ಬಿ.ಫಾರ್ಮ್ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

varthajala
0

ಬೆಂಗಳೂರು, ಜನವರಿ 19, (ಕರ್ನಾಟಕ ವಾರ್ತೆ) : ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯದಿಂದ 2021-22 ನೇ ಸಾಲಿನ ಉಳಿಕೆ ಸೀಟುಗಳಿಗೆ ಪ್ರಥಮ ವರ್ಷದ ಬಿ.ಫಾರ್ಮ್ ಕೋರ್ಸಿನ ವ್ಯಾಸಂಗದ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಅರ್ಹ ವಿದ್ಯಾರ್ಥಿಗಳು ದಿನಾಂಕ : 27-01-2022 ರಂದು ಬೆಳಿಗ್ಗೆ 10.00 ರಿಂದ 11.30 ಗಂಟೆಗೆಯೊಳಗೆ ಸಂದರ್ಶನಕ್ಕೆ ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮೂಲ ದಾಖಲಾತಿಗಳೊಂದಿಗೆ (ಎಸ್.ಎಸ್.ಎಲ್.ಸಿ, ಪಿ.ಯು.ಸಿ., ಬಿ.ಇ.ಓರವರಿಂದ ದೃಢೀಕರಣಗೊಂಡಿರುವ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಸಿ.ಇ.ಟಿ. ಬ್ಯಾಂಕ್ ಪ್ರಮಾಣ ಪತ್ರವು ಕಡ್ಡಾಯವಾಗಿರುತ್ತದೆ.) ಹಾಜರಾಗಲು ಸೂಚಿಸಿದೆ. ಆಯ್ಕೆಯಾದ ವಿದ್ಯಾರ್ಥಿಗಳು ಅದೇ ದಿನಾಂಕದಂದು ಪ್ರವೇಶವನ್ನು ಪಡೆಯತಕ್ಕದ್ದು, ಪ್ರಥಮ ಬಿ.ಫಾರ್ಮ್ ಕೋರ್ಸ್ನ ಪ್ರವೇಶ ಶುಲ್ಕ ರೂ.14,450/- ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-22222681, ಇಮೇಲ್ 
principal.gcp123@gmail.com,  website : www.govtcopblr.org ಗೆ ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Admission for B.Pharm course

Bengaluru, January 19 (Karnataka information) :

Eligible candidates are informed to apply for the admission into 1st B.Pharm course for the unfilled seats available at Govt. College of Pharmacy, P. Kalingrao Road, Subbaiah Circle, Bangalure - 27. The students have to appear before the registration committee in the above address on 27-01-2022 between 10.00am to 11.30 am with all the original documents (SSLC, PUC, Study certificate attested by BEO and CET rank certificate is mandatory). The selected candidates should take admission on the same day by paying Rs.14,450 /-. For more details Contact Phone No. 080-22222681. or you can visit email : principal.gcp123@gmail.com website : www.govtcopblr.org


Tags

Post a Comment

0Comments

Post a Comment (0)