ಬೆಂಗಳೂರು : ಮಾತನಾಡುವುದು ಒಂದು ಕಲೆ. ಸಂದರ್ಭಕ್ಕೆ ತಕ್ಕಂತೆ ಮಾತನಾಡಿ ಜನರ ಮನಸ್ಸನ್ನು ಗೆಲ್ಲುವುದು ಒಂದು ಕಡೆಯಾದರೆ, ಇನ್ನೊಂದೆಡೆ ಸರಿಯಾದ ಸಮಯದಲ್ಲಿ ತೂಕವುಳ್ಳ ಮಾತನಾಡಿ ಕೆಲಸವನ್ನು ಸಾಧಿಸುವುದು ಬಲು ಸುಲಭ.
ಹಾಗಾಗಿ ಕೆಲವರಿಗೆ ಮಾತು ಬಂಡವಾಳವಾಗಿರುತ್ತದೆ. ಮಾತಿನಿಂದಲೇ ಎಲ್ಲವನ್ನೂ ಸಾಧಿಸಿಕೊಳ್ಳುವ ಕಲೆ ಚೆನ್ನಾಗಿ ತಿಳಿದುಕೊಂಡಿರಬೇಕಾಗುತ್ತದೆ. ಅಲ್ಲದೇ ಎಲ್ಲರಿಗೂ ಕಬ್ಬಿಣದ ಕಡಲೆಯಂತಾದ ಇಂಗ್ಲೀಷ್ ಭಾಷೆಯಲ್ಲಿ ಪರಿಣಿತಿ ಸಾಧಿಸಿ ಸುಲಭವಾಗಿ ಮಾತನಾಡುವುದನ್ನು ಕಲಿತುಕೊಂಡು ಮಾತಿನಿಂದ ಇತರರನ್ನು ಸೆಳೆಯುವ ಕಲೆಯನ್ನು ತಿಳಿದುಕೊಂಡು ಮಾತಿನ ಮಲ್ಲರು ಅನ್ನಿಸಿಕೊಳ್ಳಲು ಸಾಧ್ಯವಿದೆ.
ಹೌದು, ರಾಜ್ಯದ ಕರಾವಳಿ ತೀರದಲ್ಲಿರುವ ಮಂಗಳೂರಿನ ಹೆಸರಾಂತ ಇಂಗ್ಲೀಷ್ ಭಾಷಾ ತಜ್ಞ ಶ್ರೀ ನೆವಿಲ್ ರೋಡ್ರಿಗ್ಸ್ ಇಂಗ್ಲೀಷ್ ಭಾಷೆಯಲ್ಲಿ ಸುಲಭವಾಗಿ ಹೇಗೆ ಮಾತನಾಡಬೇಕು ಎಂಬುದನ್ನು ಉದಾಹರಣೆಗೆ ಉದ್ಯೋಗದ ಸಂದರ್ಶನಕ್ಕಾಗಿ ಕೇವಲ 3 ದಿನದಲ್ಲಿ (ವಾಟ್ಸ್ ಅಪ್ ಕೋರ್ಸ್-ಟೆಲ ಮೀ ಅಬೈತ್ ಯುರಸೆಲ್ಪ್-whatsapp course, tell me about yourself) ಕಲಿಸಿಕೊಡುತ್ತಿದ್ದಾರೆ. ಮತ್ತು ಇಂಗ್ಲೀಷ್ ಸ್ಪೋಕನ್ ಕೋರ್ಸ್ (spoken English course )ನ್ನು 3 ತಿಂಗಳ ಕಾಲಾವಕಾಶದಲ್ಲಿ ಸುಲಭವಾಗಿ ಮಾತನಾಡುವಂತೆ ಸುಮಾರು 20 ವರ್ಷಗಳಿಂದ ಕಲಿಸುತ್ತಿದ್ದಾರೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಜನರಿಗೆ ಸಾವಿರಾರು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವ ಕಲೆಯನ್ನು ಶಿಬಿರದ ಮೂಲಕ ತರಬೇತಿ ನೀಡಿ ಇಡೀ ರಾಜ್ಯಕ್ಕೆ ಅಲ್ಲದೇ ದೇಶಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ.
