ಡಿವೈಎಫ್‌ಐ ಸಂಘಟನೆಯ ಉದ್ಘಾಟನಾ ಸಮಾರಂಭ

varthajala
0

 ಬಳ್ಳಾರಿ ತಾಲೂಕಿನ ರೂಪನಗುಡಿ ಗ್ರಾಮದಲ್ಲಿ ಡಿವೈಎಫ್‌ಐ ಸಂಘಟನೆಯ ಉದ್ಘಾಟನಾ ಸಮಾರಂಭ

ಬಳ್ಳಾರಿ ನ 15. ಬಳ್ಳಾರಿ ತಾಲೂಕಿನ ರೂಪನಗುಡಿ ಗ್ರಾಮದ (ಆಙಈI) ಸಂಘಟನೆಯನ್ನು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಚಂದ್ರಕುಮಾರಿ ಅವರು ಉದ್ಘಾಟನೆ ಮಾಡಿದರು. 


ಸಿಐಟಿಯುನ ಜಿಲ್ಲಾ ಕಾರ್ಯದರ್ಶಿ ಜೆ ಸತ್ಯ ಬಾಬು ಅವರು ಡಿವೈಎಫ್ಐ ಸಂಘಟನೆಯ ಗ್ರಾಮ ಘಟಕದ ಸಭೆಯನ್ನು ಉದ್ದೇಶಿಸಿ  ಮಾತನಡಿದ ಅವರು ನಿರುದ್ಯೋಗಿಗಳ ಪ್ರಮಾಣ ದಿನದಿಂದ ದಿನಕ್ಕೆ ಬೃಹದಾಕಾರವಾಗಿ ಬೆಳೆಯುತ್ತಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಕನಸು ಬಿತ್ತಿ ಅಧಿಕಾರಕ್ಕೆ ಬಂದ ಮೋದಿ ಸರಕಾರದ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣ ಸ್ವತಂತ್ರ ಭಾರತ ಯಾವತ್ತೂ ಕಂಡಿರದ ಮಟ್ಟಕ್ಕೆ ಏರಿಕೆಯಾಗಿ  ನಿರುದ್ಯೋಗಿಗಳ ದಂಡೇ ಕಂಡು ಬರುತ್ತಿದೆ. ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಕಾಲೇಜುಗಳಿಂದ ವಿವಿಧ ಪದವಿ ಪತ್ರ ಪಡೆದು ವಿದ್ಯಾರ್ಥಿಗಳು ಅರ್ಹ ಉದ್ಯೋಗಾಕಾಂಕ್ಷಿಗಳಾಗಿ ಪ್ರವಾಹೋಪಾದಿಯಲ್ಲಿ ಹೊರಬರುತ್ತಿದ್ದಾರೆ. 

ಆದರೆ ಅವರು ಪಡೆದ ಶಿಕ್ಷಣ, ಪದವಿಗೆ ತಕ್ಕುದಾದ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಬದಲಿಗೆ ಸರಕಾರಗಳ ತಪ್ಪಾದ ನೀತಿಗಳಿಂದಾಗಿ ಇರುವ ಉದ್ಯೋಗಗಳೂ ದಾಖಲೆ ಸಂಖ್ಯೆಯಲ್ಲಿ ನಾಶಹೊಂದುತ್ತಿವೆ. ಬ್ಯಾಂಕುಗಳ ವಿಲೀನ, ಸಾರ್ವಜನಿಕ ರಂಗದ ಉದ್ಯಮಗಳ ಮಾರಾಟ, ಬಂಡವಾಳ ಹಿಂದೆಗೆತ, ಸರಕಾರಿ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿ ಮಾಡದಿರುವಿಕೆ, ಗುತ್ತಿಗೆ, ಹೊರಗುತ್ತಿಗೆ ಪದ್ದತಿಗಳು, ಕಾರ್ಮಿಕ ಕಾಯ್ದೆಯ ತಿದ್ದುಪಡಿಗಳು, ಒಟ್ಟಾರೆ ಸರಕಾರದ ನೀತಿಗಳು ಉದ್ಯೋಗ ನಷ್ಟಕ್ಕೆ ಕಾರಣವಾಗಿ ದೇಶ ಭೀಕರ ನಿರುದ್ಯೋಗದ ದವಡೆಗೆ ಸಿಲುಕಿದೆ. ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ  ವ್ಯಕ್ತಪಡಿಸಿದರು 

ಈ ಸಂದರ್ಭದಲ್ಲಿ ಡಿವೈಎಫ್ಐ ಸಂಘಟನೆಯ ಜಿಲ್ಲಾ ಮುಖಂಡ ಯು ಎರ್ರಿಸ್ವಾಮಿ ತಾಲೂಕ ಅಧ್ಯಕ್ಷರಾದ  ಶಂಕರಗೌಡ  ರೂಪನಗುಡಿ ಮುಖಂಡರಾದ ಬಿ ರಾಮಾಂಜನಿ ರೂಪನಗುಡಿ ಗ್ರಾಮ ಪಂಚಾಯಿತಿ ಸದಸ್ಯ ನಿಂಗಪ್ಪ ಗ್ರಾಮ ಪಂಚಾಯತ್ ಸದಸ್ಯ ಶಿವಶಂಕರ್ ಚಂದ್ರ ಸ್ವಾಮಿ ಮೊಹಮ್ಮದ್ ರಫೀಕ್ ರಾಮಾಂಜಿನಿ  ತಾಲೂಕು ಸಹಕಾರ್ಯದರ್ಶಿ ಬೈಲಾ ಹನುಮಂತ ಅಂಗನವಾಡಿ ನೌಕರರ ಸಂಘದ ಕಿರಣ್ ಕುಮಾರಿ ಡಿವೈಎಫ್ಐ ಸಂಘದ ಮುಖಂಡ ಪಿ ಲೋಕೇಶ್ ವೈ ಕಗ್ಗಲ್ ತಿಪ್ಪಯ್ಯ ಇನ್ನು ಮುಂತಾದವರು ಉಪಸ್ಥಿತರಿದ್ದರು.


Tags

Post a Comment

0Comments

Post a Comment (0)