ಸುಫಿಯಾ ಕಾಲೇಜು ಕಾನೂನು ಸೇವೆಗೆ ಅಗತ್ಯವಿರುವ ಮಾನವ ಸಂಪನ್ಮೂಲ ಪೂರೈಸುತ್ತಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ. ಕೆ.ಜಿ ಪರಶುರಾಮ್ ಶ್ಲಾಘನೆ ವ್ಯಕ್ತಪಡಿಸಿದರು.
ತುಮಕೂರು: ಕಾನೂನು ಪರೀಕ್ಷೆಗಳ ಮುಂದೂಡಿಕೆ ಇಲ್ಲ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಎನ್. ಬಸವರಾಜು ತಿಳಿಸಿದರು.
ನಗರದಸುಫಿಯಾ ಕಾಲೇಜಿನಲ್ಲಿ ಶುಕ್ರವಾರ ಸುಫಿಯಾ ಕಾನೂನು ಮಹಾ ವಿದ್ಯಾಲಯ, ಎಚ್.ಎಂ.ಎಸ್ ಪಾಲಿಟೆಕ್ನಿಕ್ ಕಾಲೇಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ನಡೆದ “ಮಾನವ ಹಕ್ಕುಗಳ ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಿಸೆಂಬರ್-15 ರಂದು ಕಾನೂನು ಪರೀಕ್ಷೆಗಳು ಆರಂಭವಾಗಲಿದ್ದು, ಯಾವುದೇ ಕಾರಣಕ್ಕೂ ಪರೀಕ್ಷೆಗಳನ್ನು ಮುಂದೂಡುವುದಿಲ್ಲ ಎಂದು ಅವರು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾದೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, ಬೇರೆಯವರ ಹಕ್ಕನ್ನು ಸಂರಕ್ಷಿಸಿದರೆ ನಮ್ಮ ಹಕ್ಕನ್ನೂ ರಕ್ಷಿಸಿಕೊಳ್ಳಬಹುದು. ಬೇರೆಯವರ ಹಕ್ಕನ್ನು ಕಸಿದುಕೊಂಡಲ್ಲಿ ಅವರ ಹಕ್ಕು ಉಲ್ಲಂಘನೆಯಾಗುತ್ತದೆ. ನಂತರದಲ್ಲಿ ನಮ್ಮ ಹಕ್ಕು ಸಹ ಉಲ್ಲಂಘನೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇತರರಿಗೆ ಸಮಸ್ಯೆ ಮಾಡದೆ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದರು.
ತುಮಕೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ. ಕೆ.ಜಿ ಪರಶುರಾಮ್ ಮಾತನಾಡಿ, 74 ವರ್ಷಗಳ ಹಿಂದೆ ಶೇ19 ರಷ್ಟು ಸಾಕ್ಷರತೆ ಇತ್ತು ಆಗಲೂ ಸಹ ಮಾನವ ಹಕ್ಕುಗಳ ಉಲ್ಲಂಘನೆಯಾಗುತತಿತ್ತು. ಇದೀಗ ಸಾಕ್ಷರತೆ ಪ್ರಮಾಣ ಶೇ100 ರ ಸಮೀಪ ಇದೆ. ಸಾಕ್ಷರತೆ ಪ್ರಮಾನ ಹೆಚ್ಚುತ್ತಿದ್ದರೂ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿದೆ. ಇದ್ಕೆ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ಪ್ರಮುಖ ಕಾರಣ ಎಂದರು.
ಸ್ವತಂತ್ರದ ಬಗ್ಗೆ 162 ದೇಶಗಳ ನಡೆದ ಸಮೀಕ್ಷೆಯಲ್ಲಿ ನ್ಯೂಯಾರ್ಕ್ ದೇಶ ಪ್ರಥಮ ಸ್ಥಾನದಲ್ಲಿದ್ದರೆ ಭಾರತ 111 ನೇ ಸ್ಥಾನದಲ್ಲಿದೆ. ಉತ್ತರ ಕೊರಿಯ, ಇರಾನ್, ಚೀನಾದಂತಹ ದೇಶಗಳು ಹೊಂದಿರುವ ಶಸ್ತ್ರಸ್ತ್ರಾಗಳು, ಯುದ್ದಕ್ಕೆ ಸಿದ್ಧವಾಗಿರುವ ಪರಿಯನ್ನು ಅವಲೋಕಿಸಿದಾಗ, ಅಮೇರಿಕಾ, ಸುಮಾಲಿಯಾ ದೇಶಗಳ ನಡುವಿನ ಮಾನವ ಹಕ್ಕುಗಳ ಸ್ಥಿತಿಗತಿಗಳ ಬಗ್ಗೆ ಹೋಲಿಕೆ ಮಾಡಿದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ವಸ್ತುಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದು ಎಂದರು.
ಎಚ್.ಎಂ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಷಫೀ ಅಹಮದ್ ಮಾತನಾಡಿ, ಸ್ವಾರ್ಥಕ್ಕಾಗಿ ಬದುಕದೆ ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂಬ ಆಶಯ ಪ್ರತಿಯೊಬ್ಬರಲ್ಲಿಯೂ ಇರಬೇಕು. ಡಾ.ಬಿ.ಆರ್. ಅಮಬೇಡ್ಕರ್ ಅವರು ಸಂವಿಧಾನದ ಮೂಲಕ ದೇಶದ ಜನತೆಗೆ ಸಮಾನತೆ, ಜಾತ್ಯಾತೀತತೆ, ಜೊತೆಗೆ ಮೂಲಭೂತ ಹಕ್ಕುಗಳನ್ನು ನೀಡಿದ್ದಾರೆ. ಅವುಗಳನ್ನು ಸಂರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಎಚ್.ಎಂ.ಎಸ್. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಟಿ.ಎ. ರಹಮತ್ ಉಲ್ಲಾ ಖಾನ್ ಮಾತನಾಡಿದರು.
ಸುಫಿಯಾ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್. ರಮೇಶ, ಉಪ ಪ್ರಾಂಶುಪಾಲ ಓಬಯ್ಯ, ಉಪನ್ಯಾಸಕರಾದ ಸಿ.ಕೆ.ಮಹೇಂದ್ರ, ಪಿ.ಎಲ್. ಮಂಜುನಾಥ್ , ಶ್ರೀನಿವಾಸ್, ರೇಣುಕ, ಸೈದಾ ಜೈನಬ್ ತರನಂ, ಕಾಸಿಫ್ ಅಹಮದ್, ಆರತಿ ಉಪಸ್ಥಿತರಿದ್ದರು.
ತುಮಕೂರಿನ ಸುಫಿಯಾ ಕಾಲೇಜಿನಲ್ಲಿ ಶುಕ್ರವಾರ ಸುಫಿಯಾ ಕಾನೂನು ಮಹಾ ವಿದ್ಯಾಲಯ, ಎಚ್.ಎಂ.ಎಸ್ ಪಾಲಿಟೆಕ್ನಿಕ್ ಕಾಲೇಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ನಡೆದ “ಮಾನವ ಹಕ್ಕುಗಳ ದಿನಾಚರಣೆ” ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಎನ್. ಬಸವರಾಜು ಅವರನ್ನು ಅಭಿನಂದಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾದೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಎಚ್.ಎಂ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಷಫೀ ಅಹಮದ್, ಸುಫಿಯಾ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್. ರಮೇಶ, ತುಮಕೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ. ಕೆ.ಜಿ ಪರಶುರಾಮ್ ಉಪಸ್ಥಿತರಿದ್ದರು.