ಮಾನ್ಯರೆ
ನಾನು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ BA ಪದವಿಯ ವಿದ್ಯಾರ್ಥಿ.
ಕೋವಿಡ್ ಸಂಕ್ರಮಣದ ಕಾರಣ UGCಯು 2020-21 ರಲ್ಲಿ ದಾಖಲಾದ ಪ್ರಥಮ BA, B.COM ಮತ್ತು MA, M. COM; ಮತ್ತು ದ್ವಿತೀಯ ವರ್ಷದ BA ಮತ್ತು B.COM ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಂತರಿಕ ನಿಬಂಧನೆಗಳ ಆಧಾರದ ಮೇಲೆ ಉತ್ತೀರ್ಣ ಮಾಡಬೇಕೆಂದು ಆದೇಶಿಸಿತ್ತು. Ksou ಕೂಡ ಹಾಗೆಯೇ ಆ ಆದೇಶದ ಪಾಲನೆ ಮಾಡಿದೆ.
ಆದರೆ, 8000 ವಿದ್ಯಾರ್ಥಿಗಳ ಪೈಕಿ 2000 ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಕೆಲವೊಂದು ವಿಷಯಗಳ ಅನಂತರಿಕ ನಿಬಂಧನೆಗಳು ಸಲ್ಲಿಸಿದ್ದರೂ ಕೂಡ ಫಲಿತಾಂಶದಲ್ಲಿ absent ಅಂತ ತೋರಿಸಿ ಅನುತ್ತೀರ್ಣಗೊಳಿಸಲಾಗಿದೆ.
ಆಗಿರುವ ಸಮಸ್ಯೆಯ ಪರಿಹಾರಕ್ಕಾಗಿ ವಿದ್ಯಾರ್ಥಿಗಳು ಜಿಲ್ಲಾವಾರು ksou ಪ್ರಾದೇಶಿಕ ಕೇಂದ್ರಗಳಲ್ಲಿ ವಿಚಾರಿಸಿದರೆ techsupport@ksouportal.com ಗೆ ಮೈಲ್ ಮಾಡುವುದಾಗಿ ಪ್ರಾದೇಶಿಕ ಕೇಂದ್ರದ ಸಿಬ್ಬಂದಿಗಳು ಹೇಳುತ್ತಿದ್ದರೆ. ಮೈಲ್ ಮಾಡಿದರೆ ಪ್ರಾದೇಶಿಕ ಕೇಂದ್ರಗಳಿಗೆ ಭೇಟಿಯಾಗಿ ಎಂದು ಹೇಳಿ ವಿದ್ಯಾರ್ಥಿಗಳಲ್ಲಿ ksou ಬೇಜವಾಬ್ದಾರಿಯ ಮಾತುಗಳನ್ನು ಹೇಳುತ್ತಿದೆ.
ಈ ಸಮಸ್ಯೆ ಕುರಿತು ಬೇರೆ ಬೇರೆ ಜಿಲ್ಲೆಗಳ ಪ್ರಾದೇಶಿಕ ಕೇಂದ್ರಗಳಿಗೆ ಕರೆ ಮಾಡಿ ತಿಳಿದುಕೊಳ್ಳಲು ಪ್ರಯತ್ನಿಸಿದರೆ 90% ನಂಬರ್ ಗಳು swich off. 8% ಕರೆಗಳನ್ನು ಸ್ವೀಕರಿಸುತ್ತಿಲ್ಲ. ಮಿಕ್ಕ 2% ಪ್ರಾದೇಶಿಕ ಕೇಂದ್ರಗಳಿಗೆ ಈ ಸಮಸ್ಯೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿಲ್ಲ.
ಈ ಮೊದಲು ksou ತನ್ನ ಜುಲೈ ಆವೃತ್ತಿಯ ವಿದ್ಯಾರ್ಥಿಗಳಿಗೆ ಫಲಿತಾಂಶಕ್ಕೆ ಕಾಯದೆ ಮುಂದಿನ ತರಗತಿ ಅಂದರೆ ಪ್ರಥಮ ವರ್ಷದ BA,B.COM, MA ಮತ್ತು M.COMನ ವಿದ್ಯಾರ್ಥಿಗಳಿಗೆ ದ್ವಿತೀಯ ವರ್ಷಕ್ಕೆ ದಾಖಲಾಗಳು ಒತ್ತಾಯ ಪೂರ್ವಕವಾಗಿ ಆದೇಶಿಸಿತ್ತು.. ಹಾಗೂ ದ್ವಿತೀಯ ವರ್ಷದ BA ಮತ್ತು B.COM ವಿದ್ಯಾರ್ಥಿಗಳಿಗೆ ಅಂತಿಮ ವರ್ಷಕ್ಕೆ ದಾಖಲಾಗಬೇಕೆಂದು ಕಡಿಮೆ ಅವಧಿಯನ್ನು ನೀಡಿ, fee ಜ್ಯಾಸ್ತಿ ಮಾಡಿ ಎಲ್ಲ ವಿದ್ಯಾರ್ಥಿಗಳಿಗೆ ಹಣ ಕಟ್ಟುವುದಾಗಿ ಒತ್ತಾಯ ಮಾಡಿತ್ತು.
ಇದರಿಂದಾಗಿ ಆಂತರಿಕ ನಿಬಂಧನೆಗಳನ್ನು ಸಲ್ಲಿಸಿದ್ದ ವಿದ್ಯಾರ್ಥಿಗಳು ksou ಆದೇಶದಂತೆ ಮುಂದಿನ ವರ್ಷದ ದಾಖಲಾತಿಯನ್ನು ಪಡೆದುಕೊಂದಿದ್ದರೆ. ಫಲಿತಾಂಶ ಅನುತ್ತೀರ್ಣ ಎಂದು ತೋರಿಸುತ್ತಿದೆ. ಪರಿಹಾರ ಸರಿಯಾಗಿ ಹೇಳುತ್ತಿಲ್ಲ. ಪ್ರವೇಶಾತಿ ಶುಲ್ಕ ಸಲ್ಲಿಸಿ ಪ್ರವೇಶಾತಿ ಪಡೆದು ಫಲಿತಾಂಶ ಪ್ರಕಟಣೆಯ ನಂತರ ಅನುತ್ತೀರ್ಣರಾದ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಯ ಯಾವುದೇ ದಾರಿಯನ್ನು ksou ನೀಡುತ್ತಿಲ್ಲ.
ಈ ರೀತಿ ಸಾವಿರರು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ KSOUಆಟವಾಡುತ್ತಿದೆ. KSOUಬೇಜವಾಬ್ದಾರಿಗೆ ದೂರದ ಶಿಕ್ಷಣ ಪಡೆದು ಉಜ್ವಲ ಭವಿಷ್ಯದ ಕನಸು ಕಾಣುವ ಎಲ್ಲ ವಿದ್ಯಾರ್ಥಿಗಳ ಕನಸು ನುಚ್ಚು ನೂರಾಗುತ್ತಿದೆ.