ಮೋದಿ ದುರಾಡಳಿತ ಅವಧಿಯಲ್ಲಿ 25 ಸಾವಿರ ಜನರು ಆತ್ಮಹತ್ಯೆಗೆ ಶರಣಾಗಿದ್ಧಾರೆ

varthajala
0

ಪ್ರಧಾನಿ ನರೇಂದ್ರ ಮೋದಿ ದುರಾಡಳಿತದಲ್ಲಿ ಅತಿ ಹೆಚ್ಚು  ಅನ್ನದಾತರು, ನಿರುದ್ಯೋಗಿಗಳು,ಸಣ್ಣ ಉದ್ದಿಮೆದಾರರು, ಸಾಲದ ಸುಳಿಗೆ ಸಿಕ್ಕಿ ಕೇವಲ 4ವರ್ಷದ ಅವಧಿಯಲ್ಲಿ 25000 ಜನರು  ಆತ್ಮಹತ್ಯೆಗೆ ಶರಣಾಗಿದ್ಧಾರೆ  ಮೃತಪಟ್ಟ  ಕುಟುಂಬಗಳಿಗೆ ಆರ್ಥಿಕ  ಪರಿಹಾರ ನೀಡದ ಮೋದಿ ಸರ್ಕಾರ ದೇಶದ ಆರ್ಥಿಕ ಪರಿಸ್ಥಿತಿಯನ್ನು ಪಾತಾಳಕ್ಕೆ ತಳ್ಳಿ ದಾಖಲೆ ಮೊತ್ತದ ಸಾಲವನ್ನು ಮಾಡಿ ಮೋಜಿನಲ್ಲಿ ಮುಳುಗಿದೆ ಎಂಬುದಕ್ಕೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಲೋಕಸಭೆಯಲ್ಲಿ ನೀಡಿರುವ ಮಾಹಿತಿಯ  ಸಾಕ್ಷಿಯಾಗಿದೆ,

ಕೇವಲ ಪ್ರಚಾರ ಭಾಷಣಗಳಲ್ಲಿ ಮುಳುಗಿ ದೇಶದ ಅಭಿವೃದ್ಧಿಯನ್ನು ಕಡೆಗಣಿಸಿ ದೇಶದ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ 8 ವರ್ಷಗಳ ಕಾಲ ಆಡಳಿತ ನಡೆಸಿ ಜನರನ್ನು ನಿರ್ಗತಿಕರನ್ನಾಗಿ ಮಾಡಿದ ಕೀರ್ತಿ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ, 

ಆಡಳಿತ ಪಕ್ಷದ ವೈಫಲ್ಯವನ್ನು ವಿರೋಧ ಪಕ್ಷಗಳಿಗೆ ಕಟ್ಟುವ ಕುತಂತ್ರವನ್ನೂ ನರೇಂದ್ರಮೋದಿ ನಿತ್ಯವೂ ಹೆಣೆಯುತ್ತಲೇ ಇರುತ್ತಾರೆ ಮೋದಿಯ ಈ ಕುತಂತ್ರ ಇಂದು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅರಿವಾಗಿದೆ ಮೋದಿ ಕೇವಲ ವಿದೇಶ ಸುತ್ತಲೂ ಬಟ್ಟೆ ಧರಿಸಲು ಪ್ರಚಾರ ಮಾಡಲು ಮಾಡಲು ಮಾತ್ರ  ಸೀಮಿತ ಎಂದು ಈಗ ಬಹಿರಂಗವಾಗಿದೆ, 

ದೇಶದ ಇತಿಹಾಸದಲ್ಲೇ ನರೇಂದ್ರ ಮೋದಿ ಎಂಬುವ ವ್ಯಕ್ತಿ ದೇಶದ ಜನರಿಗೆ ನೀಡಿದ ಸುಳ್ಳಿನ ಭರವಸೆಗಳು ದಾಖಲೆ ಮೀರಿ ಹೋಗಿದೆ ಇಂತಹ ಸುಳ್ಳಿನಿಂದ ಇಂದು ರೈತರು ಸಣ್ಣ ಉದ್ದಿಮೆದಾರರು ನಿರ್ಗತಿಕರಾಗಿದ್ದಾರೆ ಹಾಗೂ  ಉದ್ಯೋಗದಲ್ಲಿ ನಿರತರಾಗಿದ್ದವರು ನಿರುದ್ಯೋಗಿಗಳಾಗಿದ್ದಾರೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವ ಕಾರ್ಯಕ್ರಮವನ್ನು ಕೇಂದ್ರ ಬಿಜೆಪಿ ಸರ್ಕಾರ ಇದುವರೆಗೂ ಜಾರಿಗೆ ತರಲಿಲ್ಲ .



ನರೇಂದ್ರ ಮೋದಿ ದೇಶದ ಪ್ರಧಾನಿಯಾದ ನಂತರ ಇಡೀ ದೇಶ ಜನ ಇಂದು ಅತ್ಯಂತ ಸಂಕಷ್ಟದಲ್ಲಿ ಮುಳುಗಿದ್ದಾರೆ  ಕರೋನ  ಅಲೆಗೆ ಸಿಲುಕಿ ಜೀವ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ನರೇಂದ್ರ ಮೋದಿ ಸರ್ಕಾರ,  ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಮೋದಿ ಪ್ರಸ್ತುತ ಕರ್ನಾಟಕದಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳಲ್ಲಿ  ಸಚಿವರು ಸಂಸದರು ಶಾಸಕರು ಬಿಜೆಪಿಯ   ಕುಟುಂಬದ ಸದಸ್ಯರೇ ಹೆಚ್ಚು  ಎಂಬುದನ್ನು ಮರೆತು ಹೋಗಿದ್ದಾರೆ

ವಿರೋಧ ಪಕ್ಷಕ್ಕಿಂತ ಆಡಳಿತ ಪಕ್ಷ ಬಿಜೆಪಿಯಲ್ಲಿ ಅತಿಹೆಚ್ಚು ಕುಟುಂಬ ರಾಜಕೀಯ ಎಂಬುದನ್ನು ನರೇಂದ್ರ ಮೋದಿ ಮೊದಲು ಅರ್ಥೈಸಿಕೊಳ್ಳಬೇಕು 

ನಿರುದ್ಯೋಗ ನಿವಾರಿಸಲು ಹಾಗೂ  ಸಂಕಷ್ಟದಲ್ಲಿರುವ ಜನತೆಗೆ ಸೂಕ್ತ ಪರಿಹಾರ ಒದಗಿಸಲು ವಿಫಲವಾಗಿರುವ  ನರೇಂದ್ರ ಮೋದಿ ಸರ್ಕಾರದ  ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ  ಎಸ್. ಮನೋಹರ್,             ಜಿ.ಜನಾರ್ದನ್, ಎ.ಆನಂದ್, ಪುಟ್ಟರಾಜು, ಪ್ರಕಾಶ್,ತೇಜಸ್ ಕುಮಾರ್,  ಚಂದ್ರಶೇಖರ್, ಅನಿಲ್,ವೆಂಕಟೇಶ್, ವೆಂಕಟೇಶ್, ಉಮೇಶ್,ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

Post a Comment

0Comments

Post a Comment (0)