12 ರವೆರಗೆ ಹೋಟೆಲ್ ಅಶೋಕ್ ನಲ್ಲಿ ವಿಶಿಷ್ಠ ವಸ್ತ್ರ ವಿನ್ಯಾಸ ಪ್ರದರ್ಶನ

varthajala
0

ಬೆಂಗಳೂರು : ಹೋಟೆಲ್  ಅಶೋಕ್ ನಲ್ಲಿಂದು   ಹೈ ಲೈಫ್ ಪ್ರದರ್ಶನ, ಡಿ. 10 ರಿಂದ 12 ರವರೆಗೆ ಮೂರು ದಿನಗಳ ಪ್ರದರ್ಶನಕ್ಕೆ ಪ್ರಾರಂಭವಾಗಿದೆ.





ಫ್ಯಾಷನ್ ಲೋಕದ ವಿಶಿಷ್ಟವಾದ ಸಂಗ್ರಹಗಳು ಇಲ್ಲಿ ದೊರೆಯಲಿವೆ. ಕೇವಲ ವಸ್ತ್ರ ವಿನ್ಯಾಸವಲ್ಲದೇ, ವೈವಿಧ್ಯಮಯ ಆಭರಣ, ಬ್ಯಾಗ್, ಗೃಹಬಳಕೆಯ ವಸ್ತುಗಳು ಇಲ್ಲಿ ಲಭ್ಯವಿದೆ.  ದೇಶದ ಎಲ್ಲಾ ರಾಜ್ಯಗಳಿಂದ  ಪ್ರಸಿದ್ಧ ವಿನ್ಯಾಸಕಾರರು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಈ ಪ್ರದರ್ಶನ ಮಾರಾಟದಲ್ಲಿ ಮದುವೆಗೆ ಬೇಕಾಗುವ ಎಲ್ಲಾ ರೀತಿಯ ಉಡುಗೆ ತೊಡುಗೆಗಳು, ಚಿನ್ನಾಭರಣಗಳು, ದೊರೆಯಲಿವೆ.  ಮದುಮಕ್ಕಳ ಉಡುಗೆ ವಿನ್ಯಾಸದ ಪ್ರತ್ಯೇಕ ಮಳಿಗೆ ವಿಶೇಷವಾಗಿದೆ.  ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನ ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಮಾರಾಟವಿರುತ್ತದೆ.

Tags

Post a Comment

0Comments

Post a Comment (0)