“ಡಾ|| ಸಂಗನಬಸವ ಮಹಾಸ್ವಾಮಿಗಳಿಗೆ ಶ್ರಧ್ಧ್ದಾಂಜಲಿ ಹಾಗು ನುಡಿನಮನ

varthajala
0

 ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದಲ್ಲಿ “ಡಾ||  ಸಂಗನಬಸವ ಮಹಾಸ್ವಾಮಿಗಳಿಗೆ ಶ್ರಧ್ಧ್ದಾಂಜಲಿ ಹಾಗು ನುಡಿನಮನ ಕಾರ್ಯಕ್ರಮ”

ಬಳ್ಳಾರಿ ನ 22. ಲಿಂಗೈಕ್ಯರಾದ ಪರಮಪೂಜ್ಯ ಜಗದ್ಗುರು ಡಾ||  ಸಂಗನಬಸವ ಮಹಾಸ್ವಾಮಿಗಳಿಗೆ ಶ್ರಧ್ಧ್ದಾಂಜಲಿ ಹಾಗು ನುಡಿನಮನ ಕಾರ್ಯಕ್ರಮವನ್ನು ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಡಾ|| ಟಿ. ಹನುಮಂತರೆಡ್ಡಿ, , ಉಪಪ್ರಾಂಶುಪಾಲರಾದ ಡಾ|| ಶ್ರೀಮತಿ ಸವಿತಾ ಸೋನಾಳಿ, ಡಾ||ಏ.ತಿಮ್ಮನಗೌಡರು, ಡಾ||ಬಿ.ದೊಡ್ಡ ಬಸವನÀಗೌಡರು, ಮಾತನಾಡಿ ಪೂಜ್ಯರು ಸಮಾಜದ ಶ್ರೇಯಸ್ಸಿಗೆ ಹಗಳಿರುಳು ಶ್ರಮಿಸಿದ ಕುರಿತು ಹೇಳುತ್ತಾ ಅವರು ಜೀವನವೇ ನಮಗೆಲ್ಲಾ ಆದರ್ಶ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲಾ ಮುನ್ನ ಡೆಯ ಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು. 

ಈ ನಾಡಿನ ನಡೆದಾಡುವ ದೇವರು, ತ್ರಿಕಾಲ ಲಿಂಗ ಪೂಜಾ ಅನುಷ್ಠಾನರು, ದಣಿವರಿಯದ ದಾಸೋಹಿ, ತ್ರಿಕಾಲ ಸಂಚಾರಿ, ಅಂಧ, ಅನಾಥ, ಬಡವ ಸಮಾಜೋದ್ದಾರಿ, ಲಕ್ಷಾಂತರ ಭಕ್ತರ ಭಾಗ್ಯನಿಧಿ, ಸಾವಯವ ಕೃಷಿ ಋಷಿ, ನಮ್ಮೆಲ್ಲರ ಆರಾಧ್ಯ ಗುರುವರ್ಯ ಹಂಪಿ-ಹೇಮಕೂಟ ಶೂನ್ಯ ಪೀಠ ಸಿಂಹಾಸನಾಧೀಶ್ವರ ಪೂಜ್ಯ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ಹೊಸಪೇಟೆ-ಬಳ್ಳಾರಿ/ ಡಾ.ಅಭಿನವ ಅನ್ನದಾನ ಮಹಾಸ್ವಾಮಿಗಳವರು,ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ ಪರಮ ಪೂಜ್ಯರು ಇಂದು 22/11/21 ಸೋಮವಾರ ಮುಂಜಾನೆ 5.50ಕ್ಕೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರೆAದು ತಿಳಿಸಲು ಅತ್ಯಂತ ದುಃಖದ ವಿಷಯವಾಗಿದೆ. ಇವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ. ಇವರ ಆತ್ಮಕ್ಕೆ ದೇವರು ಹಾಗೂ ಬಸವಾದಿ ಶರಣರು ಶಾಂತಿ ನೀಡಲಿ ಎಂದು ಪ್ರಾರ್ಥಿಸೋಣ. ಇವರ ಆಶೀರ್ವಾದ  ಸದಾ ನಮ್ಮೆಲ್ಲರ ಮೇಲೆ ಇರಲಿ ಎಂದರು. ಈಸಂದರ್ಭದಲ್ಲಿ  ಎಲ್ಲಾ ವಿಭಾಗಗಳ ಮುಖ್ಯಸ್ಥರು, ಮಹಾವಿದ್ಯಾಲಯದ ಶಿಕ್ಷಕ ವೃಂದದವರು, ವಿದ್ಯಾರ್ಥಿ ವೃಂದದವರು ಭಾಗವಹಿಸಿದ್ದರು.


Tags

Post a Comment

0Comments

Post a Comment (0)