ಚೈತನ್ಯಶ್ರೀ ಕರ್ನಾಟಕರತ್ನ ಪ್ರಶಸ್ತಿ ಪ್ರದಾನ

varthajala
0

ಅಜೆಕಾರು: ಹಿರಿಯ ಪತ್ರಕರ್ತ, ಸಂಘಟಕ ಡಾ.ಶೇಖರ ಅಜೆಕಾರು, ಡಿಸೇಲ್ ಮೆಕಾನಿಕ್ ಆಗಿ ೨೫ ವರ್ಷದ ಸಾರ್ಥಕ ಸೇವೆಗೈದ ಸಾಮಾಜಿಕ ಸೇವಾಕರ್ತ ಸಾಣೂರ್ ಅರುಣ್ ಶೆಟ್ಟಿಗಾರ್ ಮತ್ತು ಉದಯೋನ್ಮುಖ ಸಾಕ್ಸೋಫೋನ್ ಕಲಾವಿದೆ ಅನ್ವಿತ ವಿಟ್ಲ ಅವರಿಗೆ ಕಥಾಬಿಂಧು ಪ್ರಕಾಶನ ನೀಡುವ ೨೦೨೨ ವರ್ಷದ ಪ್ರಯಿಷ್ಠಿತ ಚೈತನ್ಯಶ್ರೀ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಮಂಗಳೂರಿನ ಹೊಟೇಲ್ ವುಡ್‌ಲ್ಯಾಂಡ್ಸ್‌ನಲ್ಲಿ ಸೋಮವಾರ ಪ್ರದಾನಿಸಿದರು.

ಶಿಶಿರ ಕಾವ್ಯ ಸಂಭ್ರಮದಲ್ಲಿ ಸಾಧಕರನ್ನು ಕನ್ನಡದ ಸೇವೆಯಲ್ಲಿ ತೊಡಗಿದವರನ್ನು ರಾಜ್ಯಮಟ್ಟದ ಪ್ರಶಸ್ತಿ ನೀಡುವ ಮೂಲಕ ಕಥಾ ಬಿಂಧು ಪ್ರಕಾಶನ ಸತ್ಕಾರ್ಯವನ್ನೇ ಮಾಡುತ್ತಿದೆ ಎಂದು ಪುನರೂರು ಹೇಳಿದರು.

