ಶಿಕ್ಷಕರ ನೇಮಕಾತಿ ಪೂರ್ವದಲ್ಲಿ ಸೇವಾನಿರತ ಪ್ರಾಥಮಿಕ ಪದವೀಧರ ಶಿಕ್ಷಕರ ವಿಲೀನಗೊಳಿಸಿ**
ವಿಲೀನಗೊಳಿಸಿ-ನೇಮಕಾತಿ ನಡೆಸಿ: ರಾಜ್ಯಪ್ರಧಾನಕಾರ್ಯದರ್ಶಿ-HR ಶಶಿಕುಮಾರ್ ಆಗ್ರಹ
✍️ಸರ್ಕಾರ 6 ರಿಂದ 8 ನೇ ತರಗತಿ ಬೋಧಿಸಲು 15,000 ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.
ಇದಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಪದವೀಧರ ಶಿಕ್ಷಕರ ಸಂಘ ಸ್ವಾಗತಿಸುತ್ತದೆ..ಆದರೆ, ಪ್ರಸ್ತುತವಾಗಿ ರಾಜ್ಯದ ಎಲ್ಲಾ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಳೆದ 20-30 ವರ್ಷಗಳಿಂದ BA/BSC... BED/MED ಪದವಿಗಳನ್ನು ಪಡೆದು ಇದೇ ಶಾಲೆಗಳಲ್ಲಿ 80,000 ಕ್ಕೂ ಅಧಿಕ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರು ನಮ್ಮನ್ನು 1 ರಿಂದ 5 ನೇ ತರಗತಿ ಶಿಕ್ಷಕರೆಂದು ಸೀಮಿತಗೊಳಿಸಿ ಹಿಂಬಡ್ತಿ ನೀಡಿ ವೇತನ ತಾರತಮ್ಯ ಮಾಡುತ್ತ ನಮ್ಮನ್ನು 6 ರಿಂದ 8 ನೇ ತರಗತಿ ಶಿಕ್ಷಕರೆಂದು ಪರಿಗಣಿಸದೇ 6 ರಿಂದ 8 ನೇ ತರಗತಿ ಮಕ್ಕಳಿಗೆ ಬೋಧಿಸಲು ಅಗತ್ಯವಾದ ಎಲ್ಲಾ ಅರ್ಹತೆಗಳು ಇದ್ದರು ಸಹ ನಮ್ಮನ್ನು ಸರ್ಕಾರ ಮತ್ತು ಶಿಕ್ಷಣ ಇಲಾಖೆ 6 ರಿಂದ 8 ನೇ ಶಿಕ್ಷಕರೆಂದು ವಿಲೀನಗೊಳಿಸದೆ ನಮ್ಮಿಂದ 6 ರಿಂದ 8 ನೇ ತರಗತಿ ಮಕ್ಕಳಿಗೆ ಬೋಧನೆ ಮಾಡಿಸುತ್ತಾ ನಮಗೂ ಮತ್ತು ಮಕ್ಕಳಿಗೂ ಕೂಡ ಅನ್ಯಾಯ ಮಾಡುತ್ತಿರುವುದು ನಿಜಕ್ಕೂ ಶಿಕ್ಷಕರ ವಲಯದಲ್ಲಿ ಅತ್ಯಂತ ಬೇಸರವನ್ನು ಮೂಡಿಸಿದೆ.. ಈ ಅನ್ಯಾಯವನ್ನು ಖಂಡಿಸಿ ಕಳೆದ 5 ವರ್ಷಗಲಿಂದಲೂ ಪದವೀಧರ ಶಿಕ್ಷಕರ ಸಂಘ ಉಪವಾಸ ಸತ್ಯಾಗ್ರಹ,ತರಬೇತಿ ಬಹಿಷ್ಕಾರ,ಕಪ್ಪು ಪಟ್ಟಿ ಪ್ರದರ್ಶನ ಚಳುವಳಿಗಳು ನೆಡೆಸುತ್ತಾ ಬಂದಿದೆ..ಜೊತೆಗೆ ಶಿಕ್ಷಣ ಮಂತ್ರಿಗಳಿಗೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಸರ್ಕಾರ ಮತ್ತು ಇಲಾಖೆಯಿಂದ ನ್ಯಾಯ ಒದಗಿಸಲು ಸತತವಾಗಿ ಶ್ರಮಿಸುತ್ತಿದೆ..
ಕಾನೂನಿನ ಪ್ರಕಾರ ಇಲಾಖೆಯಲ್ಲಿ ನೇಮಕಾತಿಯ ಜೊತೆಜೊತೆಯಲ್ಲಿ ಬಡ್ತಿ/ವಿಲೀನ ಪ್ರಕ್ರಿಯೆ ಮಾಡಬೇಕಾದ್ದು ಇಲಾಖೆಯ ಆದ್ಯ ಕರ್ತವ್ಯ..2017 ರಲ್ಲೇ ಮೊದಲ ನೇಮಕಾತಿ ಆಗಿದ್ದರು ಕಳೆದ 5 ವರ್ಷಗಳಿಂದ ಸರ್ಕಾರ ಮತ್ತು ಇಲಾಖೆ ವಿಳಂಬ ನೀತಿ ಅನಿಸರಿಸುತ್ತಿರುವುದು ಮತ್ತು ಅವರೇ ರೂಪಿಸಿರುವ ನೀತಿ ನಿಯಮಗಳನ್ನು ಮರೆತು ಕಾರ್ಯರೂಪಕ್ಕೆ ತರದೆ ಪದವೀಧರ ಮತ್ತು ಅನುಭವಿ ಶಿಕ್ಷಕರಿಗೆ ಅನ್ಯಾಯ ಮಾಡಲಾಗುತ್ತಿದೆ.ಈಗ ಸರ್ಕಾರ ಮತ್ತು ಇಲಾಖೆ ಸೇವಾನಿರತ ಪದವೀಧರ ಶಿಕ್ಷಕರನ್ನು ವಿಲೀನಗೊಳಿಸದೇ ಈಗಾಗಲೇ 12,000 GPT ಶಿಕ್ಷಕರ ನೇಮಕಾತಿಯಾಗಿದೆ... ಈಗ 4 ನೇ ಬಾರಿಗೆ ಹೊಸದಾಗಿ ಮತ್ತೆ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನೆಡೆಸಲು ಹೊರಟಿದೆ.. ಇದು ಇಷ್ಟು ವರ್ಷ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಾ ಉನ್ನತ ವ್ಯಾಸಂಗ ಮಾಡಿರುವ ಸೇವಾನಿರತ ಪದವೀಧರ ಶಿಕ್ಷಕರಿಗೆ ಸರ್ಕಾರ ಮತ್ತು ಇಲಾಖೆ ಮಾಡುತ್ತಿರುವ ಘೋರ ಅನ್ಯಾಯವಾಗಿದ್ದು ನಾವೆಲ್ಲೇರು ತಾಳ್ಮೆಯಿಂದ ನಮ್ಮ ಪದವಿಗಳಿಗೆ ಒಂದಲ್ಲ ಒಂದು ದಿನ ಬೆಲೆ,ಗೌರವ ಸಿಗುತ್ತದೆ ನಮಗೂ ಬಡ್ತಿ ಸಿಗುತ್ತದೆ ಎಂಬ ಆಶಾಭಾವನೆಯಿಂದ ಜಾತಕಪಕ್ಷಿಗಳಂತೆ ಕಾಯುತ್ತ ಕುಳಿತ್ತಿದ್ದೇವೆ ಆದರೆ,ಸರ್ಕಾರ ಮತ್ತು ಇಲಾಖಾ ಮಟ್ಟದಲ್ಲಿ ನಮಗೆ ನ್ಯಾಯ ನೀಡುವ ಯಾವುದೇ ಪ್ರಕ್ರಿಯೆಗಳು ಕಳೆದ 5 ವರ್ಷಗಳಿಂದಲೂ ನೆಡೆಯುತ್ತಿಲ್ಲ ಒಂದು ಕಡೆ ನೀವುಗಳು 1 ರಿಂದ 5 ನೇ ತರಗತಿ ಶಿಕ್ಷಕರು ಎನ್ನುವುದು..
ಇನ್ನೊಂದು ಕಡೆ ನಮ್ಮಿಂದಲೇ 6 ರಿಂದ 8 ನೇ ತರಗತಿ ಮಕ್ಕಳಿಗೆ ಪಾಠ ಮಾಡಿಸುವುದು..6 ರಿಂದ 8 ನೇ ತರಗತಿ ಶಿಕ್ಷಕರೆಂದು ಪರಿಗಣಿಸಲು ಅರ್ಹತೆಗಳು ಇದ್ದರು ವಿಲೀನ ಪ್ರಕ್ರಿಯೆ ಮಾಡದೆ ಇರುವ ವಿಚಿತ್ರ ನಡವಳಿಕೆಯ ಬಗ್ಗೆ ಶಿಕ್ಷಕರ ವಲಯದಲ್ಲಿ ಕಳೆದ 5 ವರ್ಷದಿಂದಲೂ ಅಸಮಾಧಾನವಿದೆ
ಇಷ್ಟು ವರ್ಷ ನಮಗೆ ಅನ್ಯಾಯವಾದರು ತಾಳ್ಮೆಯಿಂದ ಇಷ್ಟು ವರ್ಷ ಪಾಠ ಬೋದಿಸುತ್ತಾ ಬಂದಿದ್ದೇವೆ ಆದರೆ, ಶಿಕ್ಷಣ ಇಲಾಖೆಯಿಂದ ನಮಗೆ ನ್ಯಾಯ ದೊರಕುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲದ ಕಾರಣ ವಿಧಿ ಇಲ್ಲದೆ ನಮ್ಮ ಹಕ್ಕುಗಳನ್ನು ಪಡೆಯುವುದಕ್ಕಾಗಿ ಶಿಕ್ಷಕರ ನೇಮಕಾತಿ ಪೂರ್ವದಲ್ಲಿ ಸೇವಾನಿರತ ಪದವೀಧರ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪರಿಗಣಿಸಬೇಕೆಂದು ಆಗ್ರಹಿಸಿ ನಮಗಾಗುತ್ತಿರುವ ಅನ್ಯಾಯದ ಬಗ್ಗೆ ಸರ್ಕಾರಕ್ಕೆ ಮತ್ತು ಇಲಾಖೆಗೆ ಮನವರಿಕೆ ಮಾಡಲು ಹಾಗೂ ನಮಗೆ ನ್ಯಾಯ ಸಿಗುವವರೆಗೂ
ಫೆಬ್ರವರಿ ತಿಂಗಳಿನಿಂದ ಅನಿರ್ದಿಷ್ಟ ಅವಧಿಗೆ ಕರ್ನಾಟಕ ರಾಜ್ಯಾಧ್ಯಂತ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು 6 ರಿಂದ 8 ತರಗತಿ ಬೋಧನೆ ಮತ್ತು ಅ ತರಗತಿಗಳಿಗೆ ಸಂಬಂಧಪಟ್ಟ ಎಲ್ಲಾ ಕಲಿಕಾ ಬೋಧನಾ ಹಾಗೂ ದಾಖಲೆ ನಿರ್ವಹಿಸಿವುದನ್ನು ನಿಲ್ಲಿಸಲಾಗುವುದು
ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ರಾಜ್ಯ/ಜಿಲ್ಲಾ/ತಾಲ್ಲೂಕ್ ಘಟಕಗಳು ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ HR ಶಶಿಕುಮಾರ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