ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪ ಅವರು ಎಲ್ಲರಿಗೂ ಮಾದರಿ

varthajala
0

ಮಧುಗಿರಿ : ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪ ಅವರು ಮೌನವಾಗಿ ಕಾವ್ಯ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮೂಡಿಸಿದ್ದಾರೆಂದು  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ಮುನೀಂದ್ರಕುಮಾರ್ ತಿಳಿಸಿದರು.

ಪಟ್ಟಣದ ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪ ಹಾಗೂ ಸಾಹಿತಿ ಡಾ.ದೊಡ್ಡರಂಗೇಗೌಡ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,

ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಂದರು. ರಾಷ್ಟ್ರಕವಿ ಅವರ ಸಾಹಿತ್ಯ ಅಡಿಗರ ತಲೆಮಾರಿನಲ್ಲಿ ತಮ್ಮ ವಿಶಿಷ್ಟ ಧ್ವನಿಯಿಂದ ವೈವಿಧ್ಯಮಯ ಕಾಳಜಿಗಳಿಂದ ತುಂಬಾ ಮಹತ್ವದ್ದಾಗಿದೆ. ಬಡತನ ಬವಣೆಯ ಬದುಕು ನಡೆಸಿದರೂ  ಅವರು ಮೌಲ್ಯಗಳನ್ನು ಬಿಡಲಿಲ್ಲ. ಬದುಕನ್ನು ಕಟ್ಟಿಕೊಡುವ ಮೀಮಾಂಸೆ ಅವರ ಕಾವ್ಯದಲ್ಲಿ ಜೀವನ ಸಮೃದ್ಧ ಪ್ರಕೃತಿ ಮತ್ತು ಮಾನವ ಕೇಂದ್ರಿತ  ಸಮಾಜ ಚಿತ್ರಣವನ್ನು ಕಾಣುತ್ತೇವೆ ಎಂದರು.

ಲಾಲ್ ಬಹಾದ್ದೂರ್ ಐಟಿಐ ಕಾಲೇಜು ಉಪನ್ಯಾಸಕ ಮಲ್ಲಿಕಾರ್ಜುನಯ್ಯ ಮಾತನಾಡಿ, ಸಾಹಿತಿ ಡಾ.ದೊಡ್ಡರಂಗೇಗೌಡರು ಭಾವಗೀತೆಗಳ ಮೂಲಕ ಜನರ ಮನಗೆದ್ದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ದೊಡ್ಡ ಸಾಹಿತಿಯಾಗಿ ಹೊರಹುಮ್ಮಿದ್ದಾರೆ.140 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಇವರು ಮಧುಗಿರಿ ತಾಲ್ಲೂಕಿನ ಕುರುಬರಹಳ್ಳಿಯಲ್ಲಿ ಜನಿಸಿದ್ದು ನಮಗೆ ಸಂತಸ ತಂದಿದೆ ಎಂದರು. 

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಸಹನಾ ನಾಗೇಶ್ , ಪ್ರಧಾನಕಾರ್ಯದರ್ಶಿಗಳಾದ ಎಂ.ಎಸ್.ಶಂಕರನಾರಾಯಣ, ರಂಗಧಾಮಯ್ಯ , ನಿರ್ದೇಶಕರಾದ ಜಗದೀಶ್ ಕುಮಾರ್ , ಎಂ.ವಿ.ಮೂಡ್ಲಿಗಿರೀಶ್,  ವೀಣಾ ಶ್ರೀನಿವಾಸ್ , ಉಮಾ ಮಲ್ಲೇಶ್ , ಭಾಗ್ಯಮ್ಮ , ಶಿಕ್ಷಕ ಮಂಜುನಾಥ್ ಇದ್ದರು.

Post a Comment

0Comments

Post a Comment (0)