ಕಲಾವಿದ ಬಿ.ಕೆ.ಮಾಧವರಾವ್ ಅವರನ್ನು ಅಭಿನಂದಿಸಲಾಯಿತು. ಶ್ರೀ ಮಾತಾ ವೈಷ್ಣೋದೇವಿ ಕೃತಿಯ ಮೂಲಕ ರಾಜ್ಯದ ಗಮನಸೆಳೆದಿರುವ ಸಾಹಿತಿ ಕೆ.ವಿ.ಲಕ್ಷ್ಮಣ ಮೂರ್ತಿ ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪಂಕಜಾ ಮುಡಿಪು ಅವರ ಗೊಂಚಲು ಕೃತಿ ಬಿಡುಗಡೆಯಾಯಿತು. ಯಾರಿಗೂ ಒಳ್ಳೆಯದಾದರೂ ನಮಗೆ ಸಂತೋಷವಾಗ ಬೇಕು, ನಾವು ಕೂಡಾ ಸಾಧನೆಯ ಮೂಲಕ ಆ ಎತ್ತರಕ್ಕೆ ಏರ ಬೇಕು ಎಂದು ಸನ್ಮಾನಕ್ಕೆ ಉತ್ತರಿಸಿದ ಡಾ.ಶೇಖರ ಅಜೆಕಾರು ಹೇಳಿದರು.
ಪುತ್ತೂರಿನಿಂದ ಹತ್ತೂರಿಗೆ ಕೃತಿಯ ಲೇಖಕ ಬೆಟ್ಟಂಪಾಡಿ ಸುಂದರ್ ಶೆಟ್ಟಿ, ಕಥಾ ಬಿಂಧು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್, ಸುನೀತಾ ಪ್ರದೀಪ್ ಕುಮಾರ್, ಇನ್ಪೋಸಿಸ್ ರಶ್ಮಿ ಸನಿಲ್, ಮಂಜುಶ್ರೀ ಎನ್.ನಲ್ಕ, ಶಾಂತಾ ಕುಂಠಿನಿ, ಡಾ.ವಾಣಿಶ್ರೀ  ಮೊದಲಾದವರು ಉಪಸ್ಥಿತರಿದ್ದರು.ಚೈತನ್ಯಶ್ರೀ ಕರ್ನಾಟಕರತ್ನ ಪ್ರಶಸ್ತಿ ಪ್ರದಾನ
ಅಜೆಕಾರು: ಹಿರಿಯ ಪತ್ರಕರ್ತ, ಸಂಘಟಕ ಡಾ.ಶೇಖರ ಅಜೆಕಾರು, ಡಿಸೇಲ್ ಮೆಕಾನಿಕ್ ಆಗಿ ೨೫ ವರ್ಷದ ಸಾರ್ಥಕ ಸೇವೆಗೈದ ಸಾಮಾಜಿಕ ಸೇವಾಕರ್ತ ಸಾಣೂರ್ ಅರುಣ್ ಶೆಟ್ಟಿಗಾರ್ ಮತ್ತು ಉದಯೋನ್ಮುಖ ಸಾಕ್ಸೋಫೋನ್ ಕಲಾವಿದೆ ಅನ್ವಿತ ವಿಟ್ಲ ಅವರಿಗೆ ಕಥಾಬಿಂಧು ಪ್ರಕಾಶನ ನೀಡುವ ೨೦೨೨ ವರ್ಷದ ಪ್ರಯಿಷ್ಠಿತ ಚೈತನ್ಯಶ್ರೀ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಮಂಗಳೂರಿನ ಹೊಟೇಲ್ ವುಡ್‌ಲ್ಯಾಂಡ್ಸ್‌ನಲ್ಲಿ ಸೋಮವಾರ ಪ್ರದಾನಿಸಿದರು.
ಶಿಶಿರ ಕಾವ್ಯ ಸಂಭ್ರಮದಲ್ಲಿ ಸಾಧಕರನ್ನು ಕನ್ನಡದ ಸೇವೆಯಲ್ಲಿ ತೊಡಗಿದವರನ್ನು ರಾಜ್ಯಮಟ್ಟದ ಪ್ರಶಸ್ತಿ ನೀಡುವ ಮೂಲಕ ಕಥಾ ಬಿಂಧು ಪ್ರಕಾಶನ ಸತ್ಕಾರ್ಯವನ್ನೇ ಮಾಡುತ್ತಿದೆ ಎಂದು ಪುನರೂರು ಹೇಳಿದರು.
ಕಲಾವಿದ ಬಿ.ಕೆ.ಮಾಧವರಾವ್ ಅವರನ್ನು ಅಭಿನಂದಿಸಲಾಯಿತು. ಶ್ರೀ ಮಾತಾ ವೈಷ್ಣೋದೇವಿ ಕೃತಿಯ ಮೂಲಕ ರಾಜ್ಯದ ಗಮನಸೆಳೆದಿರುವ ಸಾಹಿತಿ ಕೆ.ವಿ.ಲಕ್ಷ್ಮಣ ಮೂರ್ತಿ ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪಂಕಜಾ ಮುಡಿಪು ಅವರ ಗೊಂಚಲು ಕೃತಿ ಬಿಡುಗಡೆಯಾಯಿತು. ಯಾರಿಗೂ ಒಳ್ಳೆಯದಾದರೂ ನಮಗೆ ಸಂತೋಷವಾಗ ಬೇಕು, ನಾವು ಕೂಡಾ ಸಾಧನೆಯ ಮೂಲಕ ಆ ಎತ್ತರಕ್ಕೆ ಏರ ಬೇಕು ಎಂದು ಸನ್ಮಾನಕ್ಕೆ ಉತ್ತರಿಸಿದ ಡಾ.ಶೇಖರ ಅಜೆಕಾರು ಹೇಳಿದರು.
ಪುತ್ತೂರಿನಿಂದ ಹತ್ತೂರಿಗೆ ಕೃತಿಯ ಲೇಖಕ ಬೆಟ್ಟಂಪಾಡಿ ಸುಂದರ್ ಶೆಟ್ಟಿ, ಕಥಾ ಬಿಂಧು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್, ಸುನೀತಾ ಪ್ರದೀಪ್ ಕುಮಾರ್, ಇನ್ಪೋಸಿಸ್ ರಶ್ಮಿ ಸನಿಲ್, ಮಂಜುಶ್ರೀ ಎನ್.ನಲ್ಕ, ಶಾಂತಾ ಕುಂಠಿನಿ, ಡಾ.ವಾಣಿಶ್ರೀ  ಮೊದಲಾದವರು ಉಪಸ್ಥಿತರಿದ್ದರು.
Tags

Post a Comment

0Comments

Post a Comment (0)