ಕನ್ನಡ ಕಡೆಗಣನೆ ಸಲ್ಲದು

varthajala
0


ಮಾಧ್ಯಮದ ಮೂಲಕ ಈಗ ತಿಳಿದುಬಂದದ್ದೆAದರೆ : ಕೇಂದ್ರ ಸರ್ಕಾರ ಕಳೆದ 7 ವರ್ಷಗಳಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ನೀಡಿದ ಅನುದಾನ ಕೇವಲ 8.39 ಕೋಟಿ. ರೂ.ಗಳು. ಅದೇ ಸಂಸ್ಕೃತಕ್ಕೆ ರೂ. 1200.00 ಕೋಟಿಗೂ ಹೆಚ್ಚು ತಮಿಳಿಗೆ ರೂ. 50.00 ಕೋಟಿಗೂ ಹೆಚ್ಚು ಅನುದಾನ. 


ಏಳು ಕೋಟಿ ಜನರ ಭಾಷೆಯಾಗಿರುವ ಕನ್ನಡಕ್ಕಾಗುತ್ತಿರುವ ಈ ರೀತಿಯ ಕಡೆಗಣೆನೆಯನ್ನು ಯಾವ ಕನ್ನಡ ಪ್ರೇಮಿಯೂ ಸಹಿಸಿಕೊಳ್ಳಲಾರ/ಸಹಿಸಿಕೊಳ್ಳಬಾರದೂ ಕೂಡ. ಎರಡು ಸಾವಿರ ವರ್ಷಕ್ಕೂ ಹೆಚ್ಚು ಅದ್ಭುತವಾದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪರಂಪರೆಯಿರುವ ಭಾಷೆ ಕನ್ನಡಕ್ಕೆ ಶಾಸ್ತಿçÃಯ ಭಾಷಾ ಸ್ಥಾನಮಾನ ನೀಡಿ, ಕೇಂದ್ರ ಸರಕಾರ ಕೈತೊಳೆದುಕೊಂಡು ಮರೆತೇ ಬಿಟ್ಟಂತೆನಿಸುತ್ತದೆ. ನಾನು ಇದನ್ನು ಕನ್ನಡ ನಾಡ ಜನರ ಪರವಾಗಿ ಉಗ್ರವಾಗಿ ಖಂಡಿಸುತ್ತೇನೆ. ನಮ್ಮ ಒಬ್ಬಿಬ್ಬರು ಸಂಸದರನ್ನು ಹೊರತುಪಡಿಸಿ ಉಳಿದ ಎಲ್ಲರೂ ಬಾಯಿಮುಚ್ಚಿಕೊಂಡಿರುವದು ತೀರ ಅವಮಾನಕರ ಸಂಗತಿ. ಅವರೆಲ್ಲ ಪಕ್ಕದ ರಾಜ್ಯದವರನ್ನು ನೋಡಿಯಾದರೂ ಎಚ್ಚೆತ್ತುಕೊಳ್ಳಬೇಕು. ತಕ್ಷಣ ಕೇಂದ್ರ ಸರ್ಕಾರ ಸಿ.ಐ.ಐ.ಎಲ್., (ಭಾರತೀಯ ಭಾಷಾ ಸಂಸ್ಥಾನ, ಮೈಸೂರು) ಇವರಿಗೆ ಹೆಚ್ಚು ಹಣ ಬಿಡುಗಡೆ ಮಾಡಬೇಕು. ಹಾಗೂ ಬಹುದಿನಗಳ ಬೇಡಿಕೆಯಾದ ಮೈಸೂರಿನಲ್ಲಿರುವ ಸಿ.ಐ.ಐ.ಎಲ್. (ಭಾರತೀಯ ಭಾಷಾ ಸಂಸ್ಥಾನ)ಗೆ ಸ್ವಾಯತ್ತತೆಯನ್ನು ನೀಡಿ ಶೀಘ್ರವೇ ಆದೇಶ ಹೊರಡಿಸಬೇಕೆಂದು ನಾನು ತೀವ್ರವಾಗಿ ಹಕ್ಕೊತ್ತಾಯ ಮಾಡುತ್ತೇನೆ. 

- ನಾಡೋಜ ಡಾ. ಮನು ಬಳಿಗಾರ್

ನಿಕಟಪೂರ್ವ ಅಧ್ಯಕ್ಷರು 

ಕನ್ನಡ ಸಾಹಿತ್ಯ ಪರಿಷತ್ತು

Post a Comment

0Comments

Post a Comment (0)