ಸರ್ವಮೂಲದಂತಹ ಅದ್ಭುತ ಜ್ಞಾನಭಂಡಾರವನ್ನೂ ನಾಡಿಗೆ ಕೊಟ್ಟ ಶ್ರೀ ಮಧ್ವಾಚಾರ್ಯರು

varthajala
0

ಇಂದು ಮಧ್ವನವಮಿ ಮಧ್ವಾಚಾರ್ಯರು

 ಆಚಾರ್ಯ ಮಧ್ವರು ಅಚ್ಚ ಕನ್ನಡಿಗರು. ಕನ್ನಡನಾಡಿನ ಪಡುಕಡಲ ತೀರದ ಉಡುಪಿಯ ಸಮೀಪದ ಪುಟ್ಟಹಳ್ಳಿ 'ಪಾಜಕ' ಆಚಾರ್ಯರ ಜನ್ಮಭೂಮಿ. ಪಾಜಕ ಪ್ರಾಕೃತಿಕವಾಗಿ ತುಂಬ ಸುಂದರವಾದ ಹಳ್ಳಿ. ಅಕ್ಕಪಕ್ಕದಲ್ಲಿ ಎರಡು ಪುಟ್ಟ ಬೆಟ್ಟಗಳು. ಒಂದರ ತುದಿಯಲ್ಲಿ ತಾಯಿ ದುರ್ಗೆಯ ಪ್ರಾಚೀನ ಗುಡಿ. ಇನ್ನೊಂದು ಬದಿಯ ಬಂಡೆಬೆಟ್ಟದಲ್ಲಿ ಪರಶುರಾಮನ ಗುಡಿ. ಎರಡು ಬೆಟ್ಟಗಳ ಬುಡದಲ್ಲಿ ಸಸ್ಯ ಶ್ಯಾಮಲವಾದ ಪುಟ್ಟಹಳ್ಳಿ ಪಾಜಕ. ತತ್ತವಾದವನ್ನೂ, ಉಡುಪಿಯ ಶ್ರೀಕೃಷ್ಣನನ್ನೂ, ಸರ್ವಮೂಲದಂತಹ ಅದ್ಭುತ ಜ್ಞಾನಭಂಡಾರವನ್ನೂ ನಮ್ಮ ನಾಡಿಗೆ ಕೊಟ್ಟ ಯತಿವರ್ಯ ಮಧ್ವರು ವಿಜಯದಶಮಿಯ ದಿನದಂದು ಜನ್ಮ ತಳೆದವರು.





ಇಂದು (೧೦-೨-೨೦೨೨ ಗುರುವಾರ) ಶ್ರೀ ಮಧ್ವನವಮಿ ಈ ಸಂದರ್ಭದಲ್ಲಿ ಕರ್ನಾಟಕದ ಪ್ರತಿಯೊಂದು ರಾಘವೇಂದ್ರ ಸ್ವಾಮಿಗಳವರ ದೇವಾಲಯದಲ್ಲಿ ಮಧ್ವನವಮಿಯನ್ನು ಮಂತ್ರೋದ್ಘಾರಗಳಿ0ದ ಆಚರಿಸುವುದುಂಟು. 

ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ರಾಣಿ ಪೇಟೆಯಲ್ಲಿ ಶ್ರೀ ಮಧ್ವನವಮಿಯನ್ನು ಸಡಗರ ಸಂಭ್ರಮಗಳಿAದ ಆಚರಿಸಲಾಯಿತು. ಶ್ರೀಮಠದ ಮುಖ್ಯಸ್ಥರಾದ ತಿರುಮಲ್ಲೇಶ್ ಅವರು ವಾರ್ತಾಜಾಲದೊಂದಿಗೆ ಮಾತನಾಡಿ, ಈ ಬಾರಿಯೂ ಎಂದಿನ0ತೆ ಆಚರಿಸಲಾಗಿದೆ. ಸಾರ್ವಜನಿಕರು ಪ್ರತಿ ವರ್ಷದಂತೆ ಬಹಳಷ್ಟು ಜನ ಆಗಮಿಸಿದ್ದುದು ಸಂತೋಷ ತಂದಿದೆ ಎಂದರು.

Post a Comment

0Comments

Post a Comment (0)