ಬೆಂಗಳೂರಿನ ಬನಶಂಕರಿ 3ನೇ ಹಂತದಲ್ಲಿರುವ ಗುಪ್ತಾ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರೇಮಿಗಳ ದಿನಾಚರಣೆಯನ್ನು ವಿಭಿನ್ನ ರೀತಿಯಲ್ಲಿ ಸ್ವಯಂಪ್ರೇರಿತ ರಕ್ತದಾನ ಮಾಡುವುದರ ಮೂಲಕ ಆಚರಿಸಿಕೊಂಡಿತು. ಈ ಕಾರ್ಯಕ್ರಮವನ್ನು ಲಯನ್ಸ್ ಸಂಸ್ಥೆಯ ಸಹಯೋಗದೊಂದಿಗೆ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕನ್ನಡ ಚಲನಚಿತ್ರದ ನಟರು, ಗಾಯಕರು ಆದ ಸುನಿಲ್ ರಾವ್ ಮಾತನಾಡುತ್ತಾ ವಿಶ್ವದಾದ್ಯಂತ ಇಂದು ಪ್ರೇಮಿಗಳ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಸಂದAರ್ಭದಲ್ಲಿ ಗುಪ್ತಾ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ತಮ್ಮಲ್ಲಿರುವ ಪ್ರೀತಿ, ಪ್ರೇಮವನ್ನು ತೋರ್ಪಡಿಸಿಕೊಂಡಿರುವುದು ಶ್ಷಾಘನೀಯವಾದ ವಿಚಾರ. ಗುಪ್ತಾ ಕಾಲೇಜು ಕಳೆದ 16 ವರ್ಷಗಳಿಂದ ಪ್ರೇಮಿಗಳ ದಿನದಂದು ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಪ್ರೇಮಿಗಳ ಎಂದ ತಕ್ಷಣ ಗಂಡು ಮತ್ತು ಹೆಣ್ಣು ಪ್ರೀತಿಯ ಸಂಬAಧವನ್ನು ಇದು ಇನ್ನೂಬ್ಬರ ಜೀವನವನ್ನು ಉಳಿಸುವುದು ಆಗಿದೆ ಎಂದರು..
ಈ ಕಾರ್ಯಕ್ರಮದಲ್ಲಿ ಗುಪ್ತಾ ಕಾಲೇಜಿನ ಪ್ರಾಂಶುಪಾಲರಾದAತ ಶ್ರೀಯುತ ಸುಧಾಕರ್ ಜಿ.ಆರ್. ಅವರು ಮಾತನಾಡುತ್ತಾ ಗುಲಾಬಿ ಹೂ ಹಂಚಿ ಪ್ರೇಮಿಗಳ ದಿನಾ ಆಚರಿಸುವ ಬದಲು ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎನ್ನುತ್ತಾ, ಗುಪ್ತಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿವರ್ಗದವರನ್ನು ಅಭಿನಂದಿಸಿ ಇಂತಹ ಕಾರ್ಯಕ್ರಮಗಳಿಗೆ ಯುವಜನತೆಯ ಬೆಂಬಲ ತುಂಬ ಅಗತ್ಯ ಎಂದರು,
ಈ ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಲಯನ್ಸ್ ಶಿವ ನಂಜಯ್ಯ, ಡಾ|| ಅನಿತ ಪ್ರಸಾದ್, ಲಯನ್ಸ್ ಶ್ರೀ ಮನೋಜ್ ಕುಮಾರ್, ಲಯನ್ಸ್ ಶ್ರೀನಾಥ್ ಹಾಗೂ ಲಯನ್ಸ್ ಮುರಳಿ ರವರು ಭಾಗವಹಿಸಿದ್ದರು.