ವೇಮಗಲ್ :- ಹೋಬಳಿಯಲ್ಲಿ ಬಹುತೇಕ ಅಂಗನವಾಡಿ, ಶಾಲಾ- ಕಾಲೇಜುಗಳು ಕುಸಿದಿದೆ. ವೇಮಗಲ್ ಸರ್ಕಾರಿ ಪ್ರೌಢಶಾಲೆ ಕಾಂಪೌಂಡ್ ಕೂಡ ಕುಸಿದಿರುವುದು ಜೊತೆಗೆ ವೇಮಗಲ್ ಸರ್ಕಾರಿ ಪ್ರೌಢಶಾಲೆ ಇವತ್ತೋ ನಾಳೆಯೋ ಬೀಳುವ ಹಂತದಲ್ಲಿದೆ. ವೇಮಗಲ್ ಸರ್ಕಾರಿ ಪ್ರೌಢಶಾಲೆ ಸಂಪೂರ್ಣವಾಗಿ ಶಿಥಿಲಿಗೊಂಡಿದ್ದು. ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಶಾಲೆಯ ಹಳೆಯ ವಿದ್ಯಾರ್ಥಿ ಗಂಗರಾಜು, ಪ್ರೊಫೆಸರ್ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿರವರಿಗೆ ಮನವಿ ನೀಡಿದ ಬೆನ್ನಲ್ಲೆ ಎಚ್ಚೆತ್ತ ಶಿಕ್ಷಣ ಇಲಾಖೆ ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮ ರೆಡ್ಡಿರವರು ವೇಮಗಲ್ ಸರ್ಕಾರಿ ಪ್ರೌಢಶಾಲೆಗೆ ಬೇಟಿ ನೀಡಿ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸ್ಥಳ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಯಲ್ಲಪ್ಪ ಮಾತನಾಡಿ ಇಲ್ಲಿ ಸುಮಾರು 367 ವಿದ್ಯಾರ್ಥಿಗಳಿದ್ದು. ಆಂಗ್ಲ ಭಾಷೆಯ ಶಿಕ್ಷಕಿ ಅವಶ್ಯಕತೆ ಇದೆ. ಜೊತೆಗೆ ಡಿ ಗ್ರೂಪ್ ನೌಕರರ ಸಿಬ್ಬಂದಿ ಕೂಡ ಕೊರತೆ ಇದೆ. ಆದ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸಹಕಾರ ಮಾಡಬೇಕೆಂದು ಒತ್ತಾಯಿಸಿದರು. ಶಾಲೆಯ ಬಹುತೇಕ ಕೊಠಡಿಗಳು ಶಿಥಿಲಿಗೊಂಡಿದ್ದು, ಸಮಸ್ಯೆಗಳು ಎದುರಾಗಿವುದಕ್ಕಿಂತ ಮುಂಚಿತವಾಗಿಯೇ ಸಮಸ್ಯೆಗಳು ಬಗೆಹರಿಸಬೇಕು.
*ಸಂಬಂಧಿಸಿದ ಅಧಿಕಾರಿಗಳನ್ನು ಬೇಟಿ ಮಾಡಿ ವೇಮಗಲ್ ಭಾಗದ ಕೈಗಾರಿಕಾ ಪ್ರದೇಶದ ಕಂಪನಿಗಳ ಸಿಎಸ್ ಆರ್ ಹಣವನ್ನು ಸ್ಥಳೀಯ ಶಾಲೆಗಳ ಅಭಿವೃದ್ಧಿಗೆ ಸಹಕಾರ ಮಾಡಿಸುವಂತೆ ಶಾಲೆಯ ಹಳೆಯ ವಿದ್ಯಾರ್ಥಿ ಗಂಗರಾಜು ಶಿಕ್ಷಣಾಧಿಕಾರಿ ವೆಂಕಟರಾಮ ರೆಡ್ಡಿಯನ್ನು ಒತ್ತಾಯಿಸಿದರು*
ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯೋಪಾಧ್ಯಾಯ ನಾರಾಯಣಸ್ವಾಮಿ. ಮುನಿರಾಜು, ಪಿಟಿ ಬ್ಯಾನರ್ಜಿ, ಮೋಹನ್, ಅನುರಾಧ ಉಪಸ್ಥಿತರಿದ್ದರು.