ಬೆಂಗಳೂರು : ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಇದೇ ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.
ವೇಳಾಪಟ್ಟಿಗೆ ಅಭ್ಯರ್ಥಿಗಳು/ಪೋಷಕರು ಆಕ್ಷೇಪಣೆ ಸಲ್ಲಿಸಲು ಜನವರಿ 6- 14 ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಆ ಅವಧಿ ಮುಗಿದಿದ್ದು, ಅಂತಿಮ ವೇಳಾಪಟ್ಟಿ ಪ್ರಕಟಿಸಿದೆ. ಬೆಳಗ್ಗೆ 10-30 ರಿಂದ ಮಧ್ಯಾಹ್ನ 1-45ರ ವರೆಗೆ ಪರೀಕ್ಷೆ ನಡೆಯಲಿದೆ. ಭಾಷಾ ಪರೀಕ್ಷೆಯು 100 ಅಂಕಗಳಿಗೆ ಹಾಗೂ ಕೋರ್ ಸಬ್ಜೆಕ್ಟ್ 80 ಅಂಕಗಳಿಗೆ ಇರಲಿದೆ.
28-3-2022- ಪ್ರಥಮ ಭಾಷೆ30-3-2022- ದ್ವಿತೀಯ ಭಾಷೆ1-4-2022- ಅರ್ಥ ಶಾಸ್ತ, ಕೋರ್ ಸಬ್ಜೆಕ್ಟ್4-4-2022- ಗಣಿತ, ಸಮಾಜಶಾಸ್ತ 6-4-2022- ಸಮಾಜ ವಿಜ್ಞಾನ 8-4-2022- ತೃತೀಯ ಭಾಷೆ11-4-2022- ವಿಜ್ಞಾನ, ರಾಜ್ಯಶಾಸ್ತ , ಕರ್ನಾಟಕ/ ಹಿಂದೂಸ್ತಾನಿ ಸಂಗೀತ..ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ನೀಡಲಾಗುತ್ತೆ.