ಕೇರಳದ ಕಾಸರಗೋಡಿನಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಫೆಬ್ರವರಿ 2 ಮತ್ತು 3ರಂದು ಕನ್ನಡ ಸ್ನಾತಕೋತ್ತರ ಪ್ರವೇಶಕ್ಕಾಗಿ ಸ್ಥಳದಲ್ಲಿಯೇ ತತ್‌ಕ್ಷಣ ಪ್ರವೇಶಾತಿ ನೀಡಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸ್ನಾತಕೋತ್ತರ ಹಂತದಲ್ಲಿ ಕನ್ನಡವನ್ನು ಅಧ್ಯಯನ ಮಾಡುವ, ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಆರ್ಥಿಕ ನೆರವನ್ನು ಒದಗಿಸಲು ಉದ್ದೇಶಿಸಿದೆ ಎಂದು ಕೇಂದ್ರ ಕಸಾಪ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಇದಕ್ಕಾಗಿ ಕಾರ್ಪೊರೇಟ್ ಸಂಸ್ಥೆಗಳನ್ನು ಸಂಪರ್ಕಿಸಿ, ಅವುಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯ ಮೂಲಕ, ಈ ನೆರವನ್ನು ಕ್ರೋಡೀಕರಿಸಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕಾಸರಗೋಡು ಕೇಂದ್ರೀಯ ವಿವಿಯಲ್ಲಿ ಕನ್ನಡ ಎಂ.ಎ. ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿವರ್ಷ ರೂ. 25,000-00 ಗಳ ಪ್ರೋತ್ಸಾಹಕ ಧನವನ್ನು ನೀಡಲಾಗುತ್ತಿದೆ.
ಕಾಸರಗೋಡಿನ ಪೆರಿಯೇ ತೇಜಸ್ವಿನಿ ಹಿಲ್ಸ್ನಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಅಂದು ಬೆಳಗ್ಗೆ 10ರಿಂದ ಪ್ರವೇಶ ಪರೀಕ್ಷೆ ನಡೆಯಲಿದೆ. ಕನಿಷ್ಠ 25 ವಿದ್ಯಾರ್ಥಿಗಳು ಸೇರಿಕೊಂಡರೆ ಕನ್ನಡ ವಿಭಾಗ ಉಳಿಯುತ್ತದೆ.
ಕನ್ನಡ ವಿಭಾಗಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುವ ಮೂಲಕ ಕನ್ನಡವನ್ನು ಉಳಿಸಬೇಕಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನಾಡೋಜ ಡಾ. ಮಹೇಶ ಜೋಶಿ (9448490240, 8073006874), ಹಾಗೂ ಪ್ರೊ. ಮೋಹನ್ ಎ.ಕೆ. ಮುಖ್ಯಸ್ಥರು, ಕನ್ನಡ ವಿಭಾಗ, ಕಾಸರಗೋಡು ಕೇಂದ್ರೀಯ ವಿವಿ (9448215487)
ಇವರನ್ನು ಸಂಪರ್ಕಿಸಬಹುದು.