Karnataka State Government Employees Association : ಉಪನ್ಯಾಸಕರ ಜ್ವಲಂತ ಸಮಸ್ಯೆ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಣಯಗಳು

varthajala
0

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರನ್ನು ಪ್ರತಿನಿಧಿಸುವ ಎಲ್ಲಾ ವೃಂದ ಸಂಘಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಜ್ವಲಂತ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ದಿನಾಂಕ: 07-11-2021ರಂದು ನಡೆದ ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳು






• ರಾಜ್ಯದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ (1-5ನೇ ತರಗತಿ)  ಸುಮಾರು 75 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹಿಂದಿನ ಸೇವಾ ಜೇಷ್ಠತೆಯನ್ನು ಪರಿಗಣಿಸಿ 6-8ನೇ ತರಗತಿ ಶಾಲೆಗಳಿಗೆ ಮೇಲ್ದರ್ಜೆಗೇರಿಸಲು/ವೀಲಿನಗೊಳಿಸಲು ಕಾರ್ಯಕಾರಿ ಆದೇಶ ಹೊರಡಿಸುವ ಮೂಲಕ  75 ಸಾವಿರ ಪದವೀಧರ ಶಿಕ್ಷಕರುಗಳು ಹಲವಾರು ವರ್ಷಗಳ ಸಮಸ್ಯೆಯನ್ನು ಬಗೆಹರಿಸುವುದು.

• 1998-1999ರಲ್ಲಿ ಸೇವೆಗೆ ಸೇರ್ಪಡೆಗೊಂಡು, ಮಾನ್ಯ ಭಾರತ ಸರ್ವೋಚ್ಚ ನ್ಯಾಯಾಲಯಲದ ಆದೇಶದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಂಡ ಸುಮಾರು 4000 ಪ್ರಾಥಮಿಕ/ಪ್ರೌಡಶಾಲಾ ಶಿಕ್ಷಕರು 2003ರಲ್ಲಿ ಮರು ನೇಮಕಾತಿ ಹೊಂದಿದ್ದು, ಮರುನೇಮಕಾತಿ ಹೊಂದುವ ಪೂರ್ವದಲ್ಲಿ ಸಲ್ಲಿಸಿರುವ 4-5 ವರ್ಷಗಳ ಸೇವೆಯನ್ನು ಪರಿಗಣಿಸಿ  ಕಾಲ್ಪನಿಕವಾಗಿ ವೇತನ ನಿಗದಿಗೊಳಿಸುವುದು.  

• ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಬಡ್ತಿ ಪ್ರೌಢಶಾಲಾ ಸಹ ಶಿಕ್ಷಕರು ಹಾಗೂ ಬಡ್ತಿ ಉಪನ್ಯಾಸಕರು ಪದೋನ್ನತಿ ಹೊಂದಿದ ಕಾರಣ 10,15,20,25 ಮತ್ತು 30 ವರ್ಷಗಳ ಕಾಲಮಿತಿ ಬಡ್ತಿ ಸೌಲಭ್ಯದಿಂದ ವಂಚಿತರಾಗಿರುತ್ತಾರೆ. ಇದರಿಂದಾಗಿ ಬಡ್ತಿ ಪಡೆಯದೆ ಇರುವವರಿಗಿಂತ 2-3 ವಾರ್ಷಿಕ ಕಡಿಮೆ ವೇತನ ಬಡ್ತಿಗಳನ್ನು ವೇತನ ಪಡೆಯುತ್ತಿರುವುದು ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ದವಾಗಿದೆ. ಈ ವೇತನ ತಾರತಮ್ಯವನ್ನು ಸರಿಪಡಿಸುವುದು.

• ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆಯ ನೀತಿಯನ್ನು ಜಾರಿಗೆ ತರುವುದು.
ಹಾಗೂ ಅಂತರ ಜಿಲ್ಲಾ ವರ್ಗಾವಣೆ ಹೊಂದಲು ‘ಒಂದು ಬಾರಿಗೆ’ ವರ್ಗಾವಣೆ ಅವಕಾಶ ಕಲ್ಪಿಸುವುದು.
• ಬಿಡುವಿನ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡುವುದು ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ವೃಂದದಿ0ದ ಶಿಕ್ಷಣ ಸಂಯೋಜಕರ ಹುದ್ದೆಗೆ ನೇಮಿಸುವಾಗ ಸೇವಾ ಹಿರಿತವನ್ನು ಪರಿಗಣಿಸಿ ಜೇಷ್ಠತೆ ಆಧಾರದ ಮೇಲೆ ಈ ಹಿಂದಿನAತೆ  ಪರೀಕ್ಷೆ ಇಲ್ಲದೆ ನೇಮಿಸುವುದು.
• ಸುಮಾರು 40 ವರ್ಷಗಳಿಂದ ಪರಿಷ್ಕರಣೆಯಾಗದೆ ಬಾಕಿ ಇರುವ ಶಿಕ್ಷಣ ಇಲಾಖೆಯ ಎಲ್ಲಾ ವೃಂದಗಳನ್ನೊಳಗೊAಡAತೆ ಸಮಗ್ರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಕಾಲಮಿತಿಯೊಳಗೆ ರೂಪಿಸುವುದು.
• ದಿನಾಂಕ: 01-08-2008ರ ನಂತರ ನೇಮಕವಾದ 2008, 2010 ಮತ್ತು 2013ರ ಬ್ಯಾಚ್‌ನ ಪ್ರೌಢಶಾಲಾ ಶಿಕ್ಷಕರುಗಳಿಗೆ ಒಂದು ವಾರ್ಷಿಕ ವೇತನ ಬಡ್ತಿ ನೀಡಿ ವೇತನ ತಾರತಮ್ಯ ನಿವಾರಿಸುವುದು.
• ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಕಾಯ್ದೆಯನ್ನು ಜಾರಿಗೆ ತರುವುದು.
• ಪ್ರೌಢಶಾಲಾ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದಕ್ಕೆ ಪದೋನ್ನತಿ ನೀಡುವ ಪ್ರಕ್ರಿಯೆ ಸುಮಾರು 10 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಈಗಾಗಲೇ ಅಂತಿಮಗೊಳಿಸಿರುವ ಅರ್ಹ ಪ್ರೌಢಶಾಲಾ ಸಹ ಶಿಕ್ಷಕರ ಜ್ಯೇಷ್ಠತಾ ಪಟ್ಟಿಗೆ ಅನುಗುಣವಾಗಿ ಮುಂಬಡ್ತಿಗೆ ಕ್ರಮವಹಿಸುವುದು.
      ಈ ಮೇಲ್ಕಂಡ ಬೇಡಿಕೆ/ ಸಮಸ್ಯೆಗಳು 20 ವರ್ಷಗಳಿಂದ ಬಾಕಿ ಇದ್ದು, ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಸರ್ಕಾರಕ್ಕೆ ಹಲವಾರು ಬಾರಿ ಮನವಿಯನ್ನು ಸಲ್ಲಿಸಿರುವುದರ ಜೊತೆಗೆ, ಸರ್ಕಾರದ ಹಂತದಲ್ಲಿ ಹಲವಾರು ಬಾರಿ ಸಭೆಗಳಾಗಿದ್ದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಅಲ್ಲದೇ, ಯಾವೊಂದು ಬೇಡಿಕೆಯೂ ಈಡೇರಿರುವುದಿಲ್ಲ. ಈ ಸಂಬAಧವಾಗಿ  ಇಂದು ನಡೆದ  ಸಭೆಯಲ್ಲಿ  ಮೇಲ್ಕಂಡ ಬೇಡಿಕೆಗಳ ಬಗ್ಗೆ  ಸುದೀರ್ಘವಾಗಿ ಚರ್ಚಿಸಿ, ಸರ್ಕಾರವು 21 ದಿನಗಳ ಒಳಗಾಗಿ ಮೇಲ್ಕಂಡ ಬೇಡಿಕೆಗಳಿಗೆ ಪರಿಹಾರ/ನ್ಯಾಯ ದೊರಕಿಸಿಕೊಡದಿದ್ದ ಪಕ್ಷದಲ್ಲಿ ಅನಿವಾರ್ಯವಾಗಿ ರಾಜ್ಯಾದಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳನ್ನು ಬಹಿಷ್ಕರಿಸಿ ಹೋರಾಟ ಮಾಡಬೇಕೆಂಬ ತೀರ್ಮಾನವನ್ನು ಸಭೆಯಲ್ಲಿ ಭಾಗವಹಿಸಿದ ರಾಜ್ಯದ ಸುಮಾರು 5000 ಸಂಘದ ಪದಾಧಿಕಾರಿಗಳು, ಶಿಕ್ಷಕರನ್ನು ಪ್ರತಿನಿಧಿಸುವ ಎಲ್ಲಾ ಸಂಘಟನೆಗಳ ಉಪಸ್ಥಿತಿಯಲ್ಲಿ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಗಿದೆ.
-Varthajala, Bengaluru.

Post a Comment

0Comments

Post a Comment (0)