ವಾಹನ ಚಾಲನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಕೊಡಬೇಡಿ

varthajala
0

 ವಾಹನ ಸವಾರರೆ ಮಳೆಗಾಲದಲ್ಲಿ ನೀವು ಸಂಚರಿಸುವ ರಸ್ತೆಯಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ 

ನಿಮ್ಮ ವೇಗವಾದ ವಾಹನ ಚಾಲನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಕೊಡಬೇಡಿ

ಬಳ್ಳಾರಿ ನ 22.ನಗರ,ಪಟ್ಟಣಗಳಿಗೆ ಸುತ್ತಮುತ್ತಲಿನ ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬರುವುದು ಸಹಜ. ಮಕ್ಕಳು ದಿನಾಲೂ ಬೆಳಿಗ್ಗೆ 6ಗಂಟೆಯಿ0ದ ಸುಮಾರು 8ಗಂಟೆವರೆಗೂ ಮನೆಯಲ್ಲಿ ರೆಡಿ ಆಗಿ ಬಂದು ಗೇಟ್ ಹತ್ತಿರ ಬಸ್ಸಿಗಾಗಿ ಕಾದುಕೊಂಡು ಕುಳಿತಿರುತ್ತಾರೆ, 

ತದನಂತರ ಸಮಯಕ್ಕೆ ಬಸ್ ಬಾರದೆ ಇರುವ ಕಾರಣ ಮತ್ತು ಶಾಲಾ ಸಮಯ ಮೀರುತ್ತೆ ಎನ್ನುವ ಟೇನ್ಸನ್ ಪ್ರತಿಯೊಬ್ಬ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಲ್ಲಿ ಇರುತ್ತೆ. ಇಂತಹ ಸಮಯದಲ್ಲಿ ಮಕ್ಕಳು ಶಾಲೆಗೆ ಹೋಗಲು ಅವಸರದ ಸಮಯದಲ್ಲಿ ರಸ್ತೆಯನ್ನು ದಾಟುವ ವೇಳೆಯಲ್ಲಿ,ರಸ್ತೆಯ ಫುಟ್‌ಪಾತ್ ಮೇಲೆ ಹೋಗುವ ಸಮಯದಲ್ಲಿ, ಕೆಲವೊಂದು ರಸ್ತೆಗಳಲ್ಲಿ ಮಳೆಗಾಲದಲ್ಲಿ ನೀರು ನಿಂತಿರುತ್ತವೆ. ರಸ್ತೆಯನ್ನು ದಾಟುವ ಸರಿಯಾದ ಸಮಯದಲ್ಲಿ ಕೆಲವೊಂದು ಕಾರ್,ಬಸ್,ಲಾರಿ,ದ್ವಿಚಕ್ರವಾಹನ ಮತ್ತು ಇನ್ನಿತರ ಯಾವುದೇ ವಾಹನದರರು ಇರಲಿ ಅವರು ಹೋಗುವ ಸ್ಪೀಡ್ ನಲ್ಲಿ ಮಕ್ಕಳನ್ನು ಗಮನಿಸದೆ ವೇಗವಾಗಿ ಹೋಗಿಬಿಡುತ್ತಾರೆ.

 ಆದರೆ ಪಕ್ಕದಲ್ಲಿ ನಿಂತಿರುವ,ಹೋಗುತ್ತಿರುವ ಮಕ್ಕಳ ಯೂನಿಫಾರ್ಮ್ ಮೇಲೆ ಕೆಸರಿನ ನೀರು ಬಿದ್ದುಬಿಡುತ್ತೆ.  ಅವರು ಹೋಗುವ ಸ್ಪೀಡ್‌ಗೆ ರಸ್ತೆ ಮೇಲಿನ ನೀರು ಶಾಲಾ ಮಕ್ಕಳ ಮೈ ಮೇಲೆ ಬೀಳುವಂತೆ ಆಗುತ್ತಿದೆ. ಅದು ಅವರಿಗೆ ತುಂಬಾ ತೊಂದರೆ ಆಗುತ್ತದೆ, ಶಾಲೆಯ ಯೂನಿಫಾರಂ ಹಾಳಾಗುತ್ತೆ. ನೀವು ನಿಮ್ಮ ಅವಸರಕ್ಕೆ ವೇಗವಾಗಿ ಹೋಗುತ್ತೀರಾ ಆದರೆ ಆ ಮಕ್ಕಳ ಬಟ್ಟೆ ಮೇಲೆ ಕೆಸರುನೀರು ಬಿದ್ದು ಬಟ್ಟೆಗಳು ಹೊಲಸು ಆಗುತ್ತವೆ. ನೀವು ಮಾಡಿರುವ ಕೆಲಸಕ್ಕೆ ಅವರು ಪುನಃ ಮನೆಗೆ ಹೋಗಿ ಬಟ್ಟೆ ಬದಲಾಯಿಸುವ ಸಮಯ ಅವರಲ್ಲಿ ಇರುವುದಿಲ್ಲ, ನಿಮ್ಮಿಂದ ಅವರ ಜೀವನಕ್ಕೆ ತೊಂದರೆ ಮಾಡಬೇಡಿ. ದಯವಿಟ್ಟು ನೀವು ಓಡಿಸುವ ಗಾಡಿ ಎದುರು ಶಾಲಾ ಮಕ್ಕಳನ್ನು,ಬೇರೆ ಯಾರಾದರೂ ಇದ್ದರೇ ಗಮನಿಸಿ ವಾಹನ ಚಾಲನೆ ಮಾಡಿ. ಇದರಲ್ಲಿ ನಮ್ಮ ನಿಮ್ಮ ಮಕ್ಕಳು ಯಾರಾದರೂ ಇರಬಹುದು ಮತ್ತು ಕೆಲವೊಂದು ಬಡವರ ಮಕ್ಕಳು ಕಷ್ಟಪಟ್ಟು ಶಾಲೆಗೆ ಹೋಗುತಿರುತ್ತಾರೆ, ಅಂತವರ ಜೀವನಕ್ಕೆ ನೀವು ತೊಂದರೆ ಕೊಡಬೇಡಿ ಎಂದು ಮನವಿ.

-ಪಂಪನಗೌಡ.ಬಿ.


Tags

Post a Comment

0Comments

Post a Comment (0)