ಕೊರೋನಾ ಭಯದಿಂದ ಮುಕ್ತಿಗೊಳಿಸಿ. ಬದುಕಲು ಬಿಡಿ.
ಕಳೆದ ಎರಡು ವರ್ಷಗಳಿಂದ ಕೊರೋನಾ ಹೆಸರಿನಲ್ಲಿ ಸರ್ಕಾರ ಕೈಗೊಂಡ ಅವೈಜ್ಞಾನಿಕ ನೀತಿ ನಿರ್ಧಾರಗಳಿಂದ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದ್ದು ಹಲವಾರು ಮಂದಿ ಸಂಕಷ್ಟ ದಿಂದ ಪಾರಾಗಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಟ್ಯಾಂತರ ಮಂದಿ ಉದ್ಯೋಗ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಹಲವಾರು ಮಂದಿ ವ್ಯವಹಾರ ಹಾಗೂ ಉದ್ಯಮ ನಡೆಸಲು ಮಾಡಿದ ಸಾಲ ತೀರಿಸಲಾಗದೆ ಅವರ ಆಸ್ತಿಗಳು ಹರಾಜಿಗೆ ಬಂದಿವೆ. ಕೊರೋನಾ ಮೊದಲು ಹಾಗೂ ಕೊರೋನಾ ನಂತರದ ಜನರ ಆರ್ಥಿಕ ಸಾಮಜಿಕ ಸ್ಥಿತಿಗತಿಗಳ ವೈಜ್ಞಾನಿಕ ಅಧ್ಯಯನ ನಡೆಸಿ ತೀರ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಅವರ ಜೀವನ ಮಟ್ಟ ಮೇಲೆತ್ತಲು ಹಾಗೂ ಅರ್ಹರಿಗೆ ಉದ್ಯೋಗ ಒದಗಿಸಲು ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು ಎಂದು ಹೇಳಿದ್ದಾರೆ.
ಸಾಲ ಮಾಡಿ ಸಂಕಷ್ಟಕೊಳಗಾದವರನ್ನು ಗುರುತಿಸಿ ಎರಡು ವರ್ಷಗಳ ಕಾಲದ ಬಡ್ಡಿ ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ಬ್ಯಾಂಕ ಸಾಲ ವಸೂಲಾತಿ ಕಿರುಕುಳ ನಿಲ್ಲಿಸಬೇಕು ಹಾಗೂ ಅವರು ತಮ್ಮ ಉದ್ಯಮವನ್ನು ಯಥಾಸ್ಥಿತಿಗೆ ತರಲು ಬಡ್ಡಿ ರಹಿತ ಹೆಚ್ಚುವರಿ ಸಾಲ ನೀಡಬೇಕು ಎಂದರು.
ಮಾಸ್ಕ ಹೆಸರಿನಲ್ಲಿ ದಂಡ ವಿದಿಸುವುದನ್ನು ನಿಲ್ಲಿಸಬೇಕು ಇಲ್ಲವೆ ಬ್ರಿಟನ್ ಮಾದರಿಯಲ್ಲಿ ಮಾಸ್ಕ್ ದರಿಸುವುದನ್ನು ನಿಷೇದಿಸಬೇಕು. ಕೊರೋನಾ ಹೆಸರಿನಲ್ಲಿ ಪೊಲೀಸರು ಹಾಗೂ ಬಿಬಿಎಂಪಿ ಮಾರ್ಷಲ್ ಗಳು ದೌರ್ಜನ್ಯ ನಡೆಸಿದರೆ ಅವರ ವಿರುದ್ದ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಕೊರೋನಾ ಲಸಿಕೆ ( ವ್ಯಾಕ್ಸಿನ್) ವ್ಯಕ್ತಿಯ ಒಪ್ಪಿಗೆ ಇಲ್ಲದೆ ಬಲವಂತವಾಗಿ ಹಾಕುವಂತಿಲ್ಲ ಆ ಹಿನ್ನಲೆಯಲ್ಲಿ ವ್ಯಾಕ್ಸಿನ್ ಹಾಕಿಕೊಳ್ಳುವುದು ವ್ಯಕ್ತಿಯ ಸ್ವಯಂ ನಿರ್ಧಾರಕ್ಕೆ ಬಿಡುವುದು ಒಳ್ಳಯದು ಯಾವುದೇ ಕಾರಣಕ್ಕೂ ಸರ್ಕಾರ ಬಲವಂತವಾಗಿ ಯಾರಿಗೂ ಲಸಿಕೆಯನ್ನು ಹಾಕುವಂತಿಲ್ಲ. ಒಂದು ಪಕ್ಷ ಬಲವಂತವಾಗಿ ಲಸಿಕೆ ಹಾಕಿದರೆ ಅಂತವರ ವಿರುದ್ದ ಜನ ಸಾಮಾನ್ಯರು ಎಚ್ಚೆತ್ತುಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರೆನೀಡಿದ್ದಾರೆ.