G.L.Hegde : Yakshagana Academy : ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಡಾ. ಜಿ.ಎಲ್.ಹೆಗಡೆ

varthajala
0

ಬೆಂಗಳೂರು, ಜನವರಿ 14, (ಕರ್ನಾಟಕ ವಾರ್ತೆ) : ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅವರು ಶುಕ್ರವಾರ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.


  ಬಳಿಕ ಮಾತನಾಡಿದ ಜಿ.ಎಲ್.ಹೆಗಡೆ, ಯಕ್ಷಗಾನ ಉಳಿದರೆ ಕನ್ನಡ ಉಳಿಯುತ್ತದೆ. ಅಕಾಡೆಮಿಯೂ ಉಳಿಯುತ್ತದೆ. ಯಕ್ಷಗಾನ ರಾಜ್ಯದ, ದೇಶದ ಕಲೆಯಾಗಬೇಕು. ಪ್ರಪಂಚದ ಎಲ್ಲಡೆ ಮನ ಗೆಲ್ಲಿಸುವ ಕೆಲಸ ಆಗಬೇಕು. ಎಲ್ಲರೂ ಸೇರಿ ಯಕ್ಷಗಾನ, ಮೂಡಲಪಾಯದ ಏಳ್ಗೆಗೆ ಕೆಲಸ ಮಾಡಬೇಕು. ಎಲ್ಲರೂ ಸೇರಿ ಒಂದಾಗಿ ಕೆಲಸ ಮಾಡಬೇಕಿದೆ. ಕಲೆಯನ್ನು ಜನ, ಸರಕಾರ ಎರಡೂ ಸೇರಿ ಉಳಿಸಿ ಬೆಳೆಸಬೇಕು ಎಂದರು.
  ಯಕ್ಷಗಾನ ಅಕಾಡೆಮಿ ನೀಡುವ ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಪ್ರದಾನ ಆಗಬೇಕಾಗಿದೆ. ಕೋವಿಡ್ ಸೋಂಕಿನ ಪರಿಣಾಮ ನೋಡಿಕೊಂಡು, ಸಚಿವರ ಜೊತೆ ಸಮಾಲೋಚಿಸಿ, ಪ್ರಶಸ್ತಿ ಪ್ರದಾನದ ದಿನಾಂಕ ನಿಗದಿ ಮಾಡಲಾಗುತ್ತದೆ. ಯಕ್ಷಗಾನದ ಪರಿಚಾರಕರಾದ ನಮಗೆ ಇಂಥದೊಂದು ಸೇವೆ ಸಲ್ಲಿಸಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಈ ಜವಬ್ದಾರಿ ನಿರ್ವಹಿಸಲು ಅವಕಾಶ ಕೊಟ್ಟವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕೂಡ  ತಿಳಿಸಿದರು.

  ಈ ಸಂದರ್ಭದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಎಸ್.ಹೆಚ್. ಶಿವರುದ್ರಪ್ಪ, ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ನಮ್ರತ, ಸದಸ್ಯರಾದ ಶ್ರೀನಿವಾಸ ಸಾಸ್ತಾನ, ಕೆ.ಎಂ.ಶೇಖರ, ಹಾಗೂ ಸೆಲ್ಕೋ ಇಂಡಿಯಾದ ಸಿಇಓ ಮೋಹನ ಹೆಗಡೆ ಹೆರವಟ್ಟ, ಹಿರಿಯ ಲೆಕ್ಕಪರಿಶೋಧಕ ಗೋಪಾಲಕೃಷ್ಣ ಹೆಗಡೆ, ಡಾ. ಶ್ರೀಪಾದ ಹುಕ್ಲಮಕ್ಕಿ, ಯಕ್ಷಗಾನ ಸಂಶೋಧಕಿ ಮಮತಾ ಜೋಶಿ, ಉದ್ಯಮಿ ಶಾಂತಾರಾಮ ಭಟ್ಟ ಇತರರು ಇದ್ದರು.

Tags

Post a Comment

0Comments

Post a Comment (0)