ್ಕಳು ಡೆಮೋ ಮಾಡಿದ್ರು.

ಒಂದರಿಂದ ಹತ್ತನೇ ತರಗತಿಯ ಮಕ್ಕಳು ಈ ಪ್ರದರ್ಶನದಲ್ಲಿ ‌ಆಟದೊಂದಿಗೆ ಪಾಠ ಕಲಿತರು.ಜೊತೆಗೆ ಭಾರತದ ಪರಂಪರೆ ಬಿಂಬಿಸುವ ವೇಷಭೂಷಣಗಳನ್ನು ಪುಟಾಣಿ ಮಕ್ಕಳು ಧರಿಸಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.ಈ ವೇಳೆ ಬಿಇಇಐಎಂಸಿಯ ಕಾರ್ಯದರ್ಶಿ ನರಸಿಂಹಕುಮಾರ್ ಎಸ್ ವಿಎನ್,ಬಿಇಇಐ ಕೋ ಆರ್ಡಿನೇಟರ್ ಗೋಪಾಲಕೃಷ್ಣ, ಬಿಇಇಐ ಸೀನಿಯರ್ ಮೇಂಬರ್ ರಂಜನ್ ಬಾರಿಕ್,ಆಡಳಿತಾಧಿಕಾರಿ ರಘುಪತಿ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಹಾಜರಿದ್ದರು.

Post a Comment

0Comments

Post a Comment (0)