1) ಹೊಲವನ್ನು ಉತ್ತು, ಬಿತ್ತದಿದ್ದರೆ, ಪ್ರಕೃತಿ ಅದನ್ನು ಹುಲ್ಲಿನಿಂದ ತುಂಬಿಸುತ್ತದೆ. ಅದೇ ರೀತಿ, ಧನಾತ್ಮಕ ಆಲೋಚನೆಗಳು ಮನಸ್ಸಿನಲ್ಲಿ ತುಂಬದಿದ್ದರೆ, ನಕಾರಾತ್ಮಕ ಆಲೋಚನೆಗಳು ತಾನೇ ತಾನಾಗಿ ಸ್ಥಾನವನ್ನು ಪಡೆದುಕೊಳ್ಳುತ್ತವೆ.
2) ಯಾರು ಏನನ್ನು ಹೊಂದಿದ್ದಾರೋ, ಅದನ್ನು ಮಾತ್ರ ಹಂಚುತ್ತಾರೆ. ಮನದಲ್ಲಿ ಸಂತೋಷ ಹೊಂದಿರುವವರು, ಸಂತೋಷವನ್ನು ಹಂಚುತ್ತಾರೆ. ಭ್ರಮೆಯನ್ನು ಹೊಂದಿರುವವರು ಭ್ರಮೆಯನ್ನೇ ಬಿತ್ತರಿಸುತ್ತಾರೆ, ಭಯವನ್ನೇ ತುಂಬಿಕೊಂಡವರು ಭಯವನ್ನೇ ವಿತರಿಸುತ್ತಾರೆ.
3) ನಾವು ಜೀವನದಲ್ಲಿ ಜೀರ್ಣವಾಗುವಷ್ಟೇ ಪಡೆಯಬೇಕು. ಅದನ್ನೇ ಜೀರ್ಣಿಸಿಕೊಳ್ಳಲು ಕಲಿಯಬೇಕು. ಏಕೆಂದರೆ, ಆಹಾರ ಜೀರ್ಣವಾಗದಿದ್ದರೆ ರೋಗಗಳು ಹೆಚ್ಚಾಗುತ್ತವೆ. ಹಣ ಜೀರ್ಣವಾಗದಿದ್ದರೆ, ತೋರಿಕೆ, ಗರ್ವ ಹೆಚ್ಚಾಗುತ್ತದೆ. ಮಾತು ಜೀರ್ಣವಾಗದಿದ್ದರೆ, ಮನಸ್ತಾಪಗಳು ಹೆಚ್ಚಾಗುತ್ತವೆ. ಹೊಗಳಿಕೆ ಜೀರ್ಣವಾಗದಿದ್ದರೆ, ದುರಹಂಕಾರ ಬೆಳೆಯುತ್ತದೆ. ತೆಗಳಿಕೆ ಜೀರ್ಣವಾಗದಿದ್ದರೆ, ದ್ವೇಷ ಬೆಳೆಯುತ್ತದೆ. ಸಂಸಾರದ ಗುಟ್ಟು ಜೀರ್ಣವಾಗದಿದ್ದರೆ, ಮನಃಕ್ಲೇಶ ಹೆಚ್ಚಾಗುತ್ತದೆ. ದುಃಖ ಜೀರ್ಣವಾಗದಿದ್ದರೆ, ಹತಾಶೆ ಬೆಳೆಯುತ್ತದೆ. ಸಂತೋಷ ಜೀರ್ಣವಾಗದಿದ್ದರೆ, ವಿಕೃತಿ ಹೆಚ್ಚಾಗುತ್ತದೆ.