ರೈತರ ಹೋರಾಟಕ್ಕೆ ಸಂದ ಐತಿಹಾಸಿಕ ಜಯ: ವಿದ್ಯಾರ್ಥಿಗಳಿಂದ ಕ್ರಾಂತಿಕಾರಿ ಶುಭಾಶಯ

varthajala
0

ಬಳ್ಳಾರಿ ನ 19. ಮಾನ್ಯ ಪ್ರಧಾನ ಮಂತ್ರಿಗಳು ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆದಿರುವ ಕುರಿತು ಘೋಷಣೆ ಮಾಡಿದ ನಂತರ AIDSOರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಈ ಕೆಳಗಿನ ಹೇಳಿಕೆ ನೀಡಿದ್ದಾರೆ.

" ದೇಶದ ರೈತರು ಮತ್ತು ಜನತೆಯ ಈ ಅಭೂತಪೂರ್ವ ವಿಜಯ ಭಾರತದ ಇತಿಹಾಸದಲ್ಲಿ ಮಾತ್ರವಲ್ಲ, ಪ್ರಪಂಚದ ಇತಿಹಾಸದಲ್ಲೇ ಅಜರಾಮರವಾಗಿ ಉಳಿಯಲಿದೆ!! ರೈತರ ಧೃಢ ಸಂಕಲ್ಪದೊAದಿಗೆ ಸತತವಾಗಿ ಒಂದು ವರ್ಷ ನಡೆದ ಈ ಹೋರಾಟದಲ್ಲಿ ದೇಶದ ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ - ಯುವಜನರು ಭಾಗಿಯಾಗಿ, ಬೆಂಬಲವಾಗಿ ನಿಂತಿದ್ದರು. ಈ ಒಗ್ಗಟ್ಟಿನ ಹೋರಾಟದ ಫಲವಾಗಿ ಇಂದು ಮಾನ್ಯ ಪ್ರಧಾನ ಮಂತ್ರಿಗಳು ಕೃಷಿ ಕಾಯ್ದೆಗಳನ್ನು ಹಿಂಪಡೆಯುವAತಾಗಿದೆ. ಈ ಧಿರೋದ್ದಾತ ಸಂಗ್ರಾಮದ ಸಮಯದಲ್ಲಿ ಹುತಾತ್ಮರಾದ 700 ಕ್ಕು ಹೆಚ್ಚು ರೈತರ ತ್ಯಾಗ ಮತ್ತು ಬಲಿದಾನವು ದೇಶದ ಜನರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ!

ಚಳುವಳಿ ಆರಂಭವಾದ ದಿನದಿಂದ ನಮ್ಮ ವಿದ್ಯಾರ್ಥಿ ಸಂಘಟನೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಂIಆSಔ) ರೈತ ಹೋರಾಟದ ಭಾಗವಾಗಿ ನಿಂತು, ' ದೇಶದ ವಿದ್ಯಾರ್ಥಿಗಳು ರೈತರೊಂದಿಗೆ ' ಎಂಬ ಘೋಷ ವಾಕ್ಯದೊಂದಿಗೆ ವಿದ್ಯಾರ್ಥಿಗಳನ್ನು ಸಂಘಟಿಸಿದೆ. ಈ ಹೋರಾಟದಲ್ಲಿ ಭಾಗಿಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಂIಆSಔ ರಾಜ್ಯ ಸಮಿತಿ ತನ್ನ ಕ್ರಾಂತಿಕಾರಿ ಅಭಿನಂದನೆಗಳನ್ನು ತಿಳಿಸುತ್ತದೆ.ಈ ಚಳುವಳಿಯು ನಮ್ಮೆಲ್ಲರಿಗೂ ಒಂದು ಪಾಠವನ್ನು ಕಲಿಸಿದೆ. ಸರಿಯಾದ ಮಾರ್ಗದಲ್ಲಿ, ಸರಿಯಾದ ವಿಚಾರದಡಿಯಲ್ಲಿ, ಪ್ರಜಾತಾಂತ್ರಿಕ ಹಕ್ಕುಗಳಿಗಾಗಿ ನಡೆಯುವ ನಿರಂತರ ಹೋರಾಟವನ್ನು ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ. ಒಂದು ವ್ಯವಸ್ಥೆ ಎಷ್ಟೇ ದಮನಕಾರಿ ಆಗಿದ್ದರೂ, ಶೋಷಿತರ ಹೋರಾಟದ ಕಿಚ್ಚನ್ನು ಅದು ನಂದಿಸಲು ಸಾಧ್ಯವಿಲ್ಲ ಎಂದು. ಮೂರು ಕರಾಳ ಕೃಷಿ ಕಾಯ್ದೆಗಳು ಲೋಕಸಭೆಯಲ್ಲಿ ರದ್ದಾಗುವವರೆಗೂ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇದ್ದು,  ಈ ಹಿಂದಿನAತೆ ಬೆಂಬಲಿಸಬೇಕು ಎಂದು ಂIಆSಔ ಕರೆ ನೀಡುತ್ತದೆ. ಇದರೊಂದಿಗೆ, ಎಲ್ಲ ಬೆಳೆಗಳಿಗೆ ಅಸಲಿ ವೆಚ್ಚದ ಮೇಲೆ ಶೇ. 50ರಷ್ಟು ಬೆಂಬಲ ಬೆಲೆ ನಿಗದಿಯನ್ನು ಖಾತ್ರಿ ಪಡಿಸಲು, ರೈತರ ಮೇಲಿನ ಸುಳ್ಳು ಆರೋಪಗಳನ್ನು ಹಿಂಪಡೆಯಲು ಹಾಗೂ ಹುತಾತ್ಮರಾದ ರೈತರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ನಡೆಯುತ್ತಿರುವ ಹೋರಾಟ ಮುಂದುವರೆಯುತ್ತದೆ.

ಇದರೊAದಿಗೆ, ಶಿಕ್ಷಣವನ್ನು ಮತ್ತಷ್ಟು ಖಾಸಗೀಕರಣಗೊಳಿಸುವ, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಭವಿಷ್ಯವನ್ನು ಮತ್ತಷ್ಟು ಬಿಕ್ಕಟ್ಟಿಗೆ ತಳ್ಳುವ, ಸಮಾಜದ ಒಟ್ಟಾರೆ ಪ್ರಗತಿಗೆ ಮಾರಕವಾಗುವ ಓಇP-2020 ರ ವಿರುಧ್ದ ಬಲಿಷ್ಠ ಚಳುವಳಿಯನ್ನು ಕಟ್ಟಲು ದೇಶದ ವಿದ್ಯಾರ್ಥಿಗಳು ರೈತರ ಅಮೋಘ ಹೋರಾಟದಿಂದ ಸ್ಫೂರ್ತಿಯನ್ನು ಹಾಗೂ ಪಾಠವನ್ನು ಕಲಿತು ಮುನ್ನಡೆಯಬೇಕು ಎಂದು  AIDSO ಎಲ್ಲಾ ವಿದ್ಯಾರ್ಥಿಗಳಿಗೆ ಕರೆ ನೀಡುತ್ತದೆ.


Tags

Post a Comment

0Comments

Post a Comment (0)