ಬಳ್ಳಾರಿ ಜ 07. ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 05-01-2022 ರಂದು "ಅಕೌಂಟ್ ಆಡಿಟ್ ಪ್ರಾಸಸ್ " ಜಾಗೃತಿ ಕಾರ್ಯಕ್ರಮವು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಎಸ್. ಪನ್ನಾರಾಜ್ ಇವರ ಜೊತೆಯಲ್ಲಿ ವೀ.ವಿ.ಸಂಘದ ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯ ಆಡಳಿತಮಂಡಳಿಯ ಅಧ್ಯಕ್ಷರು ಅಲ್ಲಂ ಚನ್ನಪ್ಪ, ಪ್ರಾಂಶುಪಾಲರು ಡಾ|| ಟಿ.ಹನುಮಂತ ರೆಡ್ಡಿ, ಹಾಗೂ ಉಪ-ಪ್ರಾಂಶುಪಾಲರು ಡಾ|| ಸವಿತ ಸೊನೊಳಿ, ಡೀನ್ ಅಕಾಡಮಿಕ್ ಡಾ||ಗಿರೀಶ.ಹೆಚ್, ಡೀನ್ -ಪರೀಕ್ಷಾ ವಿಭಾಗ ಡಾ||ಬಿ.ಶ್ರೀಪತಿ, ಮ್ಯಾನೇಜ್ ಮೆಂಟ್ ವಿಭಾಗದ ಡಾ||ತಿಮ್ಮನ ಗೌಡರು, ಎಲ್ಲಾ ವಿಭಾUಗಳ ಮುಖ್ಯಸ್ಥರು, ಐ.ಕ್ಯೂ.ಏ.ಸಿ-ಕ್ವಾಲಿಟೀ ವಿಭಾಗದ ಡಾ||ವೀರಗಂಗಾಧರ ಸ್ವಾಮಿ, ಹಾಗೂ ಶಿಕ್ಷಕ ವೃಂದದವರು ಭಾಗವಹಿಸಿದರು.
ಎಸ್. ಪನ್ನಾರಾಜ್ ಮಾತನಾಡುತ್ತಾ “" ಮುಂಬರುವ ದಿನಗಳಲ್ಲಿ ಭಾರತೀಯರಾಗಿ ಜೀವನ ಮಟ್ಟದ ಉನ್ನತೀಕರಣಕ್ಕಾಗಿ, ಉತ್ತಮ ಆರ್ಥಿಕ ನಿರ್ವಾಹಣೆ ಬೇಕಾಗಿದೆ, ತೆರಿಗೆ ಸಲ್ಲಿಕೆ, ಎಲ್ಲ ವಹಿವಾಟುಗಳು ಎಲ್ಲವು ONLINE ಮುಖಾಂತರ ಇರುವುದರಿಂದ , ಮ್ಯಾನಿಪುಲೇಷನ್ ಮಾಡಲು ಸದ್ಯವಿಲ್ಲ, ಕಾನೂನನ್ನು ಹೇಗೆ ಅರ್ಥೈಸುವುದು, ನ್ಯಾಯವನ್ನು ಒದಗಿಸುವುದು, ಆರ್ಥಿಕ ಶಿಸ್ತುಯನ್ನುವುದನ್ನು ಹೇಗೆ ನಿರ್ವಹಿಸುವುದು, ದೊಡ್ಡ ಸವಾಲಾಗಿರುತ್ತದೆ ಎಂಬುದು ಮನವರಿಕೆಯಾಗಲಿ, ಮುಖ್ಯವಾಗಿ ಶಿಕ್ಷಣ ಎನ್ನುವುದು ಜಿವನೋಪಾಯಕ್ಕೆ ಬೇಕಾಗಿದೆ,
ಅದು ಕೇವಲ ಮಾನಸಿಕ ಸಂತೋಷ, ಆರೋಗ್ಯಕರ ಜೀವನ, ಅಲ್ಲದೇ ಆರ್ಥಿಕ ಸ್ವಾತಂತ್ರ ಬೇಕೆಂದರೇ ಉದ್ಯೋಗ ಬೇಕು ಅಥವಾ ಸ್ವಯಂ-ಉದ್ಯೋಗಿಯಾಗಿ, ಆದರೇ ಆರ್ಥಿಕ ಶಿಸ್ತು ಎನ್ನುವುದು ಮುಖ್ಯ. ಖಾಸಗಿ ಮತ್ತು ಸರ್ಕಾರ ಎರಡು ಕೂಡ ಒಟ್ಟಾಗಿ ಒಂದು ಸಾರ್ವಜನಿಕ ಘಟಕಗಳಾಗಿರುತ್ತವೆ ಹಾಗು ಅಂತಹದ್ದೇ ವೀರಶೈವ ವಿದ್ಯಾವರ್ಧಕ ಸಂಘವು ಆಗಿದ್ದು ಸಮಾಜದ ಸೇವೆಯಲ್ಲಿ ಶತಮಾನದ ಇತಿಹಾಸ ಹೋಂದಿದೆ, ಇಂದಿನ ವಾಣಿಜ್ಯಮಯ ಜಗತ್ತಿನಲ್ಲಿ ಐಒಜಿತ ಆರ್ಥಿಕ ಶಿಸ್ತು ನರ್ವಾಹಣೆ ಬೇಕಾಗಿದೆ, ಇವತ್ತಿನ ಪೀಳೀಗೆಗೆ ಒಂದು ಆಲೋಚನೆ ಕೊಟ್ಟರೆ ಸಾಕು. ಅವರು ಸಾಕಷ್ಟು ಮಾಡಿತೋರಿಸುತ್ತಾರೆ ಎನ್ನುವುದು ಕಂಡು ಬರುತ್ತದೆ. ಇಂದು ದೇಶಕ್ಕೆ ಉದ್ಯೋಗ ಅವಕಾಶಗಳನ್ನು ಸೃಷ್ಠಿಸುವವರು ಬೇಕಾಗಿದ್ದಾರೆ ಎಂದು ಮಾತನಾಡಿದರು.