ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿಂತಾಮಣಿ ಎಲ್ಲಾ ವಿದ್ಯಾರ್ಥಿಗಳಿಗೂ ಬಸ್ಸುಗಳ ಕೊರತೆ ಇರುವುದು ಕಂಡುಬಂದು ವಿದ್ಯಾರ್ಥಿಗಳಿಗೆ ಗ್ರಾಮಾಂತರ ಪ್ರದೇಶಗಳಿಗೆ ಬಸ್ ನಿರ್ವಹಣೆ ಸರಿಯಾದ ಸಮಯಕ್ಕೆ ಬರುತ್ತಿಲ್ಲವೆಂದು ಡಿಪೋ ಮ್ಯಾನೇಜರ್ ಆದ ಅಪ್ಪಿ ರೆಡ್ಡಿರವರ ಮೇಲೆ ಆರೋಪಗಳ ಸುರಿಮಳೆ ಹರಿಸಿರುತ್ತಾರೆ
ತನಕಲ್ ಬಸ್ಸು ಸುಮಾರು ದಿವಸದಿಂದ ಬರುತ್ತಿಲ್ಲವೆಂದು ಚೇಳೂರು ಮತ್ತು ಚಾಕವೇಲು ನಾರಾಯಣ ಪಲ್ಲಿ ಮತ್ತು ರಾಶ್ಚರುವು ಪಂಚಾಯಿತಿಯ ಹಿರಿಯ ನಾಗರಿಕರು ಜನಸಾಮಾನ್ಯರು ಹಿಡಿಶಾಪ ಹಾಕುತ್ತಿದ್ದಾರೆ ಬೆಂಗಳೂರಿನಿಂದ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ತುಂಬಾ ತಲೆ ನೋವಾಗಿದೆ ಮತ್ತು ಬೆಂಗಳೂರಿನಿಂದ ನಾರಾಯಣ ಪಲ್ಲಿ ರೂಟ್ ನಂಬರ್ 23 ಒಳ್ಳೆಯ ಕಲೆಕ್ಷನ್ ಇದ್ದರು ಕಳಪೆ ಗಾಡಿಗಳನ್ನು ಕಳುಹಿಸಿ ಎಲ್ಲಂದರೆ ಅಲ್ಲಿ ನಿಲ್ಲುವಂತಹ ಬಸ್ಸುಗಳನ್ನು ಓಡಿಸಿ ಸರಿಯಾದ ಸಮಯಕ್ಕೆ ತಲುಪದೇ ತಲೆನೋವಾಗಿದೆ 27ರಂದು ಬಸ್ಸು ಕೆಟ್ಟುನಿಂತು ಬೆಂಗಳೂರಿನ ಪ್ರಯಾಣಿಕರಿಗೆ ಬಸ್ಸೇ ಇಲ್ಲದಂತಾಗಿದೆ.
ಚೇಳೂರಿನ ಕೆಲವು ಖಾಸಗಿ ಬಸ್ ಮಾಲೀಕರ ಜೊತೆ ಶಾಮೀಲಾಗಿದ್ದಾರೆಂದು ಜನಸಾಮಾನ್ಯರು ಆರೋಪಿಸುತ್ತಿದ್ದಾರೆ ಚಿಂತಾಮಣಿಯಲ್ಲಿ ಖಾಸಗಿ ಬಸ್ಸುಗಳು ಬಿಟ್ಟಮೇಲೆ ನಾರಾಯಣ ಪಲ್ಲಿ ಗಾಡಿ ಬಿಡುಸುತ್ತಿದ್ದಾರೆಂದು ಪ್ರಯಾಣಿಕರು ತಮ್ಮ ಅಳಲನ್ನು ತೋಡಿಕೊಂಡಿರುತ್ತಾರೆ.
ಇವರ ನಡೆ ಇದೇ ರೀತಿ ಮುಂದುವರೆದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಇವರ ಮೇಲೆ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಲು ಆಗ್ರಹಿಸಬೇಕಾಗುತ್ತದೆ ಎಂದು ಪತ್ರಿಕಾ ಹೇಳಿಕೆ ನೀಡಿರುತ್ತಾರೆ.