ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದ ಅಧ್ಯಕ್ಷರ ಹುದ್ದೆಗೆ ಅರ್ಜಿ ಆಹ್ವಾನ

varthajala
0

ಬೆಂಗಳೂರು, ಜನವರಿ 19, (ಕರ್ನಾಟಕ ವಾರ್ತೆ)   ಕರ್ನಾಟಕ  ವಿದ್ಯಚ್ಛಕ್ತಿ  ನಿಯಂತ್ರಣಾ ಆಯೋಗದ ಅಧ್ಯಕ್ಷರ ಹುದ್ದೆಗೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತಾ ಮಾನದಂಡಗಳು , ಅರ್ಜಿ ನಮೂನೆ -1 ಹಾಗೂ ಇತರ ಮಾಹಿತಿಗಳನ್ನು ಇಂಧನ ಇಲಾಖೆಯ ವೆಬ್ಸೈಟ್ ವಿಳಾಸ https://energy.karnataka.gov.in ರಲ್ಲಿ ಪಡೆಯಬಹುದಾಗಿದೆ. ಅರ್ಜಿಗಳನ್ನು ದಿನಾಂಕ : 07.03.2022  ಸಂಜೆ 5.30 ರೊಳಗಾಗಿ ಭೌತಿಕವಾಗಿ ಅಥವಾ Scanned ದಾಖಲೆಗಳನ್ನು ಅರ್ಜಿಯೊಂದಿಗೆ E-mail ಮೂಲಕ ( prs.energy@gmail.com ) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ, ಕೊಠಡಿ ಸಂಖ್ಯೆ 236, 2 ನೇ ಮಹಡಿ, ವಿಕಾಸ ಸೌಧ, ಡಾ.ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು -560 0001 ಇವರಿಗೆ ಸಲ್ಲಿಸಬಹುದಾಗಿದೆ ಎಂದು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Tags

Post a Comment

0Comments

Post a Comment (0)