ಮಧುಗಿರಿ : ಸ್ನಾತಕೋತ್ತರ ಪದವಿಯಲ್ಲಿ ತೋಟಗಾರಿಕೆಯ ವೆಜಿಟೇಬಲ್ ಸೈನ್ಸ್ ನಲ್ಲಿ ಮಧುಗಿರಿಯ ಎಸ್.ಗೌತಮಿ ಚಿನ್ನದ ಪದಕ ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.
ರಾಜಸ್ಥಾನದ ಕೋಟಾ ಎಂಎಸ್ಸಿ ತೋಟಗಾರಿಕೆಯ ವಿಶ್ವವಿದ್ಯಾನಿಲಯದಲ್ಲಿ ತೋಟಗಾರಿಕೆಯ ವೆಜಿಟೇಬಲ್ ಸೈನ್ಸ್ ನಲ್ಲಿ ಎಸ್.ಗೌತಮಿ ಚಿನ್ನದ ಪದಕ ಪಡೆದುಕೊಂಡಿದ್ದು, ಮಧುಗಿರಿ ತಾಲ್ಲೂಕಿನ ಎಸ್.ಶಿವಕುಮಾರ್ ಮತ್ತು ಶಾಂತಕುಮಾರಿ ಪುತ್ರಿ ಎಸ್.ಗೌತಮಿ. ತಾಲ್ಲೂಕಿನ ಹನುಮಂತಪುರ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ 1 ರಿಂದ 2 , 3 ರಿಂದ 5 ರವರೆಗೆ ಕೊರಟಗೆರೆ ತಾಲ್ಲೂಕಿನ ಗಿರಿನಗರ ಸರ್ಕಾರಿ ಶಾಲೆ , 6 ರಿಂದ 10 ತರಗತಿ ವರೆಗೂ ಸಿದ್ದರಬೆಟ್ಟದ ಮೊರಾರ್ಜಿ ವಸತಿ ಶಾಲೆ, ತುಮಕೂರು ಮೊರಾರ್ಜಿ ವಸತಿ ಶಾಲೆಯಲ್ಲಿ ಪಿಯುಸಿ ಶಿಕ್ಷಣ ಪಡೆದು , ಶಿರಸಿಯಲ್ಲಿ ಬಿಎಸ್ಸಿ ಪದವಿಯನ್ನು ಪಡೆದು , ಸ್ನಾತಕೋತ್ತರ ಪದವಿ ಪಡೆಯಲು ರಾಜಸ್ಥಾನದ ಕೋಟಾ ಎಂಎಸ್ಸಿ ತೋಟಗಾರಿಕೆಯ ವಿಶ್ವವಿದ್ಯಾನಿಲಯದಲ್ಲಿ ತೋಟಗಾರಿಕೆಯ ವೆಜಿಟೇಬಲ್ ಸೈನ್ಸ್ ಪಡೆದು ಚಿನ್ನದ ಪದಕ ಪಡೆದಿರುವುದಕ್ಕೆ ಗ್ರಾಮದಲ್ಲಿ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಚಿನ್ನದ ಪದಕ ಪಡೆದಿರುವುದು ನನಗೆ ತುಂಬಾ ಖುಷಿಯಾಗಿದೆ ಎಸ್.ಗೌತಮಿ ಪತ್ರಿಕೆಗೆ ತಿಳಿಸಿದ್ದಾರೆ.