"ಜ್ಞಾನ ಸಂಪಾದನೆಗಿ0ತ ಜ್ಞಾನದ ಅಳವಡಿಕೆ ಮುಖ್ಯ" ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

varthajala
0

ಬೆಂಗಳೂರು, ಮಾರ್ಚ್ 16 (ಕರ್ನಾಟಕ ವಾರ್ತೆ) :ಶೈಕ್ಷಣಿಕ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವ ಮೂಲಕ ವಿಶ್ವದಲ್ಲೇ ಭಾರತೀಯ ಶಿಕ್ಷಣ ಕ್ಷೇತ್ರ ಅಗ್ರಸ್ಥಾನ ಪಡೆಯುಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನಿಸಬೇಕು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ನಗರದಲ್ಲಿ ಎಜುಕೇಶನ್ ಪ್ರಮೋಷನ್ ಸೊಸೈಟಿ ಫಾರ್ ಇಂಡಿಯಾ ಮತ್ತು ಕಾಮೆಡ್‌ಕೆ ಆಯೋಜಿಸಿದ್ದ "ಭಾರತೀಯ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣವನ್ನು ಪರಿವರ್ತಿಸುವುದು - ಒಂದು ಆತ್ಮಾವಲೋಕನ ಮತ್ತು ನಿರೀಕ್ಷೆಗಳು" ರಾಷ್ಟಿçಯ ವಿಚಾರಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಸ್ವಾಗತಾರ್ಹ. ಇಂದಿನ ವೈದ್ಯಕೀಯ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆ ಹೆಚ್ಚಿದೆ. ನಮ್ಮಲ್ಲಿ ಉತ್ತಮ ತಂತ್ರಜ್ಞಾನ, ಉತ್ತಮ ರೋಗಶಾಸ್ತçಜ್ಞರು, ಉತ್ತಮ ವೈದ್ಯಕೀಯ ಸೌಲಭ್ಯಗಳಿವೆ. ಗೌರವಾನ್ವಿತ ಪ್ರಧಾನ ಮಂತ್ರಿಗಳ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ನಮ್ಮ ದೇಶವು ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಸಂಶೋಧನೆಯ ವಿಷಯದಲ್ಲಿ ವಿಶ್ವದೊಂದಿಗೆ ಹಂತ ಹಂತವಾಗಿ ಪ್ರಗತಿ ಹೊಂದುತ್ತಿದೆ ಎಂದು ಶ್ಲಾಘಿಸಿದರು.


ಪ್ರಾಚೀನ ಭಾರತವು ವೈದ್ಯಕೀಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ, ಮಹರ್ಷಿ ಚರಕರನ್ನು ಆಯುರ್ವೇದ ಮತ್ತು ಔಷಧದ ಪಿತಾಮಹ ಎಂದು ಪರಿಗಣಿಸಲಾಗುತ್ತದೆ ಮತ್ತು ಮಹರ್ಷಿ ಸುಶ್ರುತರನ್ನು ಶಸ್ತçಚಿಕಿತ್ಸೆಯ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಪರಿಸ್ಥಿತಿಗಳಲ್ಲಿ, ವೈದ್ಯಕೀಯ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆದರೆ, ಜ್ಞಾನ ಸಂಪಾದನೆಗಿ0ತ ಜ್ಞಾನದ ಅಳವಡಿಕೆ ಮುಖ್ಯ ಎಂದರು.

ರಷ್ಯಾ ಉಕ್ರೇನ್ ನಡುವಿನ ಯುದ್ದದಿಂದ ನಮ್ಮ ದೇಶದ ವಿದ್ಯಾರ್ಥಿಗಳು ವೈದ್ಯಕೀಯ ವಿಧ್ಯಾಭ್ಯಾಸಕ್ಕಾಗಿ ಉಕ್ರೇನ್ ಗೆ ತೆರಳಿರುವುದು ತಿಳಿದು ಬಂದಿದೆ. ಹಾಗಾಗಿ, ಭಾರತೀಯ ಶೈಕ್ಷಣಿಕ ವ್ಯವಸ್ಥೆಯನ್ನು ಸದೃಢಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ಇಡೀ ವಿಶ್ವದಲ್ಲೇ ಭಾರತೀಯ ಶಿಕ್ಷಣ ಕ್ಷೇತ್ರ ಮುಂಚೂಣಿಯಲ್ಲಿರಬೇಕು ಎಂದು ತಿಳಿಸಿದರು.


ಕೇಂದ್ರ ಸರ್ಕಾರವು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ನಾಲ್ಕು ಸ್ವಾಯತ್ತ ಮಂಡಳಿಗಳೊ0ದಿಗೆ ರಾಷ್ಟಿçಯ ವೈದ್ಯಕೀಯ ಆಯೋಗವನ್ನು ರಚಿಸಿದೆ. ಈ ಆಯೋಗವು ಕೌಶಲ್ಯ ಅಭಿವೃದ್ಧಿಗಾಗಿ ಸಿಮ್ಯುಲೇಶನ್ ಲ್ಯಾಬೊರೇಟರಿಗಳ ಪರಿಕಲ್ಪನೆಯನ್ನು ಪರಿಚಯಿಸಿದೆ, ಇದು ವಿದ್ಯಾರ್ಥಿಯು ಪದವಿಯ ನಂತರ ಅಗತ್ಯವಿರುವ ವಿದ್ಯಾರ್ಹತೆಗಳನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸುತ್ತದೆ, ಇದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಆತ್ಮವಿಶ್ವಾಸದಿಂದ ಕೆಲಸ ಮಾಡಬಹುದು ಎಂದು ತಿಳಿಸಿದರು.

ವಿಚಾರಸಂಕಿರಣದಲ್ಲಿ ಎಂ ಎಸ್ ರಾಮಯ್ಯ ಗ್ರೂಪ್ ನ ಅಧ್ಯಕ್ಷರಾದ ಡಾ.ಎಂ.ಆರ್ ಜಯರಾಮ್, ವಿಐಟಿ ಸಂಸ್ಥಾಪಕರಾದ ಡಾ.ಜಿ ವಿಶ್ವನಾಥನ್, ಭಾರತೀಯ ವೈದ್ಯಕೀಯ ಸಂಘದ ರಾಷ್ಟಿçಯ ಅಧ್ಯಕ್ಷ ಡಾ.ಎನ್ ಎನ್ ಪಿ ಸಿಂಗ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Post a Comment

0Comments

Post a Comment (0)