ಮೈನಿಂಗ್ ಕ್ಷೆತ್ರದಲ್ಲಿ ಯುವಕ ಯುವತಿಯರು ಜಾಕ್ ಹ್ಯಾಮರ್ ತರಬೇತಿಯ ಉಪಯೋಗ ಪಡೆದು ಉದ್ಯೋಗ ಸಂಪಾದಿಸುವಲ್ಲಿ ಯಶಸ್ಸು ಕಾಣಬೇಕು-ಎಂ.ಕಿರಣ್ ಕುಮಾರ್
ಬಳ್ಳಾರಿ.ಜ.13 : ಬಳ್ಳಾರಿ ಜಿಲ್ಲೆಯಲ್ಲಿ ಮೈನಿಂಗ್ ಗಣಿಗಾರಿಕೆ ಹೇರಳವಾಗಿರುವುದರಿಂದ ಈ ತರಬೇತಿಯ ಉಪಯೋಗವನ್ನು ಪಡೆದುಕೊಂಡು ಉದ್ಯೋಗ ಸಂಪಾದಿಸುವಲ್ಲಿ ಯಶಸ್ಸು ಕಾಣಬೇಕೆಂದು ಹಾನಗಲ್ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೆಚ್ ಎಂ ಕಿರಣ್‌ಕುಮಾರ್ ರವರು ಯುವಕ ಯುವತಿಯರಿಗೆ ಕಿವಿ ಮಾತು ಹೇಳಿದರು.
ಅವರು ನಗರದ ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್, ಕಾಲೇಜ್‌ನಲ್ಲಿ ಸುಮಾರು ನೂರು ಜನ ಯುವಕ ಯುವತಿಯರಿಗಾಗಿ ಪಿ.ಎಂ.ಕೆ.ವಿ.ವೈ ಮತ್ತು ಇನ್‌ಟರ್ನ್ ಸಂಸ್ಥೆ, ಶಿವಮೊಗ್ಗ ಹಾಗೂ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾಟ್ರಸ್ಟ್ ಬಳ್ಳಾರಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮೈನಿಂಗ್ ಕ್ಷೇತ್ರದ ಜಾಕ್‌ಹ್ಯಾಮರ್ ತರಬೇತಿಯನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಹಿರೇಗೌಡರ್ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ಟ್ರಸ್ಟ್ನ ಹೊನ್ನೂರಸ್ವಾಮಿ, ಥರ್ಮೊಕೋಲ್ ಕಲಾವಿದ ಉಮೇಶ್, ನಾಗರಾಜ ಕಂಪ್ಯೂಟರ್ ಸೈನ್ಸ್ ವಿಭಾಗ, ಗೋವಿಂದರಾಜುಲು ಸಿವಿಲ್ ಇಂಜಿನಿಯರಿ0ಗ್ ವಿಭಾಗ, ಗೌಸಿಯಾ ಬೇಗಮ್ ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಶನ್, ಹೆಮಂತ್‌ಕುಮಾರ್ ಟಿ ಇಇಇ ವಿಭಾಗ, ಸೈಯದ್ ಶಾಬುದ್ದೀನ್ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ, ಮೆಟಲರ್ಜ್ ವಿಭಾಗದ ಪೃಥ್ವಿರಾಜ್, ಕಲ್ಪಾನಾ ಕಂಪ್ಯೂಟರ್ ಸೈನ್ಸ್ ಟೀಚರ್ ಡಿಜೈನ್ ಫ್ಯಾಬ್ರಿಕೇಷನ್ ಲೆಕ್ಟರ್ ಶೈಲಾಶ್ರೀ ಶಾನ್‌ಭಾಗ್, ಪ್ಲೇಸ್‌ಮೆಂಟ್ ಆಫೀಸರ್ ಕುಲ್ಲಯ್ಯ ಇದ್ದರು.