ಬಳ್ಳಾರಿ – 19 ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘದ ಉದ್ಘಾಟನೆ ಸಮಾರಂಭ ಜರುಗಿತು. ಉದ್ಘಾಟನೆ ನೇರವೇರಿಸಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು.ಪಿ ಅಲಗೂರ ಯಾವ ಅಧಿಕಾರಿಯೂ ಕೂಡ ತನ್ನ ಅವಧಿಯಲ್ಲಿ ಸಂಘ ಸ್ಥಾಪನೆಗೊಂಡು ಶಿಕ್ಷಕರನ್ನು ಒಂದಾಗಿಡಲು ಬಿಡುವುದಿಲ್ಲ. ಆದರೆ ವಿಶ್ವವಿದ್ಯಾಲಯದ ಕುಲಪತಿಯಾಗಿ, ಸಂಘಟನೆಯಲ್ಲಿ ನಂಬಿಕೆಯನ್ನ ಹೊಂದಿರುವ ಪ್ರಶಸ್ತಿ ಪೂರಕ ವವ್ಯಸ್ಥೆಯನ್ನು ಕಲ್ಪಿಸಿರುತ್ತೇನೆ. ಸಂಘವು ಕಾನೂನು ಬದ್ಧವಾಗಿ ಪ್ರಾಧ್ಯಾಪಕರ ಏಳಿಗೆಗೆ ದುಡಿಯಲಿ ಎಂದು ಆಶಿಸುತ್ತೇನೆ ಎಂದರು.
ಮುಂದುವರೆದು ಇಲ್ಲಿನ ಶಿಕ್ಷಕರು ಪ್ರಾಮಾಣಿಕವಾಗಿ ತಮ್ಮ ಕೆಲಸವನ್ನು ಮಾಡುತ್ತಿದ್ದು, ವಿಶ್ವವಿದ್ಯಾಲಯದ ಏಳಿಗೆಗೆ ತಮ್ಮ ಕೊಡಿಗೆಯನ್ನು ನೀಡುತ್ತಿದ್ದಾರೆ, ಹಾಗಾಗಿಯೇ ಹೊಸ ಶಿಕ್ಷಣ ನೀತಿಯ ಅನುಷ್ಠಾನದಂತಹ ಕೆಲಸವನ್ನ ಕರ್ನಾಟಕದಲ್ಲಿ ಮೊದಲು ಅನುಷ್ಠಾನಗೊಳಿಸಿರುವ ಶ್ರೇಯಸ್ಸು ವಿಜಯನಗರ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ.
ಅಧ್ಯಾಪಕರು ತಮ್ಮ ಯಾವುದೇ ಸಮಸ್ಯೆಯನ್ನು ತಂದರೂ, ಪ್ರಾಮಾಣಿಕವಾಗಿ ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಅಲ್ಲದೆ ವಿದೇಶದ ಯಾವುದೇ ವಿಶ್ವವಿದ್ಯಾಲಯಕ್ಕೆ ಹೋಗಿ ತಮ್ಮ ಸಂಶೋಧನಾ ಪತ್ರಿಕೆ ಮಂಡಿಸಲು ವಿಶ್ವವಿದ್ಯಾಲಯದಿಂದ ಭಾಗಶ: ಆರ್ಥಿಕ ನೆರವನ್ನು ಪ್ರಾಧ್ಯಾಪಕರಿಗೆ ನೀಡಲು ವಿಶ್ವವಿದ್ಯಾಲಯದಲ್ಲಿ ನೆರವು ನೀಡುವ ಯೋಜನೆಯನ್ನ ರೂಪಿಸಲು ಸಿದ್ದನಾಗಿದ್ದೇನೆ ಹಾಗೂ ಈ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುತ್ತೇನೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಕುಲಸಚಿವರು (ಮೌಲ್ಯಮಾಪನ) ಮಾತನಾಡಿ, ಶಿಕ್ಷಕರ ಕುಂದು ಕೊರತೆಗಳಿಗೆ, ಅವರಿಗೆ ಕಷ್ಟಕಾಲದಲ್ಲಿ ನೆರವು ನೀಡುವ ಕೆಲಸವನ್ನು ಅಧ್ಯಾಪಕರ ಸಂಘ ಮಾಡಬೇಕಾಗಿದೆ ಎಂದರು. ಮತ್ತೋರ್ವ ಅತಿಥಿ ಡಾ.ಕೆ.ಸಿ ಪ್ರಶಾಂತ ಹಣಕಾಸು ಅಧಿಕಾರಿ ಮಾತನಾಡಿ, ಕೈಬೆರಳುಗಳಿಗೆ ಹೇಗೆ ವೈಯಕ್ತಿಕವಾಗಿ ಬಲವಿಲ್ಲವೊ ಯಾವಾಗ ಅವು ಮುಷ್ಠಿಗೊಂಡಾಗ ಸಮುಷ್ಠಿಯನ್ನ ಪಡೆದು ಕೊಳ್ಳುತ್ತವೆಯೋ ಹಾಗೆ ಶಿಕ್ಷಕರು ಸಂಘಟನೆಗೊ0ಡಾಗ ತಮ್ಮ ಬೇಡಿಕೆಗಳನ್ನ ಇಡೇರಿಸಿಕೊಳ್ಳಲು ಸಾಧ್ಯವಾಗುವುದು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಶಾಂತನಾಯ್ಕ್ ಕಾರಣಾಂತರಗಳಿ0ದ ನೆನಗುದಿಗೆ ಬಿದಿದ್ದ ಸಂಘದ ನೋಂದಣಿ ಕಳೆದ ವರ್ಷ ಮಾಡಲಾಗಿದೆ.
ಹಾಗೂ ಕಾರಣಾಂತರಗಳಿ0ದ ಉದ್ಘಾಟನೆಗೊಳ್ಳಬೇಕಾಗಿದ್ದ, ಸಂಘದ ಕಛೇರಿ ಇವತ್ತು ಉದ್ಘಾಟನೆಗೊಳ್ಳುತ್ತಿರುವುದು ಸಂದರ್ಭೋಚಿತವಾಗಿದೆ. ಈ ಸಂಘ ವಿಶ್ವವಿದ್ಯಾಲಯದ ನೂರಕ್ಕೂ ಹೆಚ್ಚು ಅಧ್ಯಾಪಕರುಗಳ ಆಶೋತ್ತರಗಳಿಗೆ ಧ್ವನಿಯಾಗಿ ಕೆಲಸ ಮಾಡಲು ಒಂದು ಉತ್ತಮ ವೇದಿಕೆಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಪ್ರೊ.ಜಿ.ಪಿದಿನೇಶ್ ಸ್ವಾಗತ ಮಾಡಿದರು ಸಂಘದ ಕಾರ್ಯದರ್ಶಿ ಪ್ರೊ. ಕೆ.ವಿ ಪ್ರಸಾದ್ ವಂದನಾರ್ಪಣೆ ಮಾಡಿದರು ಡಾ. ಅಣ್ಣಾಜಿ ಕೃಷ್ಣರೆಡ್ಡಿ ಪ್ರಾರ್ಥನೆ ಮಾಡಿದರು. ಉಪಕಾರ್ಯದರ್ಶಿ ಶಶಿಕಾಂತ್ ಮಜ್ಜಿಗೆ ಸಂಘದ ಪದಾಧಿಕಾರಿಗಳಾದ ಪ್ರೊ.ಭೀಮನಗೌಡ , ಪ್ರೊ.ಕೆ.ಎಸ್.ಲೋಕೇಶ್, ಪ್ರೊ.ತಿಪ್ಪೇರುದ್ರ, ಡಾ.ಗೌರಿ ಮಾನಸ ಮಾಣಿಕ್, ಡಾ.ಅರ್ಚನಾ, ಡಾ.ಮುಬಾರಕ್, ಡಾ.ಸುನೀಲ್ ಕುಮಾರ್, ಡಾ.ಕೃಷ್ಣಬಾರಧ್ವಾಜ್ ಹಾಗೂ ವಿಶ್ವವಿದ್ಯಾಲಯದ ಎಲ್ಲಾ ಪ್ರಾದ್ಯಾಪಕರುಗಳು ಮತ್ತು ಕಛೇರಿ ಸಿಬ್ಬಂದಿಗಳು ಹಾಜರಿದ್ದರು.