ಶ್ರೀ ನೆವಿಲ್ ರೋಡ್ರಿಗ್ಸ್ ಅವರು, ಉದ್ಯೋಗಕ್ಕಾಗಿ ನೀಡುವ ಸಂದರ್ಶನದಲ್ಲಿ ಇಂಗ್ಲೀಷ ನಲ್ಲಿ ಹೇಗೆ ಮಾತನಾಡಬೇಕು ಹಾಗೂ ಸಭೆ, ಸಮಾರಂಭಗಳಲ್ಲಿ ಹೇಗೆ ತಮ್ಮನ್ನು ಇಂಗ್ಲೀಷ್ ಭಾಷೆಯಲ್ಲಿ ಸುಲಭವಾಗಿ ಎಲ್ಲರಿಗೂ ಅರ್ಥವಾಗುವ ಹಾಗೆ ಸ್ವಪರಿಚಯ ಮಾಡಿಕೊಳ್ಳಬೇಕೆಂದು ಈಗಾಗಲೆ ಸಾಕಷ್ಟು ಜನರಿಗೆ ಕಲಿಸಿದ್ದಾರೆ. ಇವರ ಬಳಿ ಕಲಿತಿರುವವರು ಹಲವಾರು ದೇಶ-ವಿದೇಶಗಳಲ್ಲಿ ಈಗ ಕೆಲಸ ಮಾಡುತ್ತ ತಮ್ಮ ಜೀವನ ರೂಪಿಸಿಕೊಂಡಿದ್ದಾರೆ.
ಇನ್ನು ಇಂಗ್ಲೀಷ್ ಭಾಷೆಯಲ್ಲಿ ಸುಲಭವಾಗಿ ಮಾತನಾಡುವ ಕಲೆಯಿಂದಾಗುವ ಲಾಭಗಳ ಕುರಿತು ಶ್ರೀ ನೆವಿಲ್ ರೋಡ್ರಿಗ್ಸ್ ಅವರ ಮಾತಿನಲ್ಲಿಯೇ ಕೇಳೋಣ..
ಎಲ್ಲರೂ ಒಂದೊಂದು ವಿಷಯದಲ್ಲಿ ವಿಶೇಷ ಚಾತುರ್ಯವನ್ನು ಉಳ್ಳವರಾಗಿರುತ್ತಾರೆ. ಕೆಲವರು ಕಲೆಯಲ್ಲಿ ನಿಪುಣತೆಯನ್ನು ಪಡೆದಿದ್ದರೆ, ಮತ್ತೆ ಕೆಲವರು ಮಾತಿನಲ್ಲಿ, ಬರಹದಲ್ಲಿ, ತಂತ್ರಜ್ಞಾನದಲ್ಲಿ ಹೀಗೆ ಹಲವಾರು ಕ್ಷೇತ್ರದಲ್ಲಿ ಉತ್ತಮ ಜ್ಞಾನವನ್ನು ಹೊಂದಿರುತ್ತಾರೆ. ಹಾಗೆಯೇ ಇಲ್ಲಿ ಮಾತಿನಿಂದಲೇ ಎಲ್ಲರನ್ನೂ ತಮ್ಮತ್ತ ಸೆಳೆಯುವ ಕಲೆಯ ಬಗ್ಗೆ ತಿಳಿಯೋಣ...
ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಮಾತಿನಂತೆ, ಚೆನ್ನಾಗಿ ಮಾತನಾಡಿ ಇತರರನ್ನು ಮೋಡಿ ಮಾಡುವುದು ಒಂದು ಕಲೆ. ಅದು ಕೆಲವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಹಾಗಾಗಿ ಸಂದರ್ಭ ಏನೇ ಇರಲಿ ಅದಕ್ಕೆ ತಕ್ಕಂತೆ ಮಾತನಾಡಿ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಇಂಥವರು ಯಾವುದೇ ಕ್ಷೇತ್ರಕ್ಕೆ ಕಾಲಿಟ್ಟರೂ ಅಲ್ಲಿಯ ಜನರನ್ನು ಮಾತಿನಿಂದಲೇ ಬೆರಗು ಗೊಳಿಸುತ್ತಾರೆ. ಇಂಥಹ ವ್ಯಕ್ತಿಗಳ ಈ ಗುಣವೇ ಇವರಿಗೆ ಯಶಸ್ಸನ್ನು ತಂದುಕೊಡುತ್ತದೆ.
ಕೆಲ ವ್ಯಕ್ತಿಗಳು ಹೆಚ್ಚು ವ್ಯಾವಹಾರಿಕವಾಗಿ ವರ್ತಿಸುತ್ತಾರೆ. ಕೆಲವರು ಅಪರಿಚಿತರಾದರೂ ಸರಿ ಅವರನ್ನು ಮಾತಿಗೆಳೆದು ಬಿಡುತ್ತಾರೆ. ಈ ವ್ಯಕ್ತಿಗಳ ಮಾತಿನ ವೈಖರಿಗೆ ಎಲ್ಲರು ಆಕರ್ಷಿತರಾಗುತ್ತಾರೆ. ಹಾಗಾಗಿ ಇಂಥಹವರಿಗೆ ಹೆಚ್ಚು ಜನ ಸ್ನೇಹಿತರಿರುತ್ತಾರೆ. ಮಾತಿನಲ್ಲಿ ಇತರರನ್ನು ಸೆಳೆಯುವ ಕಲೆ ಕೆಲವರಿಗೆ ಚೆನ್ನಾಗಿಯೇ ತಿಳಿದಿರುತ್ತದೆ. ಹಾಗಾಗಿ ಇವರು ಮಾತಿನ ಬಂಡವಾಳದ ಮೇಲೆಯೇ ಯಶಸ್ಸಿನ ಲಾಭವನ್ನು ಗಳಿಸಿಕೊಳ್ಳುವಷ್ಟು ಚಾತುರ್ಯವನ್ನು ಹೊಂದಿರುತ್ತಾರೆ.
ಕೆಲವರು ಮಾತಿನ ಮಲ್ಲರಾಗಿರುತ್ತಾರೆ. ಇವರಿಗೆ ಸ್ನೇಹಿತರು ಅಧಿಕ ಸಂಖ್ಯೆಯಲ್ಲಿರುತ್ತಾರೆ. ಅಷ್ಟೇ ಅಲ್ಲದೆ ಈ ವ್ಯಕ್ತಿಗಳ ಸಂಪರ್ಕಕ್ಕೆ ಬಂದ ಎಲ್ಲರನ್ನು ಇವರು ಇಂಗ್ಲೀಷ್ ಭಾಷೆಯಲ್ಲಿ ಸುಲಭವಾಗಿ ಮಾತನಾಡಿ ಬೇಗ ವಿಶ್ವಾಸಕ್ಕೆ ತೆಗೆದುಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ. ಯಾವ ಸಂದರ್ಭದಲ್ಲಿ ಯಾವ ರೀತಿ ಮಾತನಾಡಿದರೆ, ಎದುರಿಗಿರುವವರ ಮನಸ್ಸನ್ನು ಗೆಲ್ಲಬಹುದು ಎಂಬ ಬಗ್ಗೆ ಕೆಲವರಿಗೆ ಚೆನ್ನಾಗಿ ಅರಿತಿರುತ್ತಾರೆ. ಆದರೆ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವ ಕಲೆ ಇಲ್ಲದೇ ಕೈ ಕೈ ಹಿಸುಕಿಕೊಳ್ಳುವಂತಹ ಪರಿಸ್ಥಿತಿ ಬರುತ್ತದೆ. ಇನ್ನು ಚೆನ್ನಾಗಿ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವವರು ಮಿತ್ರರನ್ನಷ್ಟೇ ಅಲ್ಲದೆ ಶತ್ರುಗಳನ್ನು ಸಹ ತಮ್ಮ ಮಾತಿನ ಚತುರತೆಯಿಂದ ತಮ್ಮತ್ತ ಸೆಳೆದುಕೊಳ್ಳುತ್ತಾರೆ. ತಮ್ಮ ಭಾಷಾ ಪರಿಣತಿಯಿಂದ ಇವರು ಇಂಗ್ಲೀಷ್ ನಲ್ಲಿ ಮಾತನಾಡಿ, ಇವರು ನೀಡುವ ಸಲಹೆಯನ್ನು ಎಲ್ಲರೂ ಸ್ವೀಕರಿಸುತ್ತಾರೆ. ಶತ್ರುಗಳನ್ನು ಮಿತ್ರರನ್ನಾಗಿ ಮಾಡಿಕೊಳ್ಳುವ ಗುಣ ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತದೆ.
ಇಂಗ್ಲೀಷ್ ಭಾಷಾ ಪರಿಣಿತಿಯಿಂದ ಸಮಾಜದಲ್ಲಿ ಬಹು ಬೇಗನೇ ಎಲ್ಲರೊಂದಿಗೆ ಬೆರೆತು ಉದಾಹರಣೆಗೆ ದೊಡ್ಡ ಕಂಪನಿಗಳ ಮತ್ತು ಸರಕಾರಿ ಮೇಲಾಧಿಕಾರಿಗಿಳ ಸುಲಭವಾಗಿ ಮಾತನಾಡಿ ತಮ್ಮಲ್ಲಿರುವ ಪ್ರತಿಭೆಯನ್ನು ಮತ್ತು ವಿದ್ಯೆಯಿಂದ ಗುರುತಿಸಲ್ಪಡುತ್ತಾರೆ.
ಇಂಗ್ಲೀಷ್ ಭಾಷೆಯ ಮೇಲಿನ ಹಿಡಿತದಿಂದ ಎಲ್ಲ ವರ್ಗದ ಜನರೊಂದಿಗೆ ನಿರಂತರವಾಗಿ ನಿರರ್ಗಳವಾಗಿ ಇಂಗ್ಲೀಷ್ ನಲ್ಲಿ ಮಾತನಾಡುತ್ತ ತಮ್ಮದೇ ಶೈಲಿಯ ಮಾತಿನಲ್ಲಿ ನಿಪುಣರಾಗಲು ಸಾಧ್ಯವಿದೆ. ಇಂಗ್ಲೀಷ್ ಭಾಷೆಯ ಮೇಲಿನ ಹಿಡಿತದಿಂದ ಇತರರನ್ನು ಹೆಚ್ಚು ಪ್ರಭಾವಿತಗೊಳಿಸಲು ಸಾಧ್ಯವಾಗುತ್ತದೆ. ಹಾಗೆಯೆ ಚೆನ್ನಾಗಿ ಮಾತನಾಡುವ ಕಲೆಯನ್ನು ಬಂದರೆ ಜನರ ಮನಸ್ಸನ್ನು ಬೇಗ ಗೆಲ್ಲಲು ಸಾಧ್ಯವಾಗುತ್ತದೆ. ಈ ಗುಣದಿಂದಲೇ ಹಲವಾರು ಜನರು ತಮ್ಮಲ್ಲಿ ಇಂಗ್ಲೀಷ್ ಭಾಷೆಯನ್ನು ಸುಲಭವಾಗಿ ಮಾತನಾಡುವುದನ್ನು ಕಲಿತುಕೊಂಡು ತಮ್ಮ ಯಶಸ್ಸಿನ ದಾರಿಯನ್ನು ಕಂಡುಕೊಂಡಿದ್ದಾರೆ ಎಂಬುದು ನನಗೆ ಸಾರ್ಥಕ ಭಾವನೆ ಮೂಡಿಸುತ್ತಿದೆ ಎಂದು ಶ್ರೀ ನೆವಿಲ್ ರೋಡ್ರಿಗ್ಸ್ ನೆನಪಿಸಿಕೊಳ್ಳುತ್ತಾರೆ.
ಇಂಗ್ಲೀಷ್ ಭಾಷೆಯಲ್ಲಿ ಸುಲಭವಾಗಿ ಮಾತನಾಡಲು ಕಲಿತರೆ ಜ್ಞಾನವಂತರಾಗಿ ಮತ್ತು ವ್ಯವಹಾರದ ಬಗ್ಗೆ ಸಹ ಉತ್ತಮ ಜ್ಞಾನವನ್ನು ಹೊಂದಬಹುದಾಗಿದೆ. ಇಂಗ್ಲೀಷ್ ಭಾಷೆಯ ಮೇಲಿನ ಹಿಡಿತದಿಂದ ತಮ್ಮ ವಿಚಾರಗಳನ್ನು ಎಲ್ಲರ ಎದುರಿಗೆ ಹೇಳಲು ಯಾವುದೇ ರೀತಿಯ ಸಂಕೋಚ ಇರುವುದಿಲ್ಲ. ಇಂಗ್ಲೀಷ್ ಭಾಷೆಯ ಮಾತಿನಿಂದಲೇ ಇತರರನ್ನು ಗಟ್ಟಿಗೊಳಿಸುವುದು, ಆತ್ಮವಿಶ್ವಾಸವನ್ನು ಹೆಚ್ಚಿಸಿ, ಹೊಸ ಹುರುಪನ್ನು ತುಂಬುವುದು ಸಾಧ್ಯ. ಈ ಇಂಗ್ಲೀಷ್ ಭಾಷಾ ಪರಿಣಿತಿಯಿಂದ ಉತ್ತಮ ಸಲಹಾಗಾರರು ಆಗಬಹುದಾಗಿದೆ.
ಎಲ್ಲರೂ ಒಂದಕ್ಕಿಂತ ಹೆಚ್ಚು ಭಾಷೆಯ ಮೇಲೆ ಹಿಡಿತ ಹೊಂದಿದ್ದರೆ ಎಲ್ಲರೊಂದಿಗೆ ಕಾರ್ಯನಿರ್ವಹಿಸಬಹುದು. ಅಲ್ಲದೇ ವಿದೇಶಿಯವರೊಂದಿಗೆ ವಿಶ್ವಾಸದಿಂದ ಮಾತನಾಡುವ ಕಲೆ ರೂಢಿಸಿಕೊಂಡಂತಾಗುತ್ತದೆ.
ಇಂಗ್ಲೀಷ್ ಭಾಷೆಯಿಂದ ಮತ್ತು ಇತಿಹಾಸದ ಅರಿವನ್ನೂ ಮೂಡಿಸಿಕೊಳ್ಳಬಹುದು.
ಇನ್ನು ಈ ಬಗ್ಗೆ ಅಂದರೆ ಇಂಗ್ಲೀಷ್ ನಲ್ಲಿ ಮಾತನಾಡಲು ಕಲಿತುಕೊಳ್ಳಲು ಇನ್ನೇಕೆ ತಡ ಎನ್ನಬೇಕಾಗುತ್ತದೆ. ಆದ್ದರಿಂದ ಕೂಡಲೇ ಶ್ರೀ ನೆವಿಲ್ ರೋಡ್ರಿಗ್ಸ್ ಅವರನ್ನು 8971899088 ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕಿಸಿ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವ ಕಲೆಯನ್ನು ಕಲಿತುಕೊಂಡು ಜೀವನ ಪಾವನ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎನ್ನಬಹುದು.
ಲೇಖನ: ನಾಗನೂರಮಠ ಎಸ್.ಎಸ್.
x
x