ಕಾಮಧೇನು ಎಜುಕೇಷನಲ್ ಸೇವಾ ಟ್ರಸ್ಟ್ (ರಿ.)
ಬೆಂಗಳೂರು - ತುಮಕೂರು ಲೋಕಸಮಸ್ತಾ ಸುಖಿನೋ ಭವ0ತು :
ಶಿಕ್ಷಣವೇ ಶಕ್ತಿ ಎಂಬ ಆಶೋತ್ತರಗಳನ್ನು ಇಟ್ಟುಕೊಂಡು ಕೇವಲ 10 ಮಂದಿ ಸಮಾನ ಮನಸ್ಕರಾದ ಸ್ನೇಹಿತರು ಒಟ್ಟುಗೂಡಿ ಪ್ರಾರಂಭಿಸಿದ ಒಂದು ಸೇವಾ ಸಂಸ್ಥೆ ಇದು.
2010ರಲ್ಲಿ ಪ್ರಾರಂಭವಾದ ಈ ಟ್ರಸ್ಟ್ ಇದೇ ಬೆಂಗಳೂರು ಮಲ್ಲೇಶ್ವರದ ಬಡಾವಣೆಯ ವೃತ್ತದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಇಲಾಖೆಯ ಅನುಮತಿಯೊಂದಿಗೆ ದತ್ತು ಪಡೆದು, ನಿರಂತರವಾಗಿ 4 ವರ್ಷಗಳ ಕಾಲ ಅಲ್ಲಿನ ವಿದ್ಯಾರ್ಥಿಗಳಿಗೆ ಉಚಿತರವಾಗಿ ಸಮವಸ್ತç, ನೋಟ್ ಬುಕ್‌ಗಳು, ಇನ್ನಿತರೆ ಶೈಕ್ಷಣಿಕ ಸಾಮಗ್ರಿಗಳನ್ನು ನೀಡುತ್ತಾ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿತು.
ಆ ನಂತರದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೆರವು ನೀಡುವ ಬಯಕೆಯಿಂದ, ಮೊದಲಿಗೆ ತುಮಕೂರು ಬಳಿಯ ಕ್ಯಾತ್ಸಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ದತ್ತು ಪಡೆದು ಅಲ್ಲಿನ ಮಕ್ಕಳಿಗೆ ಉಚಿತ ಸಮವಸ್ತç, ನೋಟ್ ಪುಸ್ತಕಗಳು, ಬ್ಯಾಟ್‌ಗಳು, ಜಾಮಿಟ್ರಿ ಬಾಕ್ಸ್ಗಳು, ಇನ್ನಿತರೆ ಶೈಕ್ಷಣೀಕ ಸಾಮಗ್ರಿಗಳೇ ಅಲ್ಲದೇ, ಕ್ರೀಡಾ ಸಾಮಗ್ರಿಗಳನ್ನು ನೀಡುತ್ತಾ ಅಲ್ಲಿನ ವಿದ್ಯಾರ್ಥಿಗಳು ಸವಾಂಗೀಣ ಪ್ರಗತಿ ಹೊಂದಲು ಬೇಕಾದ ಎಲ್ಲಾ ಸೌಲಭ್ಯಗಳು, ಸಂಪನ್ಮೂಲ ವ್ಯಕ್ತಿಗಳಿಂದ ವ್ಯಕ್ತಿತ್ವ ವಿಕಸನ ತರಗತಿಗಳನ್ನು ನಡೆಸುತ್ತಾ ಬಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 100% ರಷ್ಟು ಫಲಿತಾಂಶ ಬರುವಷ್ಟು ಮಟ್ಟಿಗೆ ಪ್ರೋತ್ಸಾಹ ನೀಡಲಾಯಿತು.
ಈ ನಮ್ಮ ಟ್ರಸ್ಟಿನ ಉದ್ದೇಶ ಕೇವಲ ಶೈಕ್ಷಣಿಕ ಪ್ರಗತಿ ಮಾತ್ರವಾಗಿರದೆ, ಮೌಲ್ಯಾಧಾರಿತ ಶಿಕ್ಷಣ, ರಾಷ್ಟಿçಯ ಭಾವೈಕ್ಯತೆ, ರಾಷ್ಟಿçÃಯ ಹಬ್ಬಗಳ ಆರ್ಥಪೂರ್ಣ ಆಚರಣೆ, ಪ್ರತಿ ಶಾಲೆಯಲ್ಲಿ ಗುರುವಂದನಾ ಚಾತ್ರಾಭಿ ನಂದನ”, ಪ್ರತಿಭಾ ಪುರಸ್ಕಾರ, ಹೀಗೆ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸುತ್ತಾ, ಎಲ್ಲಾ ಶಾಲೆಗಳ್ಲಲೂ ಉತ್ತಮ ಪಲಿತಾಂಶ ಬರುವಂತೆ ಮಾರ್ಗದರ್ಶನ ಮಾಡಲಾಗುತ್ತಿದೆ.
ಈ ನಮ್ಮ ಸೇವಾ ಕಾರ್ಯದಲ್ಲಿ ಇದೀಗ: 1. ಸ. ಪ್ರೌಢಶಾಲೆ, ಶೆಟ್ಟಿಗೆರೆ - ಕುಣಿಗಲ್ ತಾ., 2. ಸ. ಹ್ಯಾಂಡ್ ಪೋಸ್ಟ್ ಪ್ರೌಢಶಾಲೆ - ಮಾಗಡಿ ತಾ., 3. ಸ. ಪ್ರಾ. ಶಾಲೆ, ದೇವರೊಸಹಳ್ಳಿ - ನೆಲಮಂಗಲ ತಾ., 4. ಜೆ.ಪಿ. ಶಾಲೆ : 1 ರಿಂದ 10ನೇ ತರಗತಿ - ತುಮಕೂರು 5. ಸ.ಪ್ರಾ. ಶಾಲೆ,ಯಲಿಯೂರು - ದೇವನಹಳ್ಳಿ ತಾ., 6. ಶ್ರಿ ರಾಮಕೃಷ್ಣ ಗ್ರಾಮಾಂತರ ಪ್ರೌ. ಶಾಲೆ, ಬೆಟ್ಟಕೋಟೆ, ದೇವನಹಳ್ಳಿ ತಾ.,
ಈ ಎಲ್ಲಾ ಶಾಲಾ ಮಕ್ಕಳಿಗೆ ಅಂದರೆ ಪ್ರತಿವರ್ಷ 1600 ಮಂದಿ ವಿದ್ಯಾರ್ಥಿಗಳಿಗೆ ಮೇಲೆ ತಿಳಿಸಿದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ಇದೀಗ ಟ್ರಸ್ಟ್ನ ಸದಸ್ಯರ ಸಂಖ್ಯೆ 68ಕ್ಕೆ ಏರಿರುವುದು ಸಂತೋಷದ ವಿಷಯವೇ.