ಲೇಖಕಿ ಶ್ರೀಮತಿ ಕೆ.ವಿ. ರಾಜೇಶ್ವರಿ ತೇಜಸ್ವಿ ನಿಧನಕ್ಕೆ ಕಸಾಪ ಸಂತಾಪ

varthajala
0

ಹಿರಿಯ ಲೇಖಕಿ, ಸಾಂಸ್ಕೃತಿಕ ಚಿಂತಕಿ ಹಾಗೂ ಅಗ್ರಮಾನ್ಯ ಸಾಹಿತಿ ಡಾ. ಪೂರ್ಣಚಂದ್ರತೇಜಸ್ವಿ ಅವರ ಧರ್ಮಪತ್ನಿ ಶ್ರೀಮತಿ ಕೆ.ವಿ. ರಾಜೇಶ್ವರಿ ತೇಜಸ್ವಿ ಅವರು (14-12-2021 ರ ಮಂಗಳವಾರ) ನಿಧನರಾಗಿರುವುದು ಅತ್ಯಂತ ದುಃಖದ ಸಂಗತಿ. ಪೂರ್ಣಚಂದ್ರತೇಜಸ್ವಿ ಅವರ ಮೇರು ಸಾಹಿತ್ಯಿಕ ಕೃಷಿಗೆ ಪ್ರೇರಣೆಯಾಗಿದ್ದ ರಾಜೇಶ್ವರಿ ಅವರು ಸಹ ತೇಜಸ್ವಿಯವರ ಪ್ರಭಾವದಿಂದ ಸ್ವತಃ ಲೇಖಕಿಯಾಗಿದ್ದರು. ‘ನನ್ನ ತೇಜಸ್ವಿ’, ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಹಾಗೂ ‘ನನ್ನ ಡ್ರೆöÊವಿಂಗ್ ಡೈರಿ’ (ಮುದ್ರಣದಲ್ಲಿದೆ) ಕೃತಿಗಳನ್ನು ರಚಿಸಿದ್ದರು. ರಸಋಷಿ ಕುವೆಂಪು ಅವರ ಸೊಸೆಯಾಗಿ ವಿಶ್ವಮಾನವ ಸಂದೇಶ ಸಾರುವ ಮಂತ್ರಮಾAಗಲ್ಯ ಮದುವೆ ಪರಿಚಯಿಸಿ, ಎಲ್ಲರಿಗೂ ಮಾದರಿಯಾಗಿದ್ದರು. 

ಓದುಗರನ್ನು ಪ್ರೀತಿ-ಅಭಿಮಾನದಿಂದ ಕಾಣುತ್ತಾ, ಎಲ್ಲರನ್ನೂ ಗೌರವಿಸುವ, ಅಭಿಮಾನಿಸುವ ಹೃದಯವಂತಿಕೆಯನ್ನು ಹೊಂದಿದ್ದ ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರ ಅಗಲಿಕೆಯಿಂದ ಒಬ್ಬ ಮಾತೃಹೃದಯಿ ಅಮ್ಮ ಇಲ್ಲದಂತಾಗಿದೆ. ಅವರ ಕುಟುಂಬಕ್ಕೆ ಸಾಂತ್ವನವನ್ನು ತಿಳಿಸುತ್ತಾ, ಭಗವಂತ ಶ್ರೀಯುತರ ಆತ್ಮಕ್ಕೆ ಶಾಂತಿಯನ್ನು  ನೀಡಲೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಪ್ರಾರ್ಥಿಸುತ್ತೇವೆ.


Post a Comment

0Comments

Post a Comment (0